AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ದೀಪಾವಳಿ ಗಿಫ್ಟ್; ತುಟ್ಟಿಭತ್ಯೆ ಶೇ. 60ರಿಂದ 63ಕ್ಕೆ ಏರಿಕೆ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (DA) ಹಾಗೂ ತುಟ್ಟಿ ಪರಿಹಾರವನ್ನು (DR) ಶೇ. 3ರಷ್ಟು ಹೆಚ್ಚಿಸಲಾಗಿದೆ. ಈ ನಿರ್ಧಾರದಿಂದ ಮೂಲ ವೇತನದ ಮೇಲಿನ ಡಿಎ ಶೇ. 60ರಿಂದ ಶೇ. 63ಕ್ಕೆ ಏರಿಕೆಯಾಗಲಿದೆ. ಜನವರಿಯಿಂದ ಜೂನ್​ವರೆಗಿನ ಅರ್ಧವರ್ಷಕ್ಕೆ ಡಿಎ ಶೇ. 2ರಷ್ಟು ಏರಿಸಲಾಗಿತ್ತು. ಈಗ ಜುಲೈನಿಂದ ಡಿಸೆಂಬರ್​ವರೆಗೆ ಡಿಎ ಅನ್ನು ಶೇ. 3ರಷ್ಟು ಹೆಚ್ಚಿಸಲಾಗಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ದೀಪಾವಳಿ ಗಿಫ್ಟ್; ತುಟ್ಟಿಭತ್ಯೆ ಶೇ. 60ರಿಂದ 63ಕ್ಕೆ ಏರಿಕೆ
ಹಣImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 28, 2026 | 4:34 PM

Share

ನವದೆಹಲಿ, ಅಕ್ಟೋಬರ್ 28: ದೀಪಾವಳಿ ಹಬ್ಬದ ಸಮೀಪದಲ್ಲೇ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸಚಿವ ಸಂಪುಟವು ಭರ್ಜರಿ ಸಿಹಿಸುದ್ದಿ ನೀಡಿದೆ. 2026ರ ಜುಲೈನಿಂದ ಆರಂಭವಾಗಿ ಆರು ತಿಂಗಳ ಅವಧಿಗೆ ಅನ್ವಯವಾಗುವಂತೆ ತುಟ್ಟಿಭತ್ಯೆಯಲ್ಲಿ (DA- Dearness Allowance) ಶೇ. 3ರಷ್ಟು ಹೆಚ್ಚಳ ಮಾಡಲು ಸಂಪುಟ ಸಭೆ ಅನುಮೋದನೆ ನೀಡಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಕ್ಯಾಬಿನೆಟ್ ಸಭೆ ಬಳಿಕ ತುಟ್ಟಿಭತ್ಯೆ ಏರಿಕೆಯಾಗಿರುವ ನಿರ್ಧಾರವನ್ನು ಘೋಷಿಸಿದರು.

ಕೇಂದ್ರ ಸರ್ಕಾರದ ಈ ಹೊಸ ನಿರ್ಧಾರದಿಂದಾಗಿ ನೌಕರರ ತುಟ್ಟಿಭತ್ಯೆಯು ಮೂಲ ವೇತನದ (Basic Pay) ಶೇ. 60ರಿಂದ ಶೇ. 63ಕ್ಕೆ ಏರಿಕೆಯಾಗಿದೆ. ಇದೇ ರೀತಿ ಪಿಂಚಣಿದಾರರಿಗೆ ನೀಡಲಾಗುವ ತುಟ್ಟಿ ಪರಿಹಾರದಲ್ಲೂ (DR – Dearness Relief) ಅನುರೂಪವಾದ ಹೆಚ್ಚಳವಾಗಲಿದೆ. ಈ ತುಟ್ಟಿಭತ್ಯೆ ಏರಿಕೆಯಿಂದ ಸರ್ಕಾರಕ್ಕೆ ಹೆಚ್ಚುವರಿಯಾಗಿ 10,016 ಕೋಟಿ ರೂ ವ್ಯಯವಾಗಲಿದೆ.

