Gold Silver Price on 26th August: ಯುಎಸ್ ಎಫೆಕ್ಟ್, ಚಿನ್ನ ಬೆಳ್ಳಿ ಬೆಲೆ ಗಗನಕ್ಕೆ

Bullion Market 2024 August 26th: ಅಪರಂಜಿ ಚಿನ್ನದ ಬೆಲೆ ಮತ್ತು 7,300ರ ಗಡಿ ದಾಟಿದೆ. ಬೆಳ್ಳಿ ಬೆಲೆ 88 ರೂಗಿಂತ ಹೆಚ್ಚಾಗಿದೆ. ಆಭರಣ ಚಿನ್ನ 6,695 ಆಗಿದ್ದು ಇಂದು 6,700 ರೂ ಗಡಿ ದಾಟಿ ಹೋಗುವ ನಿರೀಕ್ಷೆ ಇದೆ.

Gold Silver Price on 26th August: ಯುಎಸ್ ಎಫೆಕ್ಟ್, ಚಿನ್ನ ಬೆಳ್ಳಿ ಬೆಲೆ ಗಗನಕ್ಕೆ
ಚಿನ್ನ

Updated on: Aug 26, 2024 | 5:00 AM

ಬೆಂಗಳೂರು, ಆಗಸ್ಟ್ 26: ಅಮೆರಿಕದಲ್ಲಿ ಬಡ್ಡಿದರ ಕಡಿತಗೊಳಿಸುವ ಖಚಿತ ಸುಳಿವು ಸಿಕ್ಕ ಬೆನ್ನಲ್ಲೇ ಅದರ ಪರಿಣಾಮ ಚಿನಿವಾರ ಪೇಟೆಯಲ್ಲಿ ನಿರೀಕ್ಷಿತ ರೀತಿಯಲ್ಲಿ ಆಗುತ್ತಿದೆ. ಚಿನ್ನದ ಬೆಲೆ ಏರುಗತಿಯಲ್ಲಿದೆ. ಬೆಳ್ಳಿ ಬೆಲೆಯೂ ಹೆಚ್ಚಾಗುತ್ತಿದೆ. ಮೊನ್ನೆ ಗ್ರಾಮ್​ಗೆ 35 ರೂನಷ್ಟು ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು ಮತ್ತಷ್ಟು ಹೆಚ್ಚಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,950 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,040 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 66,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,450 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 26ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,950 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,040 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 880 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,950 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,040 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 845 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 66,950 ರೂ
  • ಚೆನ್ನೈ: 66,950 ರೂ
  • ಮುಂಬೈ: 66,950 ರೂ
  • ದೆಹಲಿ: 67,100 ರೂ
  • ಕೋಲ್ಕತಾ: 66,950 ರೂ
  • ಕೇರಳ: 66,950 ರೂ
  • ಅಹ್ಮದಾಬಾದ್: 67,000 ರೂ
  • ಜೈಪುರ್: 67,100 ರೂ
  • ಲಕ್ನೋ: 67,100 ರೂ
  • ಭುವನೇಶ್ವರ್: 66,950 ರೂ

ಇದನ್ನೂ ಓದಿ: ಮೂವತ್ತು ವರ್ಷ ಮುಗಿಸಿದ ಮ್ಯೂಚುವಲ್ ಫಂಡ್​ಗಳ ಸಾಧನೆ ಹೇಗೆ? ತಿಂಗಳಿಗೆ ಕೇವಲ 1,000 ಹೂಡಿಕೆ ಈಗ ಆಗಿದೆ 2 ಕೋಟಿ ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,470 ರಿಂಗಿಟ್ (66,490 ರುಪಾಯಿ)
  • ದುಬೈ: 2,817.50 ಡಿರಾಮ್ (64,340 ರುಪಾಯಿ)
  • ಅಮೆರಿಕ: 765 ಡಾಲರ್ (64,120 ರುಪಾಯಿ)
  • ಸಿಂಗಾಪುರ: 1,024 ಸಿಂಗಾಪುರ್ ಡಾಲರ್ (65,970 ರುಪಾಯಿ)
  • ಕತಾರ್: 2,860 ಕತಾರಿ ರಿಯಾಲ್ (65,750 ರೂ)
  • ಸೌದಿ ಅರೇಬಿಯಾ: 2,880 ಸೌದಿ ರಿಯಾಲ್ (64,330 ರುಪಾಯಿ)
  • ಓಮನ್: 3030 ಒಮಾನಿ ರಿಯಾಲ್ (65,960 ರುಪಾಯಿ)
  • ಕುವೇತ್: 228.10 ಕುವೇತಿ ದಿನಾರ್ (62,610 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,450 ರೂ
  • ಚೆನ್ನೈ: 9,300 ರೂ
  • ಮುಂಬೈ: 8,800 ರೂ
  • ದೆಹಲಿ: 8,800 ರೂ
  • ಕೋಲ್ಕತಾ: 8,800 ರೂ
  • ಕೇರಳ: 9,300 ರೂ
  • ಅಹ್ಮದಾಬಾದ್: 8,800 ರೂ
  • ಜೈಪುರ್: 8,800 ರೂ
  • ಲಕ್ನೋ: 8,800 ರೂ
  • ಭುವನೇಶ್ವರ್: 9,300 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us