Gold Price on 6th October 2022 | ಬೆಂಗಳೂರು: ಭಾರತದಲ್ಲಿ 3 ದಿನಗಳಿಂದ ಚಿನ್ನದ ಬೆಲೆ (Gold Rate) ಏರಿಕೆಯಾಗುತ್ತಲೇ ಇದೆ. ಇಂದು ಬಂಗಾರದ ಬೆಲೆ ಬರೋಬ್ಬರಿ 440 ರೂ. ಏರಿಕೆಯಾಗಿದೆ. ಬೆಳ್ಳಿ ಬೆಲೆ (Silver Price) ಕೂಡ 200 ರೂ. ಹೆಚ್ಚಳವಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಚಿನ್ನದ ಬೆಲೆ ಇಂದು ಭಾರೀ ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,350 ರೂ. ಇದ್ದುದು ಇಂದು 47,750 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,660 ರೂ. ಇದ್ದುದು 52,100 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,350 ರೂ. ಮುಂಬೈ- 47,750 ರೂ, ದೆಹಲಿ- 47,900 ರೂ, ಕೊಲ್ಕತ್ತಾ- 47,750 ರೂ, ಬೆಂಗಳೂರು- 47,800 ರೂ, ಹೈದರಾಬಾದ್- 47,750 ರೂ, ಕೇರಳ- 47,750 ರೂ, ಪುಣೆ- 47,780 ರೂ, ಮಂಗಳೂರು- 47,800 ರೂ, ಮೈಸೂರು- 47,800 ರೂ. ಆಗಿದೆ.
ಇದನ್ನೂ ಓದಿ: Gold Price Today: ಒಂದೇ ದಿನದಲ್ಲಿ ಚಿನ್ನದ ಬೆಲೆ 380 ರೂ. ಏರಿಕೆ; ಬೆಳ್ಳಿ ದರ 500 ರೂ. ಹೆಚ್ಚಳ
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,750 ರೂ, ಮುಂಬೈ- 52,100 ರೂ, ದೆಹಲಿ- 52,100 ರೂ, ಕೊಲ್ಕತ್ತಾ- 52,100 ರೂ, ಬೆಂಗಳೂರು- 52,150 ರೂ, ಹೈದರಾಬಾದ್- 52,100 ರೂ, ಕೇರಳ- 52,100 ರೂ, ಪುಣೆ- 52,130 ರೂ, ಮಂಗಳೂರು- 52,150 ರೂ, ಮೈಸೂರು- 52,150 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಬೆಳ್ಳಿ ದರ ಇಂದು 200 ರೂ. ಏರಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 61,800 ರೂ. ಇದ್ದುದು ಇಂದು 62,000 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 67,000 ರೂ, ಮೈಸೂರು- 67,000 ರೂ., ಮಂಗಳೂರು- 67,000 ರೂ., ಮುಂಬೈ- 62,000 ರೂ, ಚೆನ್ನೈ- 67,000 ರೂ, ದೆಹಲಿ- 62,000 ರೂ, ಹೈದರಾಬಾದ್- 67,000 ರೂ, ಕೊಲ್ಕತ್ತಾ- 62,000 ರೂ. ಆಗಿದೆ.