Gold Silver Price on 22 November 2022 | ಬೆಂಗಳೂರು: ವಿದೇಶಿ ಮಾರುಕಟ್ಟೆಗಳ ಅನಿಶ್ಚಿತತೆ, ದೇಶೀಯ ಷೇರುಪೇಟೆಗಳ ವಹಿವಾಟು ಕುಸಿತ, ರೂಪಾಯಿ ಮೌಲ್ಯದಲ್ಲಿ ಕುಸಿತದ ಟ್ರೆಂಡ್ ಮುಂದುವರಿದಿದೆ. ಚಿನ್ನವನ್ನು ಪ್ರಮುಖ ಹೂಡಿಕೆ ಸಾಧನವಾಗಿ ಪರಿಗಣಿಸುತ್ತಿರುವ ಈ ಸಂದರ್ಭದಲ್ಲಿ ಮಾರುಕಟ್ಟೆ ಅನಿಶ್ಚಿತತೆಯು ದೇಶೀಯ ಬುಲಿಯನ್ ಮಾರುಕಟ್ಟೆ (Bullion Market) ಮೇಲೂ ಪ್ರಭಾವ ಬೀರಿದೆ. ಚಿನ್ನ (Gold Price) ಹಾಗೂ ಬೆಳ್ಳಿ ದರ (Silver Price) ಮತ್ತೆ ಇಳಿಕೆಯಾಗಿದ್ದು, ಆಭರಣ ಪ್ರಿಯರಿಗೆ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಉತ್ತಮ ಅವಕಾಶ ಒದಗಿಸಿದೆ. ಹಿಂದಿನ ದಿನದ ವಹಿವಾಟಿನ ಅಂತ್ಯದಲ್ಲಿಯೂ ಉಭಯ ಲೋಹಗಳ ದರ ಇಳಿಕೆಯಾಗಿತ್ತು. ಇಂದೂ ಸಹ ಚಿನ್ನ, ಬೆಳ್ಳಿ ದರ ಇಳಿಕೆಯಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ 100 ರೂ. ಇಳಿಕೆಯಾಗಿ 48,500 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 100 ರೂ. ಇಳಿಕೆಯಾಗಿ 52,920 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 400 ರೂ. ಇಳಿಕೆಯಾಗಿ 60,600 ರೂಪಾಯಿ ಆಗಿದೆ.
ಇದನ್ನೂ ಓದಿ: Gold Price Today: ಚಿನ್ನ, ಬೆಳ್ಳಿ ದರ ಮತ್ತೆ ಇಳಿಕೆ; ಪ್ರಮುಖ ನಗರಗಳಲ್ಲಿನ ಬೆಲೆ ವಿವರ ಇಲ್ಲಿದೆ
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 49,200 ರೂ. ಮುಂಬೈ- 48,500 ರೂ, ದೆಹಲಿ- 48,700 ರೂ, ಕೊಲ್ಕತ್ತಾ- 48,500 ರೂ, ಬೆಂಗಳೂರು- 48,550 ರೂ, ಹೈದರಾಬಾದ್- 48,500 ರೂ, ಕೇರಳ- 48,500 ರೂ, ಪುಣೆ- 48,500 ರೂ, ಮಂಗಳೂರು- 48,550 ರೂ, ಮೈಸೂರು- 48,550 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 53,670 ರೂ, ಮುಂಬೈ- 52,920 ರೂ, ದೆಹಲಿ- 53,070 ರೂ, ಕೊಲ್ಕತ್ತಾ- 52,920 ರೂ, ಬೆಂಗಳೂರು- 52,970 ರೂ, ಹೈದರಾಬಾದ್- 52,920 ರೂ, ಕೇರಳ- 52,920 ರೂ, ಪುಣೆ- 52,920 ರೂ, ಮಂಗಳೂರು- 52,970 ರೂ, ಮೈಸೂರು- 52,970 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 66,500 ರೂ, ಮೈಸೂರು- 66,500 ರೂ., ಮಂಗಳೂರು- 66,500 ರೂ., ಮುಂಬೈ- 60,600 ರೂ, ಚೆನ್ನೈ- 66,500 ರೂ, ದೆಹಲಿ- 60,600 ರೂ, ಹೈದರಾಬಾದ್- 66,500 ರೂ, ಕೊಲ್ಕತ್ತಾ- 60,600 ರೂ. ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