AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂವತ್ತು ವರ್ಷ ಮುಗಿಸಿದ ಮ್ಯೂಚುವಲ್ ಫಂಡ್​ಗಳ ಸಾಧನೆ ಹೇಗೆ? ತಿಂಗಳಿಗೆ ಕೇವಲ 1,000 ಹೂಡಿಕೆ ಈಗ ಆಗಿದೆ 2 ಕೋಟಿ ರೂ

SIP of Rs 1,000 for 30 years: ಭಾರತದ 65 ಲಕ್ಷ ಕೋಟಿ ರೂ ಇರುವ ಮ್ಯುಚುವಲ್ ಫಂಡ್ ಉದ್ಯಮ ಬಹಳ ಜನರಿಗೆ ಹಣಕಾಸು ಭದ್ರತೆ ಒದಗಿಸಿದೆ. 14 ಮ್ಯೂಚುವಲ್ ಫಂಡ್​ಗಳು 30 ವರ್ಷ ಪೂರ್ಣಗೊಳಿಸಿವೆ. ಕೆಲ ಫಂಡ್​ಗಳು ಹಲವು ಪಟ್ಟು ಹೆಚ್ಚು ಲಾಭ ತಂದುಕೊಟ್ಟಿವೆ. ಈ ಫಂಡ್​ಗಳತ್ತ ಒಂದು ನೋಟ...

ಮೂವತ್ತು ವರ್ಷ ಮುಗಿಸಿದ ಮ್ಯೂಚುವಲ್ ಫಂಡ್​ಗಳ ಸಾಧನೆ ಹೇಗೆ? ತಿಂಗಳಿಗೆ ಕೇವಲ 1,000 ಹೂಡಿಕೆ ಈಗ ಆಗಿದೆ 2 ಕೋಟಿ ರೂ
ಮ್ಯೂಚುವಲ್ ಫಂಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 25, 2024 | 4:43 PM

Share

ಭಾರತದಲ್ಲಿ ಷೇರು ಮಾರುಕಟ್ಟೆ ಯಾವತ್ತೂ ಕೂಡ ಹೂಡಿಕೆದಾರರ ನಿರೀಕ್ಷೆ ಹುಸಿಗೊಳಿಸಿದ್ದಿಲ್ಲ. ಹಲವು ಬಾರಿ ನಿರೀಕ್ಷೆ ಮೀರಿ ಫಲ ತಂದುಕೊಟ್ಟಿದೆ. ಜಾಗತೀಕರಣದ ಬಳಿಕ ಮಾರುಕಟ್ಟೆ ಅದ್ವಿತೀಯ ರೀತಿಯಲ್ಲಿ, ಸ್ಥಿರ ರೀತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಮಾರುಕಟ್ಟೆ ದ್ವಿಗುಣಗೊಳ್ಳುತ್ತಿರುವ ಅವಧಿ ಕಡಿಮೆ ಆಗುತ್ತಲೇ ಹೋಗುತ್ತಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ವಿನಿಯೋಗಿಸುವ ಮ್ಯೂಚುವಲ್ ಫಂಡ್​ಗಳೂ ಕೂಡ ಹೂಡಿಕೆದಾರರ ಕೈಹಿಡಿದಿವೆ. ನಿಯಮಿತವಾಗಿ ಮಾಸಿಕವಾಗಿ ಹಣ ಹೂಡಿಕೆ ಮಾಡಲು ಎಸ್​ಐಪಿ ಸ್ಕೀಮ್​ಗಳಿವೆ. ಹಣ ಬೆಳವಣಿಗೆಯ ಚಕ್ರ ಮೌಲ್ಯ ಅಥವಾ ಕಾಂಪೌಂಡಿಂಗ್ ಎಫೆಕ್ಟ್​ನಿಂದ ಹೂಡಿಕೆಯು ಅಚ್ಚರಿ ಎನಿಸುವ ರೀತಿಯಲ್ಲಿ ಬೆಳೆಯುತ್ತದೆ.

