
ಆನ್‌ಲೈನ್ ಶಾಪಿಂಗ್ ಪ್ರಿಯರು ಬಹಳ ದಿನಗಳಿಂದ ಕಾಯುತ್ತಿದ್ದ ಫ್ಲಿಪ್‌ಕಾರ್ಟ್‌ನ (Flipkart) ಬಿಗ್ ಬಿಲಿಯನ್ ಡೇಸ್ 2026 ಸೇಲ್‌ಗೆ ದಿನಾಂಕ ಘೋಷಣೆಯಾಗಿದೆ. ಈ ಬಾರಿ ಅಕ್ಟೋಬರ್ 9ರಿಂದ ಸೇಲ್ ಆರಂಭವಾಗಲಿದೆ. ವಿಶೇಷ ಸದಸ್ಯರಿಗೆ ಒಂದು ದಿನ ಮುಂಚಿತವಾಗಿಯೇ ಶಾಪಿಂಗ್ ಮಾಡುವ ಅವಕಾಶ ಸಿಗಲಿದೆ. ಎಲೆಕ್ಟ್ರಾನಿಕ್ಸ್ ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ರಿಯಾಯಿತಿ, ಬ್ಯಾಂಕ್ ಆಫರ್ ಹಾಗೂ ಕ್ಯಾಶ್‌ಬ್ಯಾಕ್ ಸಿಗುವ ನಿರೀಕ್ಷೆಯಿದೆ.
ಫ್ಲಿಪ್‌ಕಾರ್ಟ್ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಬಿಗ್ ಬಿಲಿಯನ್ ಡೇಸ್ ಸೇಲ್ ಅಕ್ಟೋಬರ್ 9ರಿಂದ ಆರಂಭವಾಗಲಿದೆ. ಆದರೆ ಫ್ಲಿಪ್‌ಕಾರ್ಟ್ ಪ್ಲಸ್ ಮತ್ತು ಫ್ಲಿಪ್‌ಕಾರ್ಟ್ ಬ್ಲ್ಯಾಕ್ ಸದಸ್ಯರು ಹಾಗೂ ಫ್ಲಿಪ್‌ಕಾರ್ಟ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಅಕ್ಟೋಬರ್ 8ರಿಂದಲೇ ಆರಂಭಿಕ ಪ್ರವೇಶ (Early Access) ಸಿಗಲಿದೆ. ಅಂದರೆ, ಇತರ ಗ್ರಾಹಕರಿಗಿಂತ ಒಂದು ದಿನ ಮುಂಚಿತವಾಗಿ ಈ ಸದಸ್ಯರು ಸೇಲ್‌ನಲ್ಲಿ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.
ಈ ಬಾರಿಯ ಸೇಲ್‌ನಲ್ಲಿ ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಮೂಲಕ ಪಾವತಿ ಮಾಡುವ ಗ್ರಾಹಕರಿಗೆ ಶೇಕಡ 10ರ ವರೆಗೆ ತಕ್ಷಣದ ರಿಯಾಯಿತಿ ಸಿಗಲಿದೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ. ಇದರ ಜತೆಗೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇಕಡ 10ರಷ್ಟು ಉಳಿತಾಯದ ಅವಕಾಶವೂ ಇರಲಿದೆ.
