AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈನಾನ್ಸ್‌ (Binance) ನಿಂದ ಹೊಸ ‘ವಿತ್‌ಡ್ರಾ ಪ್ರೊಟೆಕ್ಷನ್’: ಬಳಕೆದಾರರ ಕ್ರಿಪ್ಟೋ ಆಸ್ತಿಗಳಿಗೆ ಈಗ ಹೆಚ್ಚುವರಿ ಭದ್ರತೆ

Binance Introduces 'Withdraw Protection': ಬೈನಾನ್ಸ್ (Binance) ತನ್ನ ಬಳಕೆದಾರರ ಸುರಕ್ಷತೆಗಾಗಿ 'ವಿತ್‌ಡ್ರಾ ಪ್ರೊಟೆಕ್ಷನ್' ಪರಿಚಯಿಸಿದೆ. ಇದು ಕ್ರಿಪ್ಟೋ ಹಿಂಪಡೆಯುವಿಕೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಒತ್ತಾಯಪೂರ್ವಕ ಹಣ ವರ್ಗಾವಣೆ ತಡೆಯಲು, ಖಾತೆ ಭದ್ರತೆ ಹೆಚ್ಚಿಸಲು ಮತ್ತು ಸೈಬರ್ ದಾಳಿಗಳಿಂದ ರಕ್ಷಿಸಲು ಈ ಫೀಚರ್ ಸಹಕಾರಿ. ಬಳಕೆದಾರರು 1-7 ದಿನಗಳವರೆಗೆ ಲಾಕ್ ಅವಧಿಯನ್ನು ನಿಗದಿಪಡಿಸಬಹುದು, ತುರ್ತು ಸಂದರ್ಭಗಳಲ್ಲಿ ಪ್ರತಿಕ್ರಿಯಿಸಲು ಸಮಯ ನೀಡುತ್ತದೆ.

ಬೈನಾನ್ಸ್‌ (Binance) ನಿಂದ ಹೊಸ 'ವಿತ್‌ಡ್ರಾ ಪ್ರೊಟೆಕ್ಷನ್': ಬಳಕೆದಾರರ ಕ್ರಿಪ್ಟೋ ಆಸ್ತಿಗಳಿಗೆ ಈಗ ಹೆಚ್ಚುವರಿ ಭದ್ರತೆ
ಬೈನಾನ್ಸ್Image Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:May 09, 2026 | 1:53 PM

Share

ನವದೆಹಲಿ, ಮೇ 8: ಕ್ರಿಪ್ಟೋಕರೆನ್ಸಿ ಎಕ್ಸ್ಚೇಂಜ್ ಸಂಸ್ಥೆಯಾದ ಬೈನಾನ್ಸ್ (Binance) ತನ್ನ ಬಳಕೆದಾರರ ಸುರಕ್ಷತೆಗಾಗಿ ‘ವಿತ್‌ಡ್ರಾ ಪ್ರೊಟೆಕ್ಷನ್’ (Withdraw Protection) ಎಂಬ ಹೊಸ ಸೆಕ್ಯೂರಿಟಿ ಫೀಚರ್ ಅನ್ನು ಪರಿಚಯಿಸಿದೆ. ಬೈನಾನ್ಸ್ (Binance) ಬಳಕೆದಾರರು ತಮ್ಮ ಖಾತೆಯಿಂದ ಹಣ ಅಥವಾ ಕ್ರಿಪ್ಟೋವನ್ನು ಬೇರೆಡೆಗೆ ವರ್ಗಾಯಿಸದಂತೆ (Withdrawal) ತಾವೇ ಸ್ವತಃ ತಾತ್ಕಾಲಿಕವಾಗಿ ಲಾಕ್ ಮಾಡಿಕೊಳ್ಳುವ ಸೌಲಭ್ಯ ಇದಾಗಿದೆ. ಬಳಕೆದಾರರು 1 ರಿಂದ 7 ದಿನಗಳವರೆಗೆ ಈ ಲಾಕ್ ಅವಧಿಯನ್ನು ನಿಗದಿಪಡಿಸಬಹುದು.

ವಿತ್​ಡ್ರಾ ಪ್ರೊಟೆಕ್ಷನ್ ಫೀಚರ್​ನ ಪ್ರಮುಖ ಉದ್ದೇಶಗಳೇನು?