ಈ ಪರಿಷ್ಕೃತ ತುಟ್ಟಿಭತ್ಯೆಯು 2026ರ ಜುಲೈ 1ರಿಂದ ಜಾರಿಗೆ ಬರುವಂತೆ ಅನ್ವಯಿಸಲಿದೆ. ನವೆಂಬರ್​ನಲ್ಲಿ ಸಿಗುವ ಅಕ್ಟೋಬರ್ ತಿಂಗಳ ಸಂಬಳದಲ್ಲಿ ಅರಿಯರ್ಸ್ ಸಮೇತ ತುಟ್ಟಿಭತ್ಯೆ ಹಣ ಸಿಗಲಿದೆ. ಅಂದರೆ, ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್, ಈ ನಾಲ್ಕು ತಿಂಗಳಿಗೆ ಹೊಸ ತುಟ್ಟಿಭತ್ಯೆ ದರ ಅನ್ವಯ ಆಗಲಿದೆ. ಇದು ಮುಂದಿನ ತುಟ್ಟಿಭತ್ಯೆ ಏರಿಕೆಯವರೆಗೂ ಮುಂದುವರಿಯುತ್ತದೆ. ಇದರಿಂದ ದೇಶಾದ್ಯಂತ ಇರುವ ಕೋಟ್ಯಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಆರ್ಥಿಕ ನೆಮ್ಮದಿ ಸಿಗಲಿದೆ.

ಇದನ್ನೂ ಓದಿ: ನವೆಂಬರ್ ತಿಂಗಳಲ್ಲಿ ದೀಪಾವಳಿ, ಕನಕದಾಸ ಜಯಂತಿ ಇತ್ಯಾದಿ ಹಬ್ಬ ಹರಿದಿನ; 15 ದಿನಗಳವರೆಗೆ ಬ್ಯಾಂಕ್ ರಜೆ

ಸಂಬಳದ ಜೊತೆಗೆ ತುಟ್ಟಿಭತ್ಯೆ ಯಾಕೆ?

