ವಯಸ್ಸಾಗಿರುವ ಮನೆ ಮಾಲೀಕರಿಗೆ ಈ ಮೂರು ಕಷ್ಟಗಳು: ಸಿಇಒ ರಾಧಿಕಾ ಗುಪ್ತಾ ತೆರೆದಿಟ್ಟ ವಾಸ್ತವ ಸಂಗತಿ
Edelweiss CEO Radhika Gupta post in X: ಸ್ವಂತ ಮನೆಯೊಂದಿದ್ದರೆ ಗಂಜಿ ತಿಂದುಕೊಂಡೋ ಬದುಕಬಹುದು ಎಂದು ಬಹಳಷ್ಟು ಜನರು ಹೇಳುವುದನ್ನು ಕೇಳಿರುತ್ತೇವೆ. ಇವತ್ತಿನ ಬಹಳಷ್ಟು ಉದ್ಯಮಿಗಳು ಸ್ವಂತ ಮನೆ ಹೊಂದುವ ಬಗ್ಗೆ ನಿರಾಸಕ್ತಿ ತೋರುತ್ತಾರೆ. ಎಡೆಲ್ವೀಸ್ ಮ್ಯೂಚುವಲ್ ಫಂಡ್ ಸಿಇಒ ರಾಧಿಕಾ ಗುಪ್ತಾ ಅವರು ವಯಸ್ಸಾಗಿರುವ ಮನೆ ಮಾಲೀಕರು ಎದುರಿಸುವ ಅಪಾಯದ ಬಗ್ಗೆ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
ನವದೆಹಲಿ, ಆಗಸ್ಟ್ 12: ಸ್ವಂತ ಮನೆ ಹೊಂದಿರುವ ವೃದ್ಧರಿಗೆ ಇವತ್ತು ಎದುರಾಗಿರುವ ಮೂರು ಪ್ರಮುಖಗಳ ಬಗ್ಗೆ ಎಡೆಲ್ವೀಸ್ ಮ್ಯೂಚುವಲ್ ಫಂಡ್ನ ಸಿಇಒ ರಾಧಿಕಾ ಗುಪ್ತಾ ಪ್ರಸ್ತಾಪ ಮಾಡಿದ್ದಾರೆ. ಸ್ವಂತ ಮನೆ ಇಟ್ಟುಕೊಂಡು ಅದನ್ನು ನಗದಾಗಿ ಪರಿವರ್ತಿಸಲು ಕಷ್ಟಪಡಬೇಕಾಗಿದೆ ಎಂಬುದು ಅವರ ಅನಿಸಿಕೆ. ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ವ್ಯರ್ಥ ಎನ್ನುವ ಝಿರೋಧ ಸಂಸ್ಥಾಪಕ ನಿಖಿಲ್ ಕಾಮತ್ ಅನಿಸಿಕೆಗೆ ಎಡಲ್ವೀಸ್ ಸಿಇಒ ರಾಧಿಕಾ ಗುಪ್ತಾ ಕೂಡ ಸಹಮತ ವ್ಯಕ್ತಪಡಿಸಿದಂತಿದೆ. ತಮ್ಮ ಎಕ್ಸ್ ಪೋಸ್ಟ್ವೊಂದರಲ್ಲಿ ರಾಧಿಕಾ ಗುಪ್ತಾ ಅವರು ಮನೆ ಆಸ್ತಿಯನ್ನು ಹಣವಾಗಿ ಪರಿವರ್ತಿಸಲು ಇರುವ ತೊಂದರೆಗಳನ್ನು ಮೂರು ನಿದರ್ಶನಗಳನ್ನು ಉದಾಹರಿಸಿದ್ದಾರೆ.
ಹಿರಿಯನ ನಾಗರಿಕರು ಡೆಟ್ ಮಾರುಕಟ್ಟೆಯಲ್ಲಿ ಹೆಚ್ಚು ಹೂಡಿಕೆ ಮಾಡಬೇಕು. ಈಕ್ವಿಟಿಯಲ್ಲಿ ಹೂಡಿಕೆ ಕಡಿಮೆ ಇರಬೇಕು ಎಂದು ಹೇಳುತ್ತೇವೆ. ಆದರೆ, ಲಿಕ್ವಿಡಿಟಿ ಇಲ್ಲದೇ ಇರುವುದು ಇನ್ನೂ ದೊಡ್ಡ ರಿಸ್ಕ್ ಎಂದು ರಾಧಿಕಾ ಗುಪ್ತಾ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಅವರ ಪ್ರಕಾರ, ಮನೆಮಾಲೀಕ ವೃದ್ಧರು ಎದುರಿಸುವ ಮೂರು ಸವಾಲುಗಳು ಇವು:
- ಬಾಡಿಗೆದಾರರು ಮನೆ ಖಾಲಿ ಮಾಡುವುದಿಲ್ಲ
- ತಮಗೆ ಅಗತ್ಯ ಇದ್ದ ಸಮಯದಲ್ಲಿ ಆಸ್ತಿ ಮಾರಾಟ ಆಗೊಲ್ಲ
- ಹೆಚ್ಚಿನ ವಹಿವಾಟು ಕ್ಯಾಷ್ನಲ್ಲೇ ಆಗಬೇಕು.