ಭಾರತದಲ್ಲಿ ಮ್ಯೂಚುವಲ್ ಫಂಡ್ ಉದ್ಯಮ ಈಗ 65 ಲಕ್ಷ ಕೋಟಿ ರೂ ಮೊತ್ತದಷ್ಟಾಗಿದೆ. ಈಕ್ವಿಟಿಗೆ ಹೆಚ್ಚು ಜೋಡಿತವಾದ 14 ಮ್ಯುಚುವಲ್ ಫಂಡ್​ಗಳು 30 ವರ್ಷ ಪೂರ್ಣಗೊಳಿಸಿವೆ. 30 ವರ್ಷದ ಹಿಂದೆ ಆರಂಭವಾದ ಫ್ರಾಂಕ್ಲಿನ್ ಇಂಡಿಯಾ ಪ್ರೈಮಾ ಫಂಡ್​ನಲ್ಲಿ ಒಂದು ಸಾವಿರ ರೂ ಎಸ್​ಐಪಿ ಮಾಡಿದವರು ಇವತ್ತಿನವರೆಗೂ ಮುಂದುವರಿಸಿಕೊಂಡು ಬಂದಿದ್ದರೆ ಅವರ ಸಂಪತ್ತು ಎರಡು ಕೋಟಿ ರೂಗೂ ಹೆಚ್ಚಾಗಿರುತ್ತದೆ. ಇದು ನಿಜಕ್ಕೂ ಫಂಡ್ ತಂದ ರಿಟರ್ನ್ ಮತ್ತು ಹಣದ ಕಾಂಪೌಂಡಿಂಗ್ ಎಫೆಕ್ಟ್.

ಇದನ್ನೂ ಓದಿ: ಐದು ವರ್ಷಕ್ಕೆ ಮಾತ್ರ ಹೂಡಿಕೆ ಮಾಡಬೇಕಾ? ಇಲ್ಲಿವೆ ಕೆಲ ಉತ್ತಮ ಆಯ್ಕೆಗಳು

30 ವರ್ಷ ಪೂರ್ಣಗೊಳಿಸಿದ ಕೆಲ ಮ್ಯೂಚುವಲ್ ಫಂಡ್​ಗಳು ಹಾಗು 1,000 ಎಸ್​ಐಪಿ ತಂದ ರಿಟರ್ನ್ಸ್

  1. ಫ್ರಾಂಕ್ಲಿನ್ ಇಂಡಿಯಾ ಪ್ರೈಮಾ ಫಂಡ್: 2.1 ಕೋಟಿ ರೂ ಲಾಭ
  2. ಫ್ರಾಂಕ್ಲಿನ್ ಇಂಡಿಯಾ ಫ್ಲೆಕ್ಸಿ ಕ್ಯಾಪ್ ಫಂಡ್: 1.7 ಕೋಟಿ ರೂ ಲಾಭ
  3. ಎಸ್​ಬಿಐ ಲಾಂಗ್ ಟರ್ಮ್ ಈಕ್ವಿಟಿ ಫಂಡ್: 1.37 ಕೋಟಿ ರೂ
  4. ಫ್ರಾಂಕ್ಲಿನ್ ಇಂಡಿಯಾ ಬ್ಲೂಚಿಪ್ ಫಂಡ್: 1.2 ಕೋಟಿ ರೂ
  5. ಐಸಿಐಸಿಐ ಪ್ರುಡೆನ್ಷಿಯಲ್ ಮಲ್ಟಿಕ್ಯಾಪ್ ಫಂಡ್: 1.05 ಕೋಟಿ ರೂ
  6. ಎಚ್​ಡಿಎಫ್​ಸಿ ಕ್ಯಾಪಿಟಲ್ ಬಿಲ್ಡರ್ ವ್ಯಾಲ್ಯೂ ಫಂಡ್: 1.04 ಕೋಟಿ ರೂ
  7. ಎಸ್​ಬಿಐ ಲಾರ್ಜ್ ಅಂಡ್ ಮಿಡ್​ಕ್ಯಾಪ್ ಫಂಡ್: 93 ಲಕ್ಷ ರೂ ಲಾಭ
  8. ಕೆನರಾ ರೊಬೇಕೋ ಇಎಲ್​ಎಸ್​ಎಸ್ ಟ್ಯಾಕ್ಸ್ ಸೇವರ್ ಫಂಡ್: 73.4 ಲಕ್ಷ ರೂ
  9. ಎಸ್​ಬಿಐ ಇಎಸ್​ಜಿ ಎಕ್ಸ್​ಕ್ಲೂಷನರಿ ಸ್ಟ್ರಾಟಿಜಿ ಫಂಡ್: 66 ಲಕ್ಷ ರ ಲಾಭ
  10. ಎಚ್​ಡಿಎಫ್​ಸಿ ಲಾರ್ಜ್ ಅಂಡ್ ಮಿಡ್ ಕ್ಯಾಪ್ ಫಂಡ್: 59.3 ಲಕ್ಷ ರೂ ಲಾಭ
  11. ಯುಟಿಐ ಫ್ಲೆಕ್ಸಿ ಕ್ಯಾಪ್ ಫಂಡ್: 56.5 ಲಕ್ಷ ರೂ ಲಾಭ
  12. ಯುಟಿಐ ಲಾರ್ಜ್ ಕ್ಯಾಪ್ ಫಂಡ್: 42 ಲಕ್ಷ ರೂ ಲಾಭ