ಕಾರ್ಮಿಕರಿಗೆ ಅವರ ಅನುಭವ ಹಾಗೂ ಕ್ಷಮತೆ ಏರಿಕೆಗೆ ಪ್ರತಿಯಾಗಿ ಸಂಬಳ ಹೆಚ್ಚಿಸಲಾಗುತ್ತದೆ. ಆದರೆ, ಹಣದುಬ್ಬರದ ಪರಿಣಾಮವಾಗಿ ಸಂಬಳದ ಹಣದ ಖರೀದಿ ಶಕ್ತಿ ಕ್ಷೀಣಿಸುತ್ತಾ ಹೋಗುತ್ತದೆ. ಈ ಹಣದುಬ್ಬರದ ಪ್ರಭಾವ ತಗ್ಗಿಸಲು ಸರ್ಕಾರಿ ನೌಕರರಿಗೆ ವರ್ಷದಲ್ಲಿ ಎರಡು ಬಾರಿ ತುಟ್ಟಿಭತ್ಯೆ ನೀಡಲಾಗುತ್ತದೆ. ಹಣದುಬ್ಬರ ದರದ ಆಧಾರದ ಮೇಲೆ ತುಟ್ಟಿಭತ್ಯೆ ಎಷ್ಟು ಏರಿಸಬೇಕೆಂದು ನಿರ್ಧರಿಸಲಾಗುತ್ತದೆ. ಜನವರಿಯಿಂದ ಜೂನ್​ವರೆಗೆ ಮತ್ತು ಜುಲೈನಿಂದ ಡಿಸೆಂಬರ್​ವರೆಗೆ ಹೀಗೆ ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಪರಿಷ್ಕರಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬೆಂಗಳೂರು ಕ್ಲೀನಿಂಗ್​ಗೆ ಹೊಸ ಯೋಜನೆ ಘೋಷಿಸಿದ ಸಚಿವ ಕೃಷ್ಣಬೈರೇಗೌಡ
ಬೆಂಗಳೂರು ಕ್ಲೀನಿಂಗ್​ಗೆ ಹೊಸ ಯೋಜನೆ ಘೋಷಿಸಿದ ಸಚಿವ ಕೃಷ್ಣಬೈರೇಗೌಡ
ಬಳ್ಳಾರಿಯ ಹೋಟೆಲ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ
ಬಳ್ಳಾರಿಯ ಹೋಟೆಲ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ
ಫ್ರೀ ಟೀ-ಕಾಫಿಗಾಗಿ ಬೇಕರಿ ಒಡತಿಗೆ ಜೀವ ಬೆದರಿಕೆ!
ಫ್ರೀ ಟೀ-ಕಾಫಿಗಾಗಿ ಬೇಕರಿ ಒಡತಿಗೆ ಜೀವ ಬೆದರಿಕೆ!
ಬರದಿಂದ ತತ್ತರಿಸಿದ್ದ ಬೆಂಗಳೂರು ದಕ್ಷಿಣದಲ್ಲಿ ವರುಣ ಕೃಪೆ: ಕೆರೆಗಳು ಫುಲ್!
ಬರದಿಂದ ತತ್ತರಿಸಿದ್ದ ಬೆಂಗಳೂರು ದಕ್ಷಿಣದಲ್ಲಿ ವರುಣ ಕೃಪೆ: ಕೆರೆಗಳು ಫುಲ್!
'ಮತದಾರರ ತೀರ್ಪನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತೇವೆ': ಸಿಎಂ ಡಿಕೆಶಿ
'ಮತದಾರರ ತೀರ್ಪನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತೇವೆ': ಸಿಎಂ ಡಿಕೆಶಿ
'ಪ್ರಜ್ವಲ್​​ ರೇವಣ್ಣ ಸಿ.ಡಿ ತಂದುಕೊಟ್ಟಿದ್ದೇ ಕುಮಾರಸ್ವಾಮಿಯಂತೆ'
'ಪ್ರಜ್ವಲ್​​ ರೇವಣ್ಣ ಸಿ.ಡಿ ತಂದುಕೊಟ್ಟಿದ್ದೇ ಕುಮಾರಸ್ವಾಮಿಯಂತೆ'
ಬಿಜೆಪಿ-ಜೆಡಿಎಸ್​​ ಒಂದಾಗಿರುವ ಕಾರಣ ಅವರ ಶಕ್ತಿ ಹೆಚ್ಚಿದೆ: ಸತೀಶ್​​
ಬಿಜೆಪಿ-ಜೆಡಿಎಸ್​​ ಒಂದಾಗಿರುವ ಕಾರಣ ಅವರ ಶಕ್ತಿ ಹೆಚ್ಚಿದೆ: ಸತೀಶ್​​
ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಪಲ್ಸರ್ ಬೈಕ್!
ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಪಲ್ಸರ್ ಬೈಕ್!
ಸೌಜನ್ಯ ಪ್ರಕರಣ ಮರುತನಿಖೆ: ಸಿಎಂ ಡಿಕೆಶಿ ಭೇಟಿಯಾದ ಎಸ್‌ಐಟಿ ಮುಖ್ಯಸ್ಥ
ಸೌಜನ್ಯ ಪ್ರಕರಣ ಮರುತನಿಖೆ: ಸಿಎಂ ಡಿಕೆಶಿ ಭೇಟಿಯಾದ ಎಸ್‌ಐಟಿ ಮುಖ್ಯಸ್ಥ
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ವ್ಹೀಲ್ ಚೇರ್‌ನಲ್ಲಿ ಕಸ ಸಾಗಾಟ!
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ವ್ಹೀಲ್ ಚೇರ್‌ನಲ್ಲಿ ಕಸ ಸಾಗಾಟ!