Gold Silver Price on 21st October 2022 | ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆ, ಷೇರುಪೇಟೆ ವಹಿವಾಟುಗಳಲ್ಲಿ ಏರಿಳಿತಗಳ ಮಧ್ಯೆ ಗುರುವಾರ ಚಿನ್ನ (Gold Price) ಹಾಗೂ ಬೆಳ್ಳಿಯ (Silver Price) ದರ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 200 ರೂ. ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ದರ 250 ರೂ. ಇಳಿಕೆಯಾಗಿದೆ. ದೇಶದ ಪ್ರಮುಖ ನಗರಗಳ ಚಿನ್ನ ಹಾಗೂ ಬೆಳ್ಳಿ ದರದ ಮಾಹಿತಿ ಇಲ್ಲಿದೆ;
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 200 ರೂಪಾಯಿ ಇಳಿಕೆಯಾಗಿದ್ದು, 46,350 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 220 ರೂ. ಇಳಿಕೆಯಾಗಿ 50,560 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 250 ರೂಪಾಯಿ ಇಳಿಕೆಯಾಗಿ 56,150 ರೂಪಾಯಿ ಆಗಿದೆ.
ಇದನ್ನೂ ಓದಿ: Gold Price Today: ಮತ್ತೆ ಕುಸಿದ ಬೆಳ್ಳಿ ದರ, ದೇಶದ ಪ್ರಮುಖ ನಗರಗಳ ಚಿನ್ನದ ದರ ಇಲ್ಲಿದೆ ನೋಡಿ
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 46,850 ರೂ. ಮುಂಬೈ- 46,350 ರೂ, ದೆಹಲಿ- 46,500 ರೂ, ಕೊಲ್ಕತ್ತಾ- 46,350 ರೂ, ಬೆಂಗಳೂರು- 46,400 ರೂ, ಹೈದರಾಬಾದ್- 46,350 ರೂ, ಕೇರಳ- 46,350 ರೂ, ಪುಣೆ- 46,380 ರೂ, ಮಂಗಳೂರು- 46,400 ರೂ, ಮೈಸೂರು- 46,400 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,110 ರೂ, ಮುಂಬೈ- 50,560 ರೂ, ದೆಹಲಿ- 50,730 ರೂ, ಕೊಲ್ಕತ್ತಾ- 50,560 ರೂ, ಬೆಂಗಳೂರು- 50,620 ರೂ, ಹೈದರಾಬಾದ್- 50,560 ರೂ, ಕೇರಳ- 50,560 ರೂ, ಪುಣೆ- 50,590 ರೂ, ಮಂಗಳೂರು- 50,620 ರೂ, ಮೈಸೂರು- 50,620 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 61,000 ರೂ, ಮೈಸೂರು- 61,000 ರೂ., ಮಂಗಳೂರು- 61,000 ರೂ., ಮುಂಬೈ- 56,150 ರೂ, ಚೆನ್ನೈ- 61,000 ರೂ, ದೆಹಲಿ- 51,150 ರೂ, ಹೈದರಾಬಾದ್- 61,000 ರೂ, ಕೊಲ್ಕತ್ತಾ- 56,150 ರೂ. ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