ಸಿಕ್ಕಾಪಟ್ಟೆ ಇರುವ ಮ್ಯೂಚುವಲ್ ಫಂಡ್​ಗಳಲ್ಲಿ ಯಾವುದನ್ನು ಆರಿಸುವುದು? ರಾಧಿಕಾ ಗುಪ್ತಾ ಸಲಹೆ ಇದು

Radhika Gupta suggestion: ಇಂಡೆಕ್ಸ್ ಫಂಡ್​ಗಳಲ್ಲಿ ಹೂಡಿಕೆ ಮಾಡಿ ಎನ್ನುವ ಸಲಹೆ ಕೇಳಿರುತ್ತೇವೆ. ಆದರೆ, ಷೇರು ಮಾರುಕಟ್ಟೆಯಲ್ಲಿ ಹಲವಾರು ಇಂಡೆಕ್ಸ್ ಫಂಡ್​ಗಳಿವೆ. ಇದರಲ್ಲಿ ಯಾವುದೋ ಒಂದು ಸೂಪರ್ ಆಗಿರುವ ಫಂಡ್ ಅನ್ನು ಆಯ್ಕೆ ಮಾಡುವ ಪ್ರಸಂಗ ಬಂದರೆ? ಎಡೆಲ್​ವೀಸ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯ ಸಿಇಒ ರಾಧಿಕಾ ಗುಪ್ತಾ ಅವರು ಲಾರ್ಜ್ ಅಂಡ್ ಮಿಡ್​ಕ್ಯಾಪ್ 250 ಇಂಡೆಕ್ಸ್ ಫಂಡ್ ಆಯ್ಕೆ ಉತ್ತಮ ಎನ್ನುತ್ತಾರೆ.

ಸಿಕ್ಕಾಪಟ್ಟೆ ಇರುವ ಮ್ಯೂಚುವಲ್ ಫಂಡ್​ಗಳಲ್ಲಿ ಯಾವುದನ್ನು ಆರಿಸುವುದು? ರಾಧಿಕಾ ಗುಪ್ತಾ ಸಲಹೆ ಇದು
ರಾಧಿಕಾ ಗುಪ್ತಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 20, 2024 | 6:00 PM

ನವದೆಹಲಿ, ಆಗಸ್ಟ್ 20: ಭಾರತದಲ್ಲಿ 5-6 ಸಾವಿರದಷ್ಟು ಕಂಪನಿಗಳ ಷೇರುಗಳು ಸ್ಟಾಕ್ ಮಾರ್ಕೆಟ್​ನಲ್ಲಿ ಲಿಸ್ಟ್ ಆಗಿವೆ. ಮ್ಯೂಚುವಲ್ ಫಂಡ್​ಗಳ ಸಂಖ್ಯೆಯೇ ಸುಮಾರು ಒಂದೂವರೆ ಸಾವಿರದಷ್ಟಿವೆ. ಇದರಲ್ಲಿ ಆ್ಯಕ್ಟಿವ್ ಫಂಡ್ಸ್, ಪಾಸಿವ್ ಫಂಡ್ಸ್ (passive funds) ಎಂದು ಸ್ಥೂಲವಾಗಿ ವರ್ಗೀಕರಿಸಬಹುದು. ಆ್ಯಕ್ಟಿವ್ ಫಂಡ್ ಎಂದರೆ ಫಂಡ್ ಮ್ಯಾನೇಜರ್​ಗಳು ಸ್ವಂತವಾಗಿ ಯಾವ ಷೇರುಗಳ ಮೇಲೆ ಹಣ ಹೂಡಿಕೆ ಮಾಡಬೇಕು ಎಂದು ನಿರ್ಧರಿಸಿ, ಹೂಡಿಕೆಯನ್ನು ನಿರ್ವಹಿಸುತ್ತಾರೆ. ಪಾಸಿವ್ ಫಂಡ್ ಎಂಬುದು ಇಂಡೆಕ್ಸ್ ಫಂಡ್​ಗಳು. ಷೇರುಪೇಟೆಯಲ್ಲಿರುವ ವಿವಿಧ ಇಂಡೆಕ್ಸ್​ಗಳಿಗೆ ಬದ್ಧವಾಗಿರುವ ಫಂಡ್​ಗಳು ಇವು. ಅಂದರೆ, ನಿಫ್ಟಿ 50 ಇಂಡೆಕ್ಸ್​ನಲ್ಲಿ ಟಾಪ್ 50 ಕಂಪನಿಗಳ ಷೇರುಗಳಿರುತ್ತವೆ. ಈ ಐವತ್ತು ಷೇರುಗಳ ಮೇಲೆ ಮಾತ್ರವೇ ಲಾರ್ಜ್ ಕ್ಯಾಪ್ ಫಂಡ್​ಗಳು ಹಣ ಹೂಡಿಕೆ ಮಾಡಬಹುದು.

ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಇಂಡೆಕ್ಸ್ ಫಂಡ್​ಗಳಿವೆ. ನಿಫ್ಟಿ50 ಎಂಬುದು ದೊಡ್ಡ ಕಂಪನಿಗಳ ಷೇರುಗಳಾದರೆ, ನಿಫ್ಟಿ ಸ್ಮಾಲ್ ಕ್ಯಾಪ್ ಫಂಡ್​ಗಳು ಅಲ್ಪ ಮಾರುಕಟ್ಟೆ ಸಂಪತ್ತಿರುವ ಷೇರುಗಳಾಗಿರುತ್ತವೆ. ಬಹಳಷ್ಟು ಹೂಡಿಕೆದಾರರಿಗೆ ಯಾವ ಫಂಡ್​ನಲ್ಲಿ ಹಣ ಹೂಡಿಕೆ ಮಾಡಬೇಕು ಎಂಬ ಗೊಂದಲ ಇರುತ್ತದೆ. ಈ ರೀತಿ ಗೊಂದಲ ಇರುವವರು ತಮ್ಮ ಹೂಡಿಕೆಯನ್ನು ವಿವಿಧ ಇಂಡೆಕ್ಸ್ ಫಂಡ್​ಗಳಲ್ಲಿ ಹಂಚಿಬಿಡುವುದುಂಟು. ಕೆಲವೊಮ್ಮೆ ಒಂದೇ ಒಂದು ಫಂಡ್​ನಲ್ಲಿ ಮಾತ್ರವೇ ಹೂಡಿಕೆ ಮಾಡಬೇಕು ಎನ್ನುವ ಸಂದರ್ಭ ಬಂದಾಗ ಯಾವುದನ್ನು ಆಯ್ಕೆ ಮಾಡಬೇಕು? ಲಾರ್ಜ್ ಕ್ಯಾಪ್ ಫಂಡ್​ಗಳಾ, ಮಿಡ್ ಕ್ಯಾಪ್ ಫಂಡ್​ಗಳಾ, ಸ್ಮಾಲ್ ಕ್ಯಾಪ್ ಫಂಡ್​ಗಳಾ, ಬೇರೆ ಬೇರೆ ಸೆಕ್ಟರ್ ಫಂಡ್​ಗಳಾ, ಥಿಮ್ಯಾಟಿಕ್ ಫಂಡಾ, ಯಾವುದು ಉತ್ತಮ?

ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಮಹೇಶ್ ಹೆಸರಿನ ವ್ಯಕ್ತಿಯೊಬ್ಬರು ಈ ವಿಚಾರವನ್ನು ಪ್ರಸ್ತಾಪಿದ್ದು, ಹೂಡಿಕೆದಾರರಿಗೆ ಯಾವ ಇಂಡೆಕ್ಸ್ ಫಂಡ್​ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಇರುವ ಗೊಂದಲಗಳ ಬಗ್ಗೆ ತಮಾಷೆ ಮಾಡಿದ್ದಾರೆ. ಇದಕ್ಕೆ ಎಡಲ್​ವೀಸ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯ ಸಿಇಒ ರಾಧಿಕಾ ಗುಪ್ತಾ ಪ್ರತಿಕ್ರಿಯಿಸಿದ್ದು, ಲಾರ್ಜ್ ಅಂಡ್ ಮಿಡ್​ಕ್ಯಾಪ್ 250 ಇಂಡೆಕ್ಸ್ ಫಂಡ್ ಉತ್ತಮ ಆಯ್ಕೆ ಆಗಬಹುದು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ವಯಸ್ಸಾಗಿರುವ ಮನೆ ಮಾಲೀಕರಿಗೆ ಈ ಮೂರು ಕಷ್ಟಗಳು: ಸಿಇಒ ರಾಧಿಕಾ ಗುಪ್ತಾ ತೆರೆದಿಟ್ಟ ವಾಸ್ತವ ಸಂಗತಿ

‘ಸದಾ ಕಾಲಕ್ಕೂ ಸಲ್ಲುವಂತಹ ಫಂಡ್​ಗಳ ಬಗ್ಗೆ ನಾನು ಸದಾ ಹೇಳುತ್ತಿರುತ್ತೇನೆ. ಈಗ ಒಂದೇ ಒಂದು ಇಂಡೆಕ್ಸ್ ಫಂಡ್ ಅನ್ನು ಆಯ್ಕೆ ಮಾಡಬೇಕು ಎನ್ನುವುದಾದರೆ ನನ್ನ ಪ್ರಕಾರ ಲಾರ್ಜ್ ಅಂಡ್ ಮಿಡ್​ಕ್ಯಾಪ್ 250 ಇಂಡೆಕ್ಸ್ ಉತ್ತಮ ಆಯ್ಕೆ. ಇದರಲ್ಲಿ ಲಾರ್ಜ್ ಕ್ಯಾಪ್ ಮತ್ತು ಮಿಡ್​ಕ್ಯಾಪ್ ಷೇರುಗಳಲ್ಲಿ ಹೂಡಿಕೆ ಹಂಚಿಕೆ ಆಗುತ್ತದೆ. ಭಾರತದ ವಿಸ್ತೃತ ಆರ್ಥಿಕತೆಯನ್ನು ಇದು ಪ್ರತಿಫಲಿಸುತ್ತದೆ,’ ಎಂದು ರಾಧಿಕಾ ಗುಪ್ತಾ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್