Gold: ಚಿನ್ನ ಖರೀದಿಸಬೇಕೆನ್ನುವವರಿಗೆ ಗೋಲ್ಡ್ ಇಟಿಎಫ್ ಉತ್ತಮ ಆಯ್ಕೆ; ಇಲ್ಲಿವೆ ಕಾರಣಗಳು…

Physical gold vs gold ETF: ಚಿನ್ನದ ಮೇಲೆ ಹೂಡಿಕೆ ಮಾಡಬೇಕೆನ್ನುವವರಿಗೆ ಗೋಲ್ಡ್ ಇಟಿಎಫ್ ಒಳ್ಳೆಯ ಆಯ್ಕೆಯಾಗುತ್ತದೆ. ಭೌತಿಕ ಚಿನ್ನವನ್ನು ಖರೀದಿಸುವುದು ಹೆಚ್ಚಿನ ರಿಸ್ಕ್ ಇರುತ್ತದೆ. ಗೋಲ್ಡ್ ಇಟಿಎಫ್ ಎಲೆಕ್ಟ್ರಾನಿಕ್ ರೂಪದಲ್ಲಿ ಇರುವುದರಿಂದ ಕಳೆದುಹೋಗುವ ಭಯ ಇರುವುದಿಲ್ಲ. ಷೇರುಗಳ ವಹಿವಾಟಿಗೆ ವಿಧಿಸಲಾಗುವ ಶುಲ್ಕಗಳನ್ನು ಗೋಲ್ಡ್ ಇಟಿಎಫ್​ಗೂ ವಿಧಿಸಲಾಗುತ್ತದೆ. ಇದು ಬಿಟ್ಟರೆ ಬೇರೆ ವೆಚ್ಚಗಳಿರುವುದಿಲ್ಲ.

Gold: ಚಿನ್ನ ಖರೀದಿಸಬೇಕೆನ್ನುವವರಿಗೆ ಗೋಲ್ಡ್ ಇಟಿಎಫ್ ಉತ್ತಮ ಆಯ್ಕೆ; ಇಲ್ಲಿವೆ ಕಾರಣಗಳು...
ಗೋಲ್ಡ್ ಇಟಿಎಫ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 06, 2024 | 7:04 PM

ನೀವು ಹೂಡಿಕೆ ಉದ್ದೇಶದಿಂದ ಚಿನ್ನವನ್ನು ಖರೀದಿಸಬೇಕೆಂದಿದ್ದರೆ ಅದಕ್ಕೆ ಪರ್ಯಾಯ ಆಯ್ಕೆಗಳುಂಟು. ಭೌತಿಕ ಚಿನ್ನಕ್ಕೆ ಸದಾ ಕಾಲ ಬೇಡಿಕೆ ಇದ್ದೇ ಇರುತ್ತದೆ. ಈ ಚಿನ್ನ ಭೂಮಿಯಲ್ಲಿ ಸೀಮಿತ ಪ್ರಮಾಣದಲ್ಲಿ ಮಾತ್ರವೇ ಸಿಗುತ್ತದೆ. ಆಭರಣಕ್ಕೆ ಮಾತ್ರವಲ್ಲ, ಬೇರೆ ಬೇರೆ ಉದ್ದೇಶಗಳಿಗೂ ಚಿನ್ನದ ಬಳಕೆ ಆಗುತ್ತದೆ. ಮದುವೆ ಸಮಾರಂಭಕ್ಕೆ ಆಭರಣ ಖರೀದಿಸುವುದಾದರೆ ಭೌತಿಕ ಚಿನ್ನವನ್ನು ಖರೀದಿಸಬಹುದು. ಹೂಡಿಕೆಗಾಗಿ ಮಾತ್ರವೇ ಚಿನ್ನ ಬಯಸಿದರೆ ಗೋಲ್ಡ್ ಇಟಿಎಫ್, ಗೋಲ್ಡ್ ಮ್ಯೂಚುವಲ್ ಫಂಡ್, ಡಿಜಿಟಲ್ ಗೋಲ್ಡ್, ಸಾವರಿನ್ ಗೋಲ್ಡ್ ಬಾಂಡ್ ಇತ್ಯಾದಿ ಆಯ್ಕೆಗಳುಂಟು.

ಇಟಿಎಫ್​ಗಳು ಈಗೀಗ ಬಹಳ ಜನಪ್ರಿಯತೆ ಪಡೆಯುತ್ತಿವೆ. ಮ್ಯೂಚುವಲ್ ಫಂಡ್​ಗಳ ನಿರ್ವಹಣೆಗೆ ಆಗುವಂತೆ ಇದಕ್ಕೆ ಹೆಚ್ಚಿನ ವೆಚ್ಚ ಇರುವುದಿಲ್ಲ. ಷೇರು ವಿನಿಯಮ ಕೇಂದ್ರಗಳಲ್ಲಿ ಇವುಗಳನ್ನು ಟ್ರೇಡಿಂಗ್ ಮಾಡಬಹುದು. ಈ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್​ಗಳು ಚಿನ್ನಕ್ಕೂ ಇವೆ. ಗೋಲ್ಡ್ ಇಟಿಎಫ್​ಗಳು ಇತ್ತೀಚೆಗೆ ಬಹಳ ಬೇಡಿಕೆ ಪಡೆದಿವೆ.

