Gold Silver Price on 17 November 2022 | ಬೆಂಗಳೂರು: ಆರ್ಥಿಕ ಅನಿಶ್ಚಿತತೆ, ಷೇರುಪೇಟೆಗಳ ಏರಿಳಿಕೆ ಹಾಗೂ ಸತತ ಮೂರನೇ ದಿನವೂ ರೂಪಾಯಿ ಮೌಲ್ಯದಲ್ಲಿ ಕುಸಿತವಾಗಿರುವುದು ದೇಶೀಯ ಬುಲಿಯನ್ ಮಾರುಕಟ್ಟೆಯ (Bullion Market) ವಹಿವಾಟಿನಲ್ಲಿಯೂ ಏರಿಳಿಕೆಗೆ ಕಾರಣವಾಗಿದೆ. ಹಿಂದಿನ ದಿನದ ವಹಿವಾಟಿನ ಅಂತ್ಯದ ವೇಳೆಗೆ ಇಳಿಕೆಯಾಗಿದ್ದ ಚಿನ್ನದ ದರ (Gold Price) ಇಂದು ಹೆಚ್ಚಳವಾಗಿದ್ದರೆ, ಬೆಳ್ಳಿಯ ದರದಲ್ಲಿ ತುಸು ಇಳಿಕೆಯಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 200 ರೂ. ಏರಿಕೆಯಾಗಿ 48,000 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 210 ರೂ. ಹೆಚ್ಚಳವಾಗಿ 52,360 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 700 ರೂ. ಇಳಿಕೆಯಾಗಿ 62,000 ರೂಪಾಯಿ ಆಗಿದೆ.
ಇದನ್ನೂ ಓದಿ: Gold Price Today: ಚಿನ್ನದ ದರ ಇಳಿಕೆ, ಬೆಳ್ಳಿ ಬೆಲೆ ತುಸು ಹೆಚ್ಚಳ; ವಿವಿಧ ನಗರಗಳ ದರ ಪಟ್ಟಿ ಇಲ್ಲಿದೆ
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 49,600 ರೂ. ಮುಂಬೈ- 48,000 ರೂ, ದೆಹಲಿ- 48,150 ರೂ, ಕೊಲ್ಕತ್ತಾ- 48,000 ರೂ, ಬೆಂಗಳೂರು- 48,050 ರೂ, ಹೈದರಾಬಾದ್- 48,000 ರೂ, ಕೇರಳ- 48,000 ರೂ, ಪುಣೆ- 40,030 ರೂ, ಮಂಗಳೂರು- 48,050 ರೂ, ಮೈಸೂರು- 48,050 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 54,110 ರೂ, ಮುಂಬೈ- 52,360 ರೂ, ದೆಹಲಿ- 52,510 ರೂ, ಕೊಲ್ಕತ್ತಾ- 52,360 ರೂ, ಬೆಂಗಳೂರು- 52,410 ರೂ, ಹೈದರಾಬಾದ್- 52,360 ರೂ, ಕೇರಳ- 52,360 ರೂ, ಪುಣೆ- 52,390 ರೂ, ಮಂಗಳೂರು- 52,410 ರೂ, ಮೈಸೂರು- 52,410 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 67,500 ರೂ, ಮೈಸೂರು- 67,500 ರೂ., ಮಂಗಳೂರು- 67,500 ರೂ., ಮುಂಬೈ- 62,000 ರೂ, ಚೆನ್ನೈ- 68,500 ರೂ, ದೆಹಲಿ- 62,000 ರೂ, ಹೈದರಾಬಾದ್- 67,500 ರೂ, ಕೊಲ್ಕತ್ತಾ- 62,000 ರೂ. ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