ಅಹ್ಮದಾಬಾದ್: ಜುಲೈ 17ರಿಂದ ಎರಡು ದಿನಗಳ ಕಾಲ ಗುಜರಾತ್ನ ಗಾಂಧಿನಗರದಲ್ಲಿ ನಡೆಯಲಿರುವ ಜಿ20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರುಗಳ ಮೂರನೇ ಸಭೆಯ (3rd G20 FMCBG Meeting) ಹಿನ್ನೆಲೆಯಲ್ಲಿ ಒಂದು ದಿನ ಮುಂಚೆ ಪರಿಸರಸ್ನೇಹಿ ಮತ್ತು ಅಭಿವೃದ್ಧಿಸ್ನೇಹಿ ಪ್ರಗತಿಯ ಸಾಧ್ಯಾಸಾಧ್ಯತೆಗಳನ್ನು ಅವಲೋಕಿಸಲು ವಿಚಾರಸಂಕಿರಣ ನಡೆಯಿತು. ಉದಯೋನ್ಮುಖ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳು ಪ್ರಗತಿಪರವಾದ ಹವಾಮಾನ ಕ್ರಮಗಳು ಹಾಗೂ ವಿತ್ತ ಸಂಪನ್ಮೂಲ ಹೇಗೆ ಕ್ರೋಢೀಕರಿಸುವುದು ಎಂಬ ವಿಚಾರದ ಬಗ್ಗೆ ಗಣ್ಯರು ಈ ಸೆಮಿನಾರ್ನಲ್ಲಿ ಮಾತನಾಡಿದರು.
ಇಂಡೋನೇಷ್ಯಾದ ಹಣಕಾಸು ಸಚಿವೆ ಶ್ರೀ ಮುಲ್ಯಾನಿ ಇಂದ್ರವತಿ ಅವರು ಆರಂಭಿಕ ಅವಧಿಯನ್ನು ಉದ್ದೇಶಿಸಿ ಭಾಷಣ ಮಾಡಿದರು. ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ ಅನಂತ ನಾಗೇಶ್ವರನ್, ಬ್ರೆಜಿಲ್ನ ಅಂತಾರಾಷ್ಟ್ರೀಯ ವ್ಯವಹಾರಗಳ ಕಾರ್ಯದರ್ಶಿ ಟಾಟಿಯಾನ ರೋಸಿಟೋ, ಚೀನಾ ಪೀಪಲ್ಸ್ ಬ್ಯಾಂಕ್ನ ಡೆಪ್ಯುಟಿ ಗವರ್ನರ್ ಶುವಾನ್ ಚ್ಯಾಂಗ್ನೆಂಗ್, ಫಿಸ್ಕಲ್ ಅಫೇರ್ಸ್ ಇಲಾಖೆಯ ನಿರ್ದೇಶಕ ವೈಟರ್ ಗಾಸ್ಪರ್, ಏಷ್ಯಾ ಮತ್ತು ಪೆಸಿಫಿಕ್ ವಿಭಾಗದ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಮೊದಲಾದವರು ಈ ಸೆಮಿನಾರ್ನಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಪ್ರಸ್ತುತಪಡಿಸಿದರು.
ಇದನ್ನೂ ಓದಿ: eRupee: ಇರುಪಾಯಿಗೆ ಮೊದಲ ಬಾರಿಗೆ ನೊಂದಾಯಿಸುವುದು ಹೇಗೆ? ಅದರ ಆ್ಯಪ್, ವಹಿವಾಟು ಇತ್ಯಾದಿ ವಿವರ
On the sidelines of the 3rd #G20 Finance Ministers and Central Bank Governors #FMCBG meeting under #G20India Presidency, a seminar was organised on ‘Achieving Growth-Friendly Climate Action and Financing for Emerging and Developing Economies’. Todays’ engaging discussion focused… pic.twitter.com/S6HoPzmSR9
— Ministry of Finance (@FinMinIndia) July 16, 2023
ಜಿ20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರ ಸಭೆ ಅಂಗವಾಗಿ ಭಾರತ ಮತ್ತು ಇಂಡೋನೇಷ್ಯಾ ಮಧ್ಯೆ ಆರ್ಥಿಕ ಮತ್ತು ಹಣಕಾಸು ಸಂವಾದವನ್ನು ಆರಂಭಿಸಲಾಯಿತು. ಪರಿಸ್ಪರ ಕಲಿಕೆ ಮತ್ತು ನೀತಿ ಸಮನ್ವಯತೆ ಸಾಧಿಸುವ ಅವಕಾಶ ಒದಗಿಸಲು ಮತ್ತು ಜಾಗತಿಕ ವಿಚಾರಗಳನ್ನು ಅರಿಯಲು ಎರಡೂ ದೇಶಗಳ ಮಧ್ಯೆ ಸಹಕಾರ ಏರ್ಪಡಿಸುವುದು ಈ ಸಂವಾದದ ಉದ್ದೇಶ ಎನ್ನಲಾಗಿದೆ.
? India and Indonesia announce launch of the “India – Indonesia Economic and Financial Dialogue” #EFDDialogue on sidelines of G20 Finance Ministers and Central Bank Governors #G20FMCBG meeting in Gujarat
⁰? #EFDDialogue to strengthen cooperation between the two nations and… pic.twitter.com/JYXygz467a— Ministry of Finance (@FinMinIndia) July 16, 2023
Watch the side event on the ‘G20 High-Level Tax Symposium on Combatting Tax Evasion, Corruption and Money Laundering’ LIVE from #Gandhinagar.
Click here to tune in ?https://t.co/GVOMrDInSb#G20India #FMCBG@FinMinIndia
— G20 India (@g20org) July 16, 2023
Tune in! ▶️
G20 Infrastructure Investors Dialogue – Leveraging Funding and Financing Mechanisms and Approaches for the Cities of Tomorrow, an event organised on the sidelines of the 3rd #FMCBG Meet will begin shortly. #G20India
Click here to watch: https://t.co/9Np0qPwl30
— G20 India (@g20org) July 16, 2023
ಜಿ20 ದೇಶಗಳ ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ಗಳ ಉಪ ಮುಖ್ಯಸ್ಥರ ಸಭೆ ಜುಲೈ 14 ಮತ್ತು 15ರಂದು ನಡೆದಿತ್ತು. ಅದಾದ ಬೆನ್ನಲ್ಲೇ ಜುಲೈ 17 ಮತ್ತು 18ರಂದು ಗಾಂಧಿನಗರದಲ್ಲಿ ಜಿ20 ದೇಶಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರುಗಳ ಸಭೆ ನಡೆಯಲಿದೆ. ನವದೆಹಲಿಯಲ್ಲಿ ಸೆಪ್ಟಂಬರ್ ತಿಂಗಳಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಪೂರ್ವಭಾವಿಯಾಗಿ ದೇಶಾದ್ಯಂತ ನಡೆಯುತ್ತಾ ಬಂದಿರುವ ವಿವಿಧ ಸಭೆಗಳ ಭಾಗವಾಗಿ ಈ ಕಾರ್ಯಕ್ರಮಗಳು ನಡೆಯುತ್ತಿವೆ. ಹಲವು ಅಡೆತಡೆ ಮತ್ತು ಸಮಸ್ಯೆಗಳಿಗೆ ಒಮ್ಮತದ ಪರಿಹಾರ ಕಂಡುಕೊಳ್ಳುವುದು ಈ ಸಭೆಗಳ ಉದ್ದೇಶ.
ಜಿ20 ಎಫ್ಎಂಸಿಬಿಜಿ ಸಭೆಯಲ್ಲಿ ಪಾಲ್ಗೊಳ್ಳಲು ಗಾಂಧಿನಗರಕ್ಕೆ ಆಗಮಿಸಿರುವ ಅಮೆರಿಕದ ಹಣಕಾಸು ಸಚಿವೆ (ಟ್ರೆಷರಿ ಸೆಕ್ರೆಟರಿ) ಜನೆಟ್ ಯೆಲೆನ್ ಭಾನುವಾರ (ಜುಲೈ 16) ಮಾಧ್ಯಮಗಳೊಂದಿಗೆ ಮಾತನಾಡಿ, ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದ ಬಗ್ಗೆ ಅಭಿಪ್ರಾಯ ನೀಡಿದರು.
ಡೀರಿಸ್ಕ್ ಮತ್ತು ಫ್ರೆಂಡ್ ಶೋರಿಂಗ್ ಅಮೆರಿಕಕ್ಕೆ ಪ್ರಮುಖ ಆದ್ಯತೆಗಳಾಗಿವೆ ಎಂದು ಯೆಲೆನ್ ಹೇಳಿದರು. ಫ್ರೆಂಡ್ ಶೋರಿಂಗ್ ಎಂಬುದು ತನ್ನ ಮೌಲ್ಯಕ್ಕೆ ನಿಕಟವಾಗಿರುವ ದೇಶದಿಂದ ಕಚ್ಛಾ ವಸ್ತು ಇತ್ಯಾದಿ ಸರಕುಗಳನ್ನು ಪಡೆಯುವ ಒಂದು ಬದ್ಧತೆ. ಆ್ಯಪಲ್ ಸೇರಿದಂತೆ ಅಮೆರಿಕದ ಹಲವು ಕಂಪನಿಗಳು ಭಾರತದಲ್ಲಿ ತಮ್ಮ ಉತ್ಪನ್ನಗಳನ್ನು ತಯಾರಿಸುವ ಕಾರ್ಯ ವಿಸ್ತರಿಸುತ್ತಾ ಹೋಗುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:57 pm, Sun, 16 July 23