ಎಫ್​ಎಸ್​ಆರ್ ಗ್ಲೋಬಲ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ವೇತಾ ರವಿಕುಮಾರ್​ಗೆ ‘ಎನರ್ಜಿ ಇನ್​ಸ್ಟಿಟ್ಯೂಟ್ ಫೆಲೋ’ ಗೌರವ

Shweta Ravi Kumar Named Energy Institute Fellow: ಹೈದರಾಬಾದ್ ಮೂಲದ ಎಫ್‌ಎಸ್‌ಆರ್ ಗ್ಲೋಬಲ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಶ್ವೇತಾ ರವಿ ಕುಮಾರ್ ಅವರು ಪ್ರತಿಷ್ಠಿತ 'ಎನರ್ಜಿ ಇನ್‌ಸ್ಟಿಟ್ಯೂಟ್' ಫೆಲೋ ಆಗಿ ಆಯ್ಕೆಯಾಗಿದ್ದಾರೆ. ಇಂಧನ ಕ್ಷೇತ್ರದಲ್ಲಿ ಅವರ ಮಹತ್ವದ ಸಾಧನೆಗಾಗಿ ಈ ಗೌರವ ಸಂದಿದೆ. ಅವರು ಕೇಂದ್ರ ವಿದ್ಯುತ್ ಸಚಿವಾಲಯದ 'ಇಂಡಿಯಾ ಎನರ್ಜಿ ಸ್ಟಾಕ್' ಕಾರ್ಯಕ್ರಮದ ನಿರ್ದೇಶಕಿ ಮತ್ತು ರಾಷ್ಟ್ರೀಯ ಕಾರ್ಯಪಡೆಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ, ಭಾರತದ ಇಂಧನ ಪರಿವರ್ತನೆಗೆ ಕೊಡುಗೆ ನೀಡುತ್ತಿದ್ದಾರೆ.

ಎಫ್​ಎಸ್​ಆರ್ ಗ್ಲೋಬಲ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ವೇತಾ ರವಿಕುಮಾರ್​ಗೆ ‘ಎನರ್ಜಿ ಇನ್​ಸ್ಟಿಟ್ಯೂಟ್ ಫೆಲೋ’ ಗೌರವ
ಶ್ವೇತಾ ರವಿ ಕುಮಾರ್ ಮತ್ತಿತರರು...
Image Credit source: https://www.linkedin.com/in/swethark22

Updated on: May 10, 2026 | 5:39 PM

ಹೈದರಾಬಾದ್, ಮೇ 10: ಎಫ್‌ಎಸ್‌ಆರ್ ಗ್ಲೋಬಲ್ (FSR Global) ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಹಾಗೂ ಹೈದರಾಬಾದ್ ಮೂಲದವರಾದ ಶ್ವೇತಾ ರವಿ ಕುಮಾರ್ ಅವರು ಪ್ರತಿಷ್ಠಿತ ‘ಎನರ್ಜಿ ಇನ್‌ಸ್ಟಿಟ್ಯೂಟ್’ನ ಫೆಲೋ ಆಗಿ ಆಯ್ಕೆಯಾಗಿದ್ದಾರೆ. ಇಂಧನ ಕ್ಷೇತ್ರದಲ್ಲಿ ಅವರು ಮಾಡಿರುವ ಮಹತ್ವದ ಸಾಧನೆಯನ್ನು ಪರಿಗಣಿಸಿ ‘ಎಮಿನೆನ್ಸ್ ರೂಟ್’ (Eminence Route) ಮೂಲಕ ಈ ಗೌರವವನ್ನು ನೀಡಲಾಗಿದೆ.

ಶ್ವೇತಾ ಅವರು ಕೇಂದ್ರ ವಿದ್ಯುತ್ ಸಚಿವಾಲಯದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವಾದ (ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್) ‘ಇಂಡಿಯಾ ಎನರ್ಜಿ ಸ್ಟಾಕ್’ನ (IES) ಕಾರ್ಯಕ್ರಮ ನಿರ್ದೇಶಕಿ ಮತ್ತು ರಾಷ್ಟ್ರೀಯ ಕಾರ್ಯಪಡೆಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: ಭಾರತದ ಜಿಡಿಪಿ ಲೆಕ್ಕಾಚಾರದಲ್ಲಿ ಬದಲಾವಣೆ: ಮೂಲ ವರ್ಷ 2022-23ಕ್ಕೆ ವರ್ಗಾವಣೆ – ಇದರ ಅರ್ಥ ಮತ್ತು ಪರಿಣಾಮಗಳೇನು?

