AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

eRupee: ಇರುಪಾಯಿಗೆ ಮೊದಲ ಬಾರಿಗೆ ನೊಂದಾಯಿಸುವುದು ಹೇಗೆ? ಅದರ ಆ್ಯಪ್, ವಹಿವಾಟು ಇತ್ಯಾದಿ ವಿವರ

How To Register For e Rupee: ಆರ್​ಬಿಐ ರೂಪಿಸಿರುವ ಡಿಜಿಟಲ್ ರುಪಾಯಿ ಅಥವಾ ಇರುಪಾಯಿ ಬಳಕೆಯನ್ನು ಪ್ರಾಯೋಗಿಕವಾಗಿ ಚಾಲನೆಗೊಳಿಸಲಾಗಿದೆ. ಎಸ್​ಬಿಐ ಬ್ಯಾಂಕ್ ಖಾತೆಯಲ್ಲಿ ಇರುಪೀ ವ್ಯಾಲಟ್ ರಚಿಸುವುದು ಹೇಗೆ ಎಂಬ ವಿವರ ಇಲ್ಲಿದೆ...

eRupee: ಇರುಪಾಯಿಗೆ ಮೊದಲ ಬಾರಿಗೆ ನೊಂದಾಯಿಸುವುದು ಹೇಗೆ? ಅದರ ಆ್ಯಪ್, ವಹಿವಾಟು ಇತ್ಯಾದಿ ವಿವರ
ಇರುಪಾಯಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 16, 2023 | 4:11 PM

Share

ಕೇಂದ್ರ ಸರ್ಕಾರ ಕ್ಯಾಷ್ ಹಣದ ಪ್ರಮಾಣ ಕಡಿಮೆ ಮಾಡಿ ಎಲೆಕ್ಟ್ರಾನಿಕ್ ನೋಟುಗಳಿಗೆ ಉತ್ತೇಜನ ಕೊಡಲು ಡಿಜಿಟಲ್ ರುಪಾಯಿ ಅಥವಾ ಇರುಪಾಯಿಯನ್ನು (eRupee) ಅನಾವರಣಗೊಳಿಸಿದೆ. ಇದು ಕಾಗದದಲ್ಲಿ ಮುದ್ರಣವಾಗುವ ನೋಟು ಮತ್ತು ನಾಣ್ಯಗಳ ಡಿಜಿಟಲ್ ರೂಪ. ಎರಡೂ ಮೌಲ್ಯಗಳು ಒಂದೇ. ನಮ್ಮ ನೋಟುಗಳ ವಹಿವಾಟಿನಲ್ಲಿಯಂತೆ ಇರುಪಾಯಿ ವಹಿವಾಟಿನಲ್ಲೂ ಗೌಪ್ಯತೆ ಉಳಿಸಿಕೊಳ್ಳಲು ಸಾಧ್ಯ. ಆರ್​ಬಿಐ ರೂಪಿಸಿರುವ ಇರುಪಾಯಿ ಸದ್ಯ ಪ್ರಾಯೋಗಿಕವಾಗಿ ಚಾಲನೆಯಲ್ಲಿದೆ. ಆಯ್ದ ಬ್ಯಾಂಕುಗಳ ಆಯ್ದ ಗ್ರಾಹಕರಿಗೆ ಮೊದಲಿಗೆ ಈ ಸೌಲಭ್ಯ ಕೊಡಲಾಗಿದೆ. ಇರುಪಾಯಿ ಹೇಗೆ ಬಳಕೆ ಆಗುತ್ತದೆ, ನೊಂದಣಿ ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ

ಇರುಪಾಯಿ ಪೈಲಟ್ ಪ್ರಾಜೆಕ್ಟ್​ನಲ್ಲಿ ಭಾಗಿಯಾಗಿರುವ ಎಸ್​ಬಿಐನಲ್ಲಿ ಇದರ ವ್ಯವಸ್ಥೆ ಬಗ್ಗೆ ಒಂದಷ್ಟು ವಿವರಣೆ ಇದೆ. ಎಸ್​ಬಿಐ ತನ್ನ ಆಯ್ದ ಸದಸ್ಯರಿಗೆ ಇವ್ಯಾಲಟ್ ಒದಗಿಸುತ್ತಿದ್ದು, ಇತರ ವ್ಯಾಲಟ್ ಆ್ಯಪ್​ಗಳ ರೀತಿಯಲ್ಲಿ ಇರುಪಾಯಿಯಲ್ಲಿ ಪಾವತಿ ಮಾಡಬಹುದು. ಎಸ್​ಬಿಐ ಇರುಪಾಯಿ ಹಂಚಿಕೆಗೆಂದು ಸೀಮಿತ ಬಳಕೆದಾರ ಗುಂಪು (CUG- Closed User Group) ರಚಿಸಿ ಅದರಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿನ ಸದಸ್ಯರನ್ನು ಆಯ್ಕೆ ಮಾಡಿದೆ. ಈ ಸದಸ್ಯರಿಗೆ ಮೊಬೈಲ್ ನಂಬರ್ ಮತ್ತು ಇಮೇಲ್ ಮೂಲಕ ಸಂಪರ್ಕಿಸಿ ಇರುಪಾಯಿ ಸೌಲಭ್ಯದ ಬಗ್ಗೆ ಮಾಹಿತಿ ಕೊಡಲಾಗಿದೆ.