ಇದನ್ನೂ ಓದಿ: ಸಿಕ್ಕಾಪಟ್ಟೆ ಇರುವ ಮ್ಯೂಚುವಲ್ ಫಂಡ್​ಗಳಲ್ಲಿ ಯಾವುದನ್ನು ಆರಿಸುವುದು? ರಾಧಿಕಾ ಗುಪ್ತಾ ಸಲಹೆ ಇದು

ಈ ಮೇಲಿನ ಪಟ್ಟಿಯಲ್ಲಿರುವುದು ಕಳೆದ 30 ವರ್ಷಗಳಿಂದ ತಿಂಗಳಿಗೆ 1,000 ರೂ ಎಸ್​ಐಪಿಗೆ ತಂದಿರುವ ಲಾಭದ ವಿವರವಾಗಿದೆ. ಈ ಮೂವತ್ತು ವರ್ಷದಲ್ಲಿ ಎಸ್​ಐಪಿ ಮೂಲಕ ಕಟ್ಟಲಾಗುವ ಹಣವೆಲ್ಲವೂ ಸೇರಿಸಿದರೆ 3.6 ಲಕ್ಷ ರೂ ಆಗುತ್ತದೆ. ಫ್ರಾಂಕ್ಲಿನ್ ಇಂಡಿಯಾ ಪ್ರಿಮಾ ಫಂಡ್ ಈ 3.6 ಲಕ್ಷ ರೂ ಹೂಡಿಕೆಗೆ 2.1 ಕೋಟಿ ರೂ ಲಾಭ ತಂದುಕೊಟ್ಟಿರುವುದು ಸಾಮಾನ್ಯ ಸಂಗತಿಯಲ್ಲ. ಅದೂ 30 ವರ್ಷ ಸುದೀರ್ಘ ಅವಧಿಯಲ್ಲಿ ಸ್ಥಿರ ಲಾಭ ತಂದಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಹೂಡಿಕೆ ಡಬಲ್ ಆಗುತ್ತಾ ಹೋಗಿರುವುದು ಸೋಜಿಗವೇ ಸರಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್
ನಮಸ್ತೇ ಸದಾ ವತ್ಸಲೇ: ವಿಧಾನಸಭೆಯಲ್ಲಿ RSS ಗೀತೆ ಹಾಡಿದ ಡಿಕೆ ಶಿವಕುಮಾರ್
ನಮಸ್ತೇ ಸದಾ ವತ್ಸಲೇ: ವಿಧಾನಸಭೆಯಲ್ಲಿ RSS ಗೀತೆ ಹಾಡಿದ ಡಿಕೆ ಶಿವಕುಮಾರ್
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?