Gold Silver Price on 17th October 2022 | ಬೆಂಗಳೂರು: ಭಾರತದಲ್ಲಿ ಕುಸಿತವಾಗಿದ್ದ ಚಿನ್ನದ ಬೆಲೆ (Gold Rate) ಇಂದು ಮತ್ತೆ 270 ರೂ. ಹೆಚ್ಚಳವಾಗಿದೆ. ಬೆಳ್ಳಿ ಬೆಲೆ (Silver Price) ಇಂದು ಯಥಾಸ್ಥಿತಿಯಲ್ಲಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಚಿನ್ನದ ಬೆಲೆ ಇಂದು ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,200 ರೂ. ಇದ್ದುದು ಇಂದು 46,450 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,400 ರೂ. ಇದ್ದುದು 50,670 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 46,900 ರೂ. ಮುಂಬೈ- 46,450 ರೂ, ದೆಹಲಿ- 46,900 ರೂ, ಕೊಲ್ಕತ್ತಾ- 46,450 ರೂ, ಬೆಂಗಳೂರು- 46,500 ರೂ, ಹೈದರಾಬಾದ್- 46,450 ರೂ, ಕೇರಳ- 46,450 ರೂ, ಪುಣೆ- 46,480 ರೂ, ಮಂಗಳೂರು- 46,500 ರೂ, ಮೈಸೂರು- 46,500 ರೂ. ಆಗಿದೆ.
ಇದನ್ನೂ ಓದಿ: Gold Price Today: ಬೆಂಗಳೂರು, ದೆಹಲಿ, ಮುಂಬೈ ಸೇರಿ ಹಲವೆಡೆ ಇಂದಿನ ಚಿನ್ನದ ಬೆಲೆ ಹೀಗಿದೆ; ಬೆಳ್ಳಿ ದರವೆಷ್ಟು?
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,160 ರೂ, ಮುಂಬೈ- 50,400 ರೂ, ದೆಹಲಿ- 50,550 ರೂ, ಕೊಲ್ಕತ್ತಾ- 50,400 ರೂ, ಬೆಂಗಳೂರು- 50,450 ರೂ, ಹೈದರಾಬಾದ್- 50,400 ರೂ, ಕೇರಳ- 50,400 ರೂ, ಪುಣೆ- 50,430 ರೂ, ಮಂಗಳೂರು- 50,450 ರೂ, ಮೈಸೂರು- 50,450 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಬೆಳ್ಳಿ ದರ ಕೂಡ ಇಂದು ಯಾವುದೇ ಏರಿಳಿತವಾಗಿಲ್ಲ. 2 ದಿನಗಳ ಹಿಂದೆ 1 ಕೆಜಿ ಬೆಳ್ಳಿ ಬೆಲೆ 57,300 ರೂ. ಇದ್ದುದು ಇಂದು 55,300 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 55,300 ರೂ, ಮೈಸೂರು- 55,300 ರೂ., ಮಂಗಳೂರು- 55,300 ರೂ., ಮುಂಬೈ- 55,300 ರೂ, ಚೆನ್ನೈ- 60,500 ರೂ, ದೆಹಲಿ- 55,300 ರೂ, ಹೈದರಾಬಾದ್- 60,500 ರೂ, ಕೊಲ್ಕತ್ತಾ- 55,300 ರೂ. ಆಗಿದೆ.
Published On - 8:36 am, Mon, 17 October 22