Gold Price Today: ಭಾರತದಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆ; ಬೆಳ್ಳಿ ಬೆಲೆ ಕುಸಿತ

ಬೆಳ್ಳಿ ಬೆಲೆ ಇಂದು 400 ರೂ. ಕುಸಿತವಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿ ಬೆಲೆ 58,900 ರೂ. ಇದ್ದುದು ಇಂದು 58,500 ರೂ. ಆಗಿದೆ.

Gold Price Today: ಭಾರತದಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆ; ಬೆಳ್ಳಿ ಬೆಲೆ ಕುಸಿತ
ಚಿನ್ನದ ಬೆಲೆ
Image Credit source: News18
Edited By:

Updated on: Aug 13, 2022 | 5:51 AM

Gold Price on 13th August 2022 | ಬೆಂಗಳೂರು: 2 ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ಬೆಲೆ (Gold Rate) ಇಂದು ಮತ್ತೆ ಏರಿಕೆಯಾಗಿದೆ. ಬೆಳ್ಳಿಯ ಬೆಲೆ (Silver Price) ಇಂದು ಕುಸಿತವಾಗಿದ್ದು, 1 ಕೆಜಿಗೆ 400 ರೂ. ಇಳಿಕೆಯಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ. ಭಾರತದಲ್ಲಿ ಚಿನ್ನದ ಬೆಲೆ ಇಂದು ಏರಿಕೆಯಾಗಿದೆ. ನಿನ್ನೆ ಹಿಂದೆ 22 ಕ್ಯಾರೆಟ್ ಚಿನ್ನದ ಬೆಲೆ 47,350 ರೂ. ಇದ್ದುದು 47,750 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,650 ರೂ. ಇದ್ದುದು 52,090 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,900 ರೂ. ಮುಂಬೈ- 47,750 ರೂ, ದೆಹಲಿ- 47,900 ರೂ, ಕೊಲ್ಕತ್ತಾ- 47,750 ರೂ, ಬೆಂಗಳೂರು- 47,800 ರೂ, ಹೈದರಾಬಾದ್- 47,750 ರೂ, ಕೇರಳ- 47,750 ರೂ, ಪುಣೆ- 47,780 ರೂ, ಮಂಗಳೂರು- 47,800 ರೂ, ಮೈಸೂರು- 47,800 ರೂ. ಇದೆ.

ಇದನ್ನೂ ಓದಿ: Gold Price Today: 3 ದಿನಗಳ ಬಳಿಕ ಚಿನ್ನದ ಬೆಲೆ ಏರಿಕೆ; ಬೆಳ್ಳಿ ದರ 1,600 ರೂ. ಹೆಚ್ಚಳ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 53,340 ರೂ, ಮುಂಬೈ- 52,090 ರೂ, ದೆಹಲಿ- 52,240 ರೂ, ಕೊಲ್ಕತ್ತಾ- 52,090 ರೂ, ಬೆಂಗಳೂರು- 52,150 ರೂ, ಹೈದರಾಬಾದ್- 52,090 ರೂ, ಕೇರಳ- 52,090 ರೂ, ಪುಣೆ- 52,140 ರೂ, ಮಂಗಳೂರು- 52,150 ರೂ, ಮೈಸೂರು- 52,150 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆ ಇಂದು 400 ರೂ. ಕುಸಿತವಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿ ಬೆಲೆ 58,900 ರೂ. ಇದ್ದುದು ಇಂದು 58,500 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 64,400 ರೂ, ಮೈಸೂರು- 64,400 ರೂ., ಮಂಗಳೂರು- 64,400 ರೂ., ಮುಂಬೈ- 58,500 ರೂ, ಚೆನ್ನೈ- 64,400 ರೂ, ದೆಹಲಿ- 58,500 ರೂ, ಹೈದರಾಬಾದ್- 64,400 ರೂ, ಕೊಲ್ಕತ್ತಾ- 58,500 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us