ಶ್ವೇತಾ ರವಿ ಕುಮಾರ್ ಅವರ ಪ್ರತಿಕ್ರಿಯೆ

ತಮ್ಮ ಈ ಸಾಧನೆಯ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಸಂತಸ ಹಂಚಿಕೊಂಡಿರುವ ಅವರು ಹೀಗೆ ಬರೆದಿದ್ದಾರೆ:

“ಎನರ್ಜಿ ಇನ್‌ಸ್ಟಿಟ್ಯೂಟ್‌ನ ಫೆಲೋ ಆಗಿ ಆಯ್ಕೆಯಾಗಿರುವುದು ನನಗೆ ಸಂದ ಗೌರವ ಎಂದು ಭಾವಿಸುತ್ತೇನೆ. ಇಂಧನ ಕ್ಷೇತ್ರವು ಡಿಜಿಟಲೀಕರಣ, ವಿಕೇಂದ್ರೀಕರಣ ಮತ್ತು ಕೃತಕ ಬುದ್ಧಿಮತ್ತೆಯಂತಹ (AI) ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿರುವ ಈ ಸಮಯದಲ್ಲಿ, ಜಾಗತಿಕ ಇಂಧನ ಚರ್ಚೆಗಳಲ್ಲಿ ಹೆಚ್ಚು ಸಕ್ರಿಯವಾಗಿ ಕೊಡುಗೆ ನೀಡುವ ಜವಾಬ್ದಾರಿ ನನ್ನ ಮೇಲಿದೆ.”

ಎಫ್‌ಎಸ್‌ಆರ್ ಗ್ಲೋಬಲ್​ನ (FSR Global) ಕಾರ್ಯವೈಖರಿ

ಆಡಳಿತ, ಮಾರುಕಟ್ಟೆ ವಿನ್ಯಾಸ, ಡೇಟಾ ವ್ಯವಸ್ಥೆಗಳು ಮತ್ತು ಸಾಮರ್ಥ್ಯ ವೃದ್ಧಿಯಂತಹ ಪ್ರಾಯೋಗಿಕ ಸುಧಾರಣೆಗಳ ಮೇಲೆ ಸಂಸ್ಥೆ ಕೆಲಸ ಮಾಡುತ್ತಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ (Global South) ಇಂಧನ ಪರಿವರ್ತನೆಗೆ ಪೂರಕವಾದ ನಿಯಮಗಳನ್ನು ರೂಪಿಸುವುದು ಇವರ ಮುಖ್ಯ ಉದ್ದೇಶವಾಗಿದೆ. ಇಂಧನ ಪರಿವರ್ತನೆಯ ಮುಂದಿನ ಹಂತವು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ವಿದ್ಯುತ್, ಅನಿಲ, ಸಾರಿಗೆ ಮತ್ತು ಡಿಜಿಟಲ್ ಮೂಲಸೌಕರ್ಯಗಳು ಪರಸ್ಪರ ಸಂಬಂಧ ಹೊಂದಿದ್ದು, ನಿಯಂತ್ರಕ ಸಂಸ್ಥೆಗಳು ಈ ವಾಸ್ತವಕ್ಕೆ ತಕ್ಕಂತೆ ಕೆಲಸ ಮಾಡಬೇಕೆಂದು ಶ್ವೇತಾ ರವಿಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬೈನಾನ್ಸ್‌ನಿಂದ ಹೊಸ ‘ವಿತ್‌ಡ್ರಾ ಪ್ರೊಟೆಕ್ಷನ್’: ಬಳಕೆದಾರರ ಕ್ರಿಪ್ಟೋ ಆಸ್ತಿಗಳಿಗೆ ಈಗ ಹೆಚ್ಚುವರಿ ಭದ್ರತೆ

ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಯಡಿ, ಸಲಹಾ ಮತ್ತು ನೀತಿ ನಿರೂಪಣಾ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಲು ಇಟಲಿಯ ಫ್ಲಾರೆನ್ಸ್ ಸ್ಕೂಲ್ ಆಫ್ ರೆಗ್ಯುಲೇಶನ್‌ನ ಸೋದರಸಂಸ್ಥೆಯಾಗಿ ಇದು ಆರಂಭವಾಯಿತು. ಪ್ರಸ್ತುತ, ಎಫ್‌ಎಸ್‌ಆರ್ ಗ್ಲೋಬಲ್ ಭಾರತ ಮೂಲದ ಸ್ವತಂತ್ರ ನೀತಿ ಸಂಶೋಧನಾ ಸಂಸ್ಥೆಯಾಗಿ (Policy Think-tank) ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us