  • ಬಲವಂತದ ವರ್ಗಾವಣೆ ತಡೆ: ಇತ್ತೀಚಿನ ದಿನಗಳಲ್ಲಿ ಕ್ರಿಪ್ಟೋ ಬಳಕೆದಾರರನ್ನು ಬೆದರಿಸಿ ಅಥವಾ ಒತ್ತಾಯಪೂರ್ವಕವಾಗಿ ಆಸ್ತಿ ವರ್ಗಾಯಿಸಿಕೊಳ್ಳುವ ಘಟನೆಗಳು (Wrench Attacks) ಹೆಚ್ಚುತ್ತಿವೆ. ಇಂತಹ ಸಂದರ್ಭಗಳಲ್ಲಿ ಈ ವೈಶಿಷ್ಟ್ಯವು ರಕ್ಷಣಾ ಕವಚವಾಗಿ ಕೆಲಸ ಮಾಡುತ್ತದೆ.
  • ಖಾತೆಯ ಸುರಕ್ಷತೆ: ಒಂದು ವೇಳೆ ನಿಮ್ಮ ಖಾತೆಗೆ ಬೇರೆಯವರು ಲಾಗ್-ಇನ್ ಆದರೂ ಸಹ, ನೀವು ಲಾಕ್ ಮಾಡಿದ್ದರೆ ಅವರು ತಕ್ಷಣವೇ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ.
  • ಸಮಯದ ಅವಕಾಶ: ಹಣ ಹಿಂಪಡೆಯುವಿಕೆಗೆ ವಿಳಂಬ ಇರುವುದರಿಂದ, ತುರ್ತು ಸಂದರ್ಭಗಳಲ್ಲಿ ಬಳಕೆದಾರರಿಗೆ ಪ್ರತಿಕ್ರಿಯಿಸಲು ಮತ್ತು ಅಧಿಕಾರಿಗಳ ಸಹಾಯ ಪಡೆಯಲು ಸಮಯ ಸಿಗುತ್ತದೆ.

ಇದನ್ನೂ ಓದಿ: ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್; ಬೆಂಗಳೂರಿನಲ್ಲಿ ಎಐ ಹ್ಯಾಕಥಾನ್ ಶೋಕೇಸ್

ಈ ಫೀಚರ್ ಹೇಗೆ ಕೆಲಸ ಮಾಡುತ್ತದೆ?

ಬಳಕೆದಾರರು ತಮ್ಮ ಖಾತೆಯ ಸೆಟ್ಟಿಂಗ್ಸ್‌ನಲ್ಲಿ ಇದನ್ನು ಆಕ್ಟಿವೇಟ್ ಮಾಡಬಹುದು. ಒಮ್ಮೆ ಆಕ್ಟಿವೇಟ್ ಮಾಡಿದರೆ, ನಿಗದಿತ ಅವಧಿಯವರೆಗೆ ಹಣ ಹಿಂಪಡೆಯಲು ಸಾಧ್ಯವಿಲ್ಲ.

ಬಳಕೆದಾರರು ಬಯಸಿದರೆ ಅವಧಿಗೂ ಮುನ್ನ ಅನ್-ಲಾಕ್ ಮಾಡುವ ಆಯ್ಕೆಯನ್ನು ಇಟ್ಟುಕೊಳ್ಳಬಹುದು. ಆದರೆ ಇದಕ್ಕೆ ‘ಸೆಕ್ಯೂರಿಟಿ ಕೀ’ ಮತ್ತು ‘ಅಥೆಂಟಿಕೇಟರ್ ಆಪ್’ ನಂತಹ ಕಟ್ಟುನಿಟ್ಟಿನ ದೃಢೀಕರಣಗಳು ಬೇಕಾಗುತ್ತವೆ.

ಬಳಕೆದಾರರು ಇನ್ನೂ ಹೆಚ್ಚಿನ ಭದ್ರತೆ ಬಯಸಿದರೆ ‘ಸ್ಟ್ರಿಕ್ಟ್ ಲಾಕ್‌ಡೌನ್’ ಆಯ್ಕೆ ಮಾಡಬಹುದು. ಇದರಲ್ಲಿ ಅವಧಿಗೂ ಮುನ್ನ ಅನ್-ಲಾಕ್ ಮಾಡಲು ಬಳಕೆದಾರನಿಗೂ ಅಥವಾ ಬೈನಾನ್ಸ್ ಸಂಸ್ಥೆಗೂ ಸಾಧ್ಯವಿರುವುದಿಲ್ಲ.

ಇದನ್ನೂ ಓದಿ: ಗೂಗಲ್​ಗೆ ಆರಂಭದಲ್ಲೇ ಫಂಡಿಂಗ್ ನೀಡಿದ್ದ ರಾಮ್ ಶ್ರೀರಾಮ್; ಭಾರತದ ಈ ಕಂಪನಿಯತ್ತ ಈಗ ಅವರ ಚಿತ್ತ

ಗಮನಿಸಬೇಕಾದ ಅಂಶ ಎಂದರೆ ಈ ವೈಶಿಷ್ಟ್ಯವು ಕೇವಲ ಹಣ ಹಿಂಪಡೆಯುವಿಕೆಯನ್ನು (Withdrawal) ಮಾತ್ರ ನಿರ್ಬಂಧಿಸುತ್ತದೆ. ಲಾಕ್ ಅವಧಿಯಲ್ಲಿಯೂ ಬಳಕೆದಾರರು ಟ್ರೇಡಿಂಗ್ ಮಾಡುವುದು, ಕಾಯಿನ್ ಖರೀದಿಸುವುದು ಅಥವಾ ತಮ್ಮ ಪೋರ್ಟ್‌ಫೋಲಿಯೋ ನೋಡುವುದನ್ನು ಮುಂದುವರಿಸಬಹುದು.

ಕ್ರಿಪ್ಟೋ ಲೋಕದಲ್ಲಿ ಹೆಚ್ಚುತ್ತಿರುವ ಸೈಬರ್ ದಾಳಿ ಮತ್ತು ಭೌತಿಕ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಬೈನಾನ್ಸ್ (Binance) ಈ ಮಹತ್ವದ ಕ್ರಮ ಕೈಗೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:39 pm, Fri, 8 May 26

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More