ಆದರೆ ಯಾವ ಉತ್ಪನ್ನಕ್ಕೆ ಎಷ್ಟು ಗರಿಷ್ಠ ರಿಯಾಯಿತಿ ಸಿಗಲಿದೆ, ಕನಿಷ್ಠ ಖರೀದಿ ಮೊತ್ತ ಎಷ್ಟು ಇರಬೇಕು ಅಥವಾ ಯಾವ ಕಾರ್ಡ್‌ಗೆ ಯಾವ ನಿಯಮ ಅನ್ವಯಿಸುತ್ತದೆ ಎಂಬ ಸಂಪೂರ್ಣ ವಿವರಗಳನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ. ಸೇಲ್ ಸಮೀಪಿಸುತ್ತಿದ್ದಂತೆ ಈ ಬಗ್ಗೆ ಹೆಚ್ಚಿನ ಮಾಹಿತಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಫ್ಲಿಪ್‌ಕಾರ್ಟ್‌ನ ಪಾವತಿ ಸೇವೆ ಸೂಪರ್ ಮನಿ ಮೂಲಕ ಮೊದಲ ವಹಿವಾಟು ಮಾಡುವ ಗ್ರಾಹಕರಿಗೆ ಶೇಕಡ 10ರಷ್ಟು ಕ್ಯಾಶ್‌ಬ್ಯಾಕ್ ಸಿಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಗ್ರಾಹಕರು ಯುಪಿಐ ಸೇರಿದಂತೆ ಇತರ ಪಾವತಿ ವಿಧಾನಗಳ ಮೂಲಕವೂ ಹಣ ಪಾವತಿಸಬಹುದು.
ಯುಪಿಐಗೆ ಎಂಡಿಆರ್: ಉಚಿತ ಟ್ರಾನ್ಸಾಕ್ಷನ್ಗಳ್ಯಾವುವು, ಶುಲ್ಕ ಇರುವಂಥವು ಯಾವುವು? ಇಲ್ಲಿದೆ ಡೀಟೇಲ್ಸ್
ಈ ಬಾರಿ ಬಿಗ್ ಬಿಲಿಯನ್ ಡೇಸ್‌ನಲ್ಲಿ ಹಲವು ವಿಶೇಷ ಸೇಲ್ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ. ಪ್ರೈಸ್ ಕ್ರ್ಯಾಶ್, ಬಿಬಿಡಿ ಸ್ಪೆಷಲ್ಸ್, ಟಿಕ್ ಟಾಕ್ ಡೀಲ್ಸ್, ಬ್ರ್ಯಾಂಡ್ ಅವರ್ಸ್, ಡಬಲ್ ಡಿಸ್ಕೌಂಟ್ ಮತ್ತು ರಶ್ ಅವರ್ಸ್ ಮುಂತಾದ ಕೊಡುಗೆಗಳು ಇರಲಿವೆ. ಈ ಎಲ್ಲಾ ವಿಭಾಗಗಳ ಸಂಪೂರ್ಣ ವಿವರಗಳು ಇನ್ನೂ ಬಿಡುಗಡೆಯಾಗಿಲ್ಲ.
ಬಿಗ್ ಬಿಲಿಯನ್ ಡೇಸ್ ಸಂದರ್ಭದಲ್ಲಿ ವಿವಿಧ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಆಕರ್ಷಕ ಡೀಲ್‌ಗಳು ಸಿಗುವ ನಿರೀಕ್ಷೆಯಿದೆ. ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಟ್ರೂ ವೈರ್‌ಲೆಸ್ ಸ್ಟೀರಿಯೊ (TWS) ಇಯರ್‌ಬಡ್ಸ್, ವಾಷಿಂಗ್ ಮೆಷಿನ್, ಸ್ಮಾರ್ಟ್ ಹೋಮ್ ಉಪಕರಣಗಳು, ಫ್ರಿಜ್ ಮತ್ತು ಸ್ಮಾರ್ಟ್‌ವಾಚ್‌ಗಳಂತಹ ಉತ್ಪನ್ನಗಳು ಈ ಪಟ್ಟಿಯಲ್ಲಿವೆ. ಆದರೆ ಈ ಉತ್ಪನ್ನಗಳ ನಿಖರ ಬೆಲೆ, ಎಷ್ಟು ರಿಯಾಯಿತಿ ಸಿಗಲಿದೆ ಮತ್ತು ಯಾವ ಮಾದರಿಗಳ ಮೇಲೆ ವಿಶೇಷ ಆಫರ್ ಇರಲಿದೆ ಎಂಬುದನ್ನು ಫ್ಲಿಪ್‌ಕಾರ್ಟ್ ಇನ್ನೂ ಬಹಿರಂಗಪಡಿಸಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