ಇದನ್ನೂ ಓದಿ: ಜನರಿಗೆ ಲಾಭ, ಸರ್ಕಾರಕ್ಕೆ ಬಿಸಿತುಪ್ಪವಾಗಿರುವ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಿಂದ ಏನೇನು ಲಾಭ?

ಹೂಡಿಕೆಗಾಗಿ ನೀವು ಭೌತಿಕ ಚಿನ್ನವನ್ನು ಖರೀದಿಸಿದರೆ ಅದನ್ನು ಇಟ್ಟುಕೊಳ್ಳುವುದು ದೊಡ್ಡ ರಿಸ್ಕ್. ಒಡವೆ ಖರೀದಿಸಿದರೆ ಮೇಕಿಂಗ್ ಚಾರ್ಜಸ್, ವೇಸ್ಟೇಜ್ ಚಾರ್ಜಸ್ ಇತ್ಯಾದಿ ಕಳೆಯಲಾಗುತ್ತದೆ. ಚಿನ್ನದ ಗಟ್ಟಿಗಳನ್ನು ಬ್ಯಾಂಕ್​ನ ಲಾಕರ್​ನಲ್ಲಿಟ್ಟರೆ ಅದರ ನಿರ್ಹಣೆಗೆ ಹಣ ಕೊಡಬೇಕಾಗುತ್ತದೆ. ಮನೆಯಲ್ಲಿಟ್ಟರೆ ಕಳ್ಳತನದ ಭಯ ಇರುತ್ತದೆ. ಹೀಗಾಗಿ, ಭೌತಿಕ ಚಿನ್ನ ಅಷ್ಟು ಸುರಕ್ಷಿತವಲ್ಲ.

ಇಟಿಎಫ್​ಗಳ ಬೆಲೆ ಹೇಗೆ?

ಗೋಲ್ಡ್ ಇಟಿಎಫ್​ಗಳು ಭಾರತದೊಳಗಿನ ಚಿನ್ನದ ಬೆಲೆಯನ್ನು ಅನುಸರಿಸುತ್ತವೆ. ಈ ಇಟಿಎಫ್​ಗಳನ್ನು ಖರೀದಿಸಿದರೆ ಚಿನ್ನವನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಖರೀದಿಸಿದಂತಾಗುತ್ತದೆ. ಆದರೆ, ನೀವು ಇಟಿಎಫ್ ರಿಡೀಮ್ ಮಾಡಿದಾಗ ಭೌತಿಕ ಚಿನ್ನದ ಬದಲು ಹಣ ಸಿಗುತ್ತದೆ.

ಇದನ್ನೂ ಓದಿ: ಮುದ್ರಾ ಸ್ಕೀಮ್: 20 ಲಕ್ಷ ರೂವರೆಗೂ ಸಾಲ ನೀಡುವ ಪಿಎಂಎಂವೈ ಬಗ್ಗೆ ಪೂರ್ಣ ಮಾಹಿತಿ

ಗೋಲ್ಡ್ ಇಟಿಎಫ್​ಗಳ ಮೇಲೆ ಹೂಡಿಕೆ ಹೇಗೆ?

ಮ್ಯುಚುವಲ್ ಫಂಡ್ ಅನ್ನು ಖರೀದಿಸಲು ನೀವು ಡೀಮ್ಯಾಟ್ ಖಾತೆ ತೆರೆಯಲೇಬೇಕೆಂದಿಲ್ಲ. ಆದರೆ, ಇಟಿಎಫ್​ನಲ್ಲಿ ಹೂಡಿಕೆ ಮಾಡಲು ಡೀಮ್ಯಾಟ್ ಅಕೌಂಟ್ ಬೇಕಾಗುತ್ತದೆ. ಯಾಕೆಂದರೆ ಇಟಿಎಫ್​ಗಳನ್ನು ಡೀಮ್ಯಾಟ್ ರೂಪದಲ್ಲಿ ಸಂಗ್ರಹಿಸಲು ಪ್ರತ್ಯೇಕ ಖಾತೆ ಬೇಕಾಗುತ್ತದೆ. ಷೇರು ವಹಿವಾಟಿನಲ್ಲಿ ಇರುವ ದರಗಳು ಇಟಿಎಫ್​ಗೂ ಅನ್ವಯ ಆಗುತ್ತದೆ. ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಇತ್ಯಾದಿ ಇರುತ್ತದೆ. ಇದು ಬಿಟ್ಟರೆ ಬೇರೆ ಶುಲ್ಕವಾಗಲೀ, ತೆರಿಗೆಯಾಗಲೀ ಇರುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