ಇದನ್ನೂ ಓದಿTax Exemption Limit: 7 ಲಕ್ಷ ಅಲ್ಲ 7.27 ಲಕ್ಷ ರೂವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ವಿನಾಯಿತಿ ಇರುತ್ತದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ಇರುಪೀ ಸೌಲಭ್ಯಕ್ಕೆ ನೊಂದಣಿ ಮಾಡುವ ಕ್ರಮಗಳು

  • ಗೂಗಲ್ ಪ್ಲೇ ಸ್ಟೋರ್​ನಿಂದ ಇರುಪೀ ಆ್ಯಪ್ ಡೌನ್​ಲೋಡ್ ಮಾಡಿ
  • ಎಸ್ಸೆಮ್ಮೆಸ್ ಮತ್ತು ಫೋನ್ ಕರೆಗೆ ಅನುಮತಿ ಕೊಡಿ
  • ಟರ್ಮ್ಸ್ ಮತ್ತು ಕಂಡಿಷನ್ಸ್​ಗೆ ಒಪ್ಪಿಗೆ ನೀಡಿ.
  • ಸ್ಟಾರ್ಟ್ ರಿಜಿಸ್ಟ್ರೇಶನ್ ಕ್ಲಿಕ್ ಮಾಡಿ
  • ಬ್ಯಾಂಕ್ ಖಾತೆಗೆ ನೊಂದಾವಣಿ ಆಗಿರುವ ಮೊಬೈಲ್ ಸಂಖ್ಯೆಯನ್ನು ಆಯ್ದುಕೊಂಡು, ವೆರಿಫೈ ಸಿಮ್ ಮೇಲೆ ಕ್ಲಿಕ್ ಮಾಡಿ
  • ಎಸ್ಸೆಮ್ಮೆಸ್ ಮೂಲಕ ನಿಮ್ಮ ಸಿಮ್ ವೆರಿಫಿಕೇಶನ್ ಆಗುತ್ತದೆ. ವೆರಿಫಿಕೇಶನ್ ಬಳಿಕ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ
  • ಸೆಟ್ ಆ್ಯಪ್ ಪಿನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಡಿವೈಸ್ ಪಾಸ್​ವರ್ಡ್ ದೃಢೀಕರಿಸಿ
  • ನಂತರದ ಸ್ಥಳದಲ್ಲಿ ನಿಮ್ಮ ಹೆಸರು ಭರ್ತಿ ಮಾಡಿ
  • ಚೂಸ್ ವ್ಯಾಲಟ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಪಿನ್ ನಂಬರ್ ನಮೂದಿಸಿ. ಮತ್ತೆ ಪಿನ್ ನಂಬರ್ ದೃಢಪಡಿಸಿ. ನಂಬರ್ ಪ್ಯಾಡ್ ಮೇಲಿನ ಟಿಕ್ ಬಟನ್ ಮೇಲೆ ಕ್ಲಿಕ್ ಮಾಡಿ
  • ವ್ಯಾಲಟ್ ಸಕ್ಸಸ್​ಫುಲಿ ಕ್ರಿಯೇಟೆಡ್ ಎಂದು ಬರೆದಿರುವುದು ಕಾಣಬಹುದು. ವೀವ್ ವ್ಯಾಲಟ್ ಅಡ್ರೆಸ್ ಮೇಲೆ ಕ್ಲಿಕ್ ಮಾಡಿ
  • ಸೆಲೆಕ್ಟ್ ವ್ಯಾಲಟ್ ಕ್ಲಿಕ್ ಮಾಡಿ.
  • ಲಿಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಕೌಂಟ್ ಅನ್ನು ಆಯ್ದುಕೊಳ್ಳಿ.
  • ಕಂಟಿನ್ಯೂ ಕ್ಲಿಕ್ ಮಾಡಿ
  • ಈಗ ನಿಮ್ಮ ಮೊಬೈಲ್ ನಂಬರ್ ನೊಂದಾಯಿತವಾದ ಎಲ್ಲಾ ಎಸ್​ಬಿಐ ಖಾತೆಗಳ ಪಟ್ಟಿ ಕಾಣುತ್ತದೆ.
  • ವ್ಯಾಲಟ್​ಗೆ ಯಾವ ಖಾತೆಯನ್ನು ಲಿಂಕ್ ಮಾಡಬೇಕೆಂದಿದ್ದೀರೋ ಅದನ್ನು ಆರಿಸಿ. ಒಂದು ಬ್ಯಾಂಕ್​ನ ಒಂದು ವ್ಯಾಲಟ್ ಅನ್ನು ಮಾತ್ರ ಪಡೆಯಬಹುದು.
  • ಎಂಟರ್ ಕಾರ್ಡ್ ಡೀಟೇಲ್ಸ್ ಎಂದು ಎದುರಾಗುತ್ತದೆ. ಈಗ ನಿಮ್ಮ ಡೆಬಿಟ್ ಕಾರ್ಡ್​ನ ಕೊನೆಯ 6 ಅಂಕಿಗಳನ್ನು ನಮೂದಿಸಿ.
  • ನೆಕ್ಸ್​ಟ್ ಬಟನ್ ಮೇಲೆ ಕ್ಲಿಕ್ ಮಾಡಿ
  • ಈಗ ವ್ಯಾಲಟ್​ಗೆ ಬ್ಯಾಂಕ್ ಅಕೌಂಟ್ ಲಿಂಕ್ ಆಗಿರುವ ಸಂದೇಶ ಕಾಣುತ್ತದೆ.

