Gold Price Today: 2 ದಿನಗಳ ಬಳಿಕ ಚಿನ್ನದ ಬೆಲೆ ಮತ್ತೆ ಹೆಚ್ಚಳ; ಬೆಳ್ಳಿ ದರ 720 ರೂ. ಏರಿಕೆ

Silver Price Today: ಬೆಳ್ಳಿ ಬೆಲೆ ಇಂದು 720 ರೂ. ಏರಿಕೆಯಾಗಿದೆ. 2 ದಿನಗಳಿಂದ 1 ಕೆಜಿ ಬೆಳ್ಳಿ ಬೆಲೆ 52,500 ರೂ. ಇದ್ದುದು ಇಂದು 53,220 ರೂ. ಆಗಿದೆ.

Gold Price Today: 2 ದಿನಗಳ ಬಳಿಕ ಚಿನ್ನದ ಬೆಲೆ ಮತ್ತೆ ಹೆಚ್ಚಳ; ಬೆಳ್ಳಿ ದರ 720 ರೂ. ಏರಿಕೆ
ಚಿನ್ನದ ಬೆಲೆ
Image Credit source: Live Mint
Edited By:

Updated on: Sep 06, 2022 | 5:54 AM

Gold Price on 6th September 2022 | ಬೆಂಗಳೂರು: ಭಾರತದಲ್ಲಿ 2 ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ಬೆಲೆ (Gold Rate) ಇಂದು ಕೊಂಚ ಏರಿಕೆಯಾಗಿದೆ. ಚಿನ್ನದ ದರ ಇಂದು 110 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆ (Silver Price) ಇಂದು 720 ರೂ. ಹೆಚ್ಚಳವಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಏರಿಕೆಯಾಗಿದೆ. 2 ದಿನಗಳಿಂದ 22 ಕ್ಯಾರೆಟ್ ಚಿನ್ನದ ಬೆಲೆ 46,650 ರೂ. ಇದ್ದುದು 46,750 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,890 ರೂ. ಇದ್ದುದು 51,000 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,360 ರೂ. ಮುಂಬೈ- 46,750 ರೂ, ದೆಹಲಿ- 46,900 ರೂ, ಕೊಲ್ಕತ್ತಾ- 46,750 ರೂ, ಬೆಂಗಳೂರು- 46,800 ರೂ, ಹೈದರಾಬಾದ್- 46,750 ರೂ, ಕೇರಳ- 46,750 ರೂ, ಪುಣೆ- 46,780 ರೂ, ಮಂಗಳೂರು- 46,800 ರೂ, ಮೈಸೂರು- 46,800 ರೂ. ಇದೆ.

ಇದನ್ನೂ ಓದಿ: Gold Price Today: ಭಾರತದಲ್ಲಿ ಇಂದು ಚಿನ್ನದ ಬೆಲೆ 540 ರೂ. ಕುಸಿತ; ಬೆಳ್ಳಿ ದರ 400 ರೂ. ಏರಿಕೆ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,660 ರೂ, ಮುಂಬೈ- 51,000 ರೂ, ದೆಹಲಿ- 51,160 ರೂ, ಕೊಲ್ಕತ್ತಾ- 51,000 ರೂ, ಬೆಂಗಳೂರು- 51,050 ರೂ, ಹೈದರಾಬಾದ್- 51,000 ರೂ, ಕೇರಳ- 51,000 ರೂ, ಪುಣೆ- 51,030 ರೂ, ಮಂಗಳೂರು- 51,050 ರೂ, ಮೈಸೂರು- 51,050 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆ ಇಂದು 720 ರೂ. ಏರಿಕೆಯಾಗಿದೆ. 2 ದಿನಗಳಿಂದ 1 ಕೆಜಿ ಬೆಳ್ಳಿ ಬೆಲೆ 52,500 ರೂ. ಇದ್ದುದು ಇಂದು 53,220 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 58,500 ರೂ, ಮೈಸೂರು- 58,500 ರೂ., ಮಂಗಳೂರು- 58,500 ರೂ., ಮುಂಬೈ- 53,220 ರೂ, ಚೆನ್ನೈ- 58,500 ರೂ, ದೆಹಲಿ- 53,220 ರೂ, ಹೈದರಾಬಾದ್- 58,500 ರೂ, ಕೊಲ್ಕತ್ತಾ- 53,220 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us