ಈ ಮೂರು ಸಂದರ್ಭಗಳಲ್ಲಿ ಮನೆ ಮಾಲೀಕರಾದ ಹಿರಿಯ ನಾಗಕರಿಗೆ ಹಣ ಬೇಕಾದಾಗ ಪಡೆಯಲು ಸಾಧ್ಯವಾಗದಾಗುತ್ತದೆ ಎಂದು ರಾಧಿಕಾ ಗುಪ್ತಾ ಹೇಳುತ್ತಾರೆ. ಅಂತಿಮವಾಗಿ ಅವರ ಸಲಹೆ ಎಂದರೆ, ನೀವು ಹೆಚ್ಚೆಚ್ಚು ವಯಸ್ಸಾದಂತೆ ಕ್ಯಾಷ್ ಸುಲಭವಾಗಿ ಸಿಗುವಂತೆ ಮಾಡಿಕೊಳ್ಳಿ.
Three cases known to me where senior citizens have property assets, need liquidity and are not able to get it because in different cases:
1. Tenant won’t vacate the house 2. Property market is not conducive to a sale at this time 3. Transaction will be all or largely cash…
— Radhika Gupta (@iRadhikaGupta) August 10, 2024
ಇದನ್ನೂ ಓದಿ: Gold: ಚಿನ್ನ ಖರೀದಿಸಬೇಕೆನ್ನುವವರಿಗೆ ಗೋಲ್ಡ್ ಇಟಿಎಫ್ ಉತ್ತಮ ಆಯ್ಕೆ; ಇಲ್ಲಿವೆ ಕಾರಣಗಳು…
ಅವರ ಈ ಪೋಸ್ಟ್ಗೆ ಅಮುಲ್ ಡಾಟ್ ಇಕ್ಸ್ಇ ಎಂಬ ಹೆಸರಿನ ಖಾತೆಯ ವ್ಯಕ್ತಿಯೊಬ್ಬರು ಪ್ರತಿಕ್ರಿಸಿ ಸಾದೋಹರಣೆ ಸಮೇತ ಸಹಮತ ವ್ಯಕ್ತಪಡಿಸಿದ್ದಾರೆ.
ಅವರ ಪ್ರಕಾರ ಅವರ ಕುಟುಂಬವು ಎರಡನೇ ಸ್ತರದ ನಗರದಲ್ಲಿ ಫ್ಲಾಟ್ ಖರೀದಿಸಿ ಸುಮಾರು 20 ವರ್ಷ ಕಾಲ ಇಎಂಐ ಕಟ್ಟಿದರಂತೆ. ಅದರ ಬೆಲೆಯು ಒಬ್ಬ ಸಾಮಾನ್ಯ ನೌಕರನ ಜೀವಮಾನದ ರಿಟೈರ್ಮೆಂಟ್ ಸೇವಿಂಗ್ಸ್ ಹಣಕ್ಕೆ ಸಮವಂತೆ. ಇಷ್ಟೇ ಕಂತಿನ ಹಣವನ್ನು ಒಂದು ಎಸ್ಐಪಿಗೆ ವಿನಿಯೋಗಿಸಿದ್ದರೆ ಲಿಕ್ವಿಡಿಟಿಯಾದರೂ ಸಿಗುತ್ತಿತ್ತು.
Hypothesis: Buying a house or a flat is a very sensitive, high impact decision
My family now owns a flat which is an illiquid asset because we are unable to sell it for last couple of years in a tier 2 city
we poured in years of EMI into that thing from 2000s to 2020
the…
— amul.exe (@amuldotexe) December 27, 2023
ಈಗ ನಮಗೆ ಆ ಫ್ಲಾಟ್ ಎಂಬುದು ಮಗ್ಗುಲ ಮುಳ್ಳಿನಂತಿದೆ. ಅದನ್ನು ಮಾರಿದರೂ ಕೂಡ ಅಧಿಕ ತೆರಿಗೆ ತಪ್ಪಿಸಲು 3 ವರ್ಷದಲ್ಲಿ ಮತ್ಯಾವುದಾದರೂ ರಿಯಲ್ ಎಸ್ಟೇಟ್ ಆಸ್ತಿಯಲ್ಲಿ ಮರು ಹೂಡಿಕೆ ಮಾಡಬೇಕಾಗುತ್ತದೆ ಎಂದು ಈ ಎಕ್ಸ್ ಬಳಕೆದಾರರು ತಮ್ಮ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