ಇದನ್ನೂ ಓದಿIndian Economy: ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಆದ ಸುಧಾರಣೆಗಳು; ಮುಂದಿನ ಆರ್ಥಿಕ ವೇಗಕ್ಕೆ ಕಾರಣವಾಗುವ ಸಂಗತಿಗಳು: ಕ್ಯಾಪಿಟಲ್ ಗ್ರೂಪ್ ವಿಶ್ಲೇಷಣೆ

ಇಲ್ಲಿಗೆ ಎಸ್​ಬಿಐನ ಇರುಪಾಯಿ ವ್ಯಾಲಟ್​ನ ನೊಂದಣಿ ಕಾರ್ಯ ಪೂರ್ಣಗೊಂಡಂತಾಗುತ್ತದೆ. ಈಗ ಇರುಪಾಯಿಯ ಬಳಕೆ ಆರಂಭಿಸಬಹುದು. ಯುಪಿಐ ಆ್ಯಪ್​ಗಳ ವ್ಯಾಲಟ್​ನಲ್ಲಿಯಂತೆಯೇ ಇರುಪೀ ವ್ಯಾಲಟ್​ಗೂ ಹಣ ತುಂಬಿಸಬಹುದು.

ಇರುಪೀ ವ್ಯಾಲಟ್​ನಲ್ಲಿ ವಹಿವಾಟು ಹೇಗೆ?

  • ಇರುಪೀ ಆ್ಯಪ್ ಓಪನ್ ಮಾಡಿ, ಲೋಡ್ ಕ್ಲಿಕ್ ಮಾಡಿ
  • ನಿಮಗೆ ಬೇಕಾದ ಮೊತ್ತವನ್ನು ಆಯ್ದುಕೊಳ್ಳಿ. ಲೋಡ್ ಡಿಜಿಟಲ್ ರುಪೀ ಮೇಲೆ ಕ್ಲಿಕ್ ಮಾಡಿ
  • ಈಗ ಎಸ್​ಬಿಐ ಖಾತೆಯಿಂದ ವ್ಯಾಲಟ್​ಗೆ ಹಣ ವರ್ಗಾವಣೆ ಮಾಡಬಹುದು. ಅಥವಾ ಬೇರೆ ಯುಪಿಐ ಆ್ಯಪ್​ಗಳ ಮೂಲಕ ಬೇಕಾದರೂ ಹಣ ತುಂಬಿಸಬಹುದು.
  • ಪಿನ್ ವೆರಿಫಿಕೇಶನ್ ಬಳಿಕ ನೀವು ನಮೂದಿಸಿದಷ್ಟು ಹಣವು ವ್ಯಾಲಟ್​ಗೆ ಹೋಗಿ ಬೀಳುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