Gold Price Today: ಚಿನ್ನ ಇಂದೂ ದುಬಾರಿ, ಬದಲಾಗಿಲ್ಲ ಬೆಳ್ಳಿ ಬೆಲೆ; ಇಲ್ಲಿದೆ ದರ ವಿವರ

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಚಿನ್ನ ಇಂದೂ ದುಬಾರಿ, ಬದಲಾಗಿಲ್ಲ ಬೆಳ್ಳಿ ಬೆಲೆ; ಇಲ್ಲಿದೆ ದರ ವಿವರ
ಚಿನ್ನದ ದರ (ಸಾಂದರ್ಭಿಕ ಚಿತ್ರ)
Edited By:

Updated on: Dec 27, 2022 | 12:00 AM

Gold Silver Price in Bangalore | ಬೆಂಗಳೂರು: ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ ಸತತ ಎರಡನೇ ದಿನವೂ ಚಿನ್ನದ ದರ ಏರಿಕೆಯಾಗಿದೆ. ಬೆಳ್ಳಿ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಬೆಳ್ಳಿ ಬೆಲೆಯೂ ಹೆಚ್ಚಳವಾಗಿತ್ತು. ಹಿಂದಿನ ದಿನ 22 ಕ್ಯಾರೆಟ್​​ನ 10 ಗ್ರಾಂ ಚಿನ್ನದ ದರ 150 ರೂ. ಹೆಚ್ಚಳವಾಗಿತ್ತು. 24 ಕ್ಯಾರೆಟ್​​ನ 10 ಗ್ರಾಂ ಚಿನ್ನದ ದರ 160 ರೂ. ಏರಿಕೆಯಾಗಿತ್ತು. ಒಂದು ಕೆಜಿ ಬೆಳ್ಳಿ ದರ 1,000 ರೂ. ಹೆಚ್ಚಳವಾಗಿತ್ತು. ಇಂದು 22 ಕ್ಯಾರೆಟ್​​ನ 10 ಗ್ರಾಂ ಚಿನ್ನದ ದರ 100 ರೂ. ಹೆಚ್ಚಾಗಿದ್ದು, 24 ಕ್ಯಾರೆಟ್​​ನ 10 ಗ್ರಾಂ ಬಂಗಾರದ ಬೆಲೆ 100 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆ ಬದಲಾಗಿಲ್ಲ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ದರ?

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 100 ರೂ. ಹೆಚ್ಚಾಗಿ 49,950 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 100 ರೂ. ಏರಿಕೆಯಾಗಿ 54,480 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 71,100 ರೂಪಾಯಿ ಇದೆ.

ಇದನ್ನೂ ಓದಿ: Gold Price Today: ಮತ್ತೆ ಏರಿಕೆಯಾಯ್ತು ಚಿನ್ನ ಬೆಳ್ಳಿ ಬೆಲೆ; ಪ್ರಮುಖ ನರಗಳ ದರ ವಿವರ ಇಲ್ಲಿದೆ

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ – 50,860 ರೂ.
  • ಮುಂಬೈ- 49,950 ರೂ.
  • ದೆಹಲಿ- 50,100 ರೂ.
  • ಕೊಲ್ಕತ್ತಾ- 49,950 ರೂ.
  • ಬೆಂಗಳೂರು- 50,000 ರೂ.
  • ಹೈದರಾಬಾದ್- 49,950 ರೂ.
  • ಕೇರಳ- 49,950 ರೂ.
  • ಪುಣೆ- 49,950 ರೂ.
  • ಮಂಗಳೂರು- 50,000 ರೂ.
  • ಮೈಸೂರು- 50,000 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ- 55,480 ರೂ.
  • ಮುಂಬೈ- 54,630 ರೂ.
  • ದೆಹಲಿ- 54,630 ರೂ.
  • ಕೊಲ್ಕತ್ತಾ- 54,480 ರೂ.
  • ಬೆಂಗಳೂರು- 54,510 ರೂ.
  • ಹೈದರಾಬಾದ್- 54,480 ರೂ.
  • ಕೇರಳ- 54,480 ರೂ.
  • ಪುಣೆ- 54,480 ರೂ.
  • ಮಂಗಳೂರು- 54,510 ರೂ.
  • ಮೈಸೂರು- 54,510 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

  • ಬೆಂಗಳೂರು- 74,000 ರೂ.
  • ಮೈಸೂರು- 74,000 ರೂ.
  • ಮಂಗಳೂರು- 74,000 ರೂ.
  • ಮುಂಬೈ- 71,100 ರೂ.
  • ಚೆನ್ನೈ- 74,000 ರೂ.
  • ದೆಹಲಿ- 71,100 ರೂ.
  • ಹೈದರಾಬಾದ್- 74,000 ರೂ.
  • ಕೊಲ್ಕತ್ತಾ- 74,000 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Follow Us