AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SGB Benefits: ಜನರಿಗೆ ಲಾಭ, ಸರ್ಕಾರಕ್ಕೆ ಬಿಸಿತುಪ್ಪವಾಗಿರುವ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಿಂದ ಏನೇನು ಲಾಭ?

Sovereign Gold Bond, know the benefits: 2015ರ ನವೆಂಬರ್​ನಲ್ಲಿ ಆರ್​ಬಿಐನಿಂದ ಆರಂಭಿಸಲಾದ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಕೈಬಿಡುವ ಆಲೋಚನೆಯಲ್ಲಿ ಸರ್ಕಾರ ಇದೆ. ಈ ಸ್ಕೀಮ್​ನಲ್ಲಿ ಹೂಡಿಕೆದಾರರಿಗೆ ಅಧಿಕ ರಿಟರ್ನ್ಸ್ ಕೊಡಲು ಸರ್ಕಾರಕ್ಕೆ ಕಷ್ಟವಾಗುವ ಸಾಧ್ಯತೆ ಇರುವುದರಿಂದ ಈ ಕ್ರಮಕ್ಕೆ ಆಲೋಚಿಸಿದೆ. ಚಿನ್ನದ ಮೌಲ್ಯಕ್ಕೆ ತಕ್ಕಂತೆ ರಿಟರ್ನ್ಸ್, ಹೂಡಿಕೆ ಮೊತ್ತಕ್ಕೆ ನಿಗದಿತ ಬಡ್ಡಿ ಆದಾಯ ಮತ್ತು ಹೂಡಿಕೆಗೆ ತೆರಿಗೆ ವಿನಾಯಿತಿ ಸಿಗುತ್ತದೆ.

SGB Benefits: ಜನರಿಗೆ ಲಾಭ, ಸರ್ಕಾರಕ್ಕೆ ಬಿಸಿತುಪ್ಪವಾಗಿರುವ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಿಂದ ಏನೇನು ಲಾಭ?
ಸಾವರಿನ್ ಗೋಲ್ಡ್ ಬಾಂಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 02, 2024 | 12:08 PM

Share

ನವದೆಹಲಿ, ಆಗಸ್ಟ್ 2: ಒಂಬತ್ತು ವರ್ಷಗಳ ಹಿಂದೆ ಬಹಳ ಭರವಸೆಗಳೊಂದಿಗೆ ಆರಂಭವಾದ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಕೈಬಿಡಲು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿರುವುದು ತಿಳಿದುಬಂದಿದೆ. ಹೂಡಿಕೆದಾರರಿಗೆ ನಿಗದಿತ ರಿಟರ್ನ್ಸ್ ಕೊಡಲು ಸರ್ಕಾರಕ್ಕೆ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಯೋಜನೆಯನ್ನೇ ಕೈಬಿಡಬಹುದು ಎನ್ನಲಾಗುತ್ತಿದೆ. ಇದೇ ಸೆಪ್ಟಂಬರ್ ತಿಂಗಳಲ್ಲಿ ಆರ್​ಬಿಐನಿಂದ ಒಂದು ಸಭೆ ಕರೆಯಲಾಗಿದ್ದು, ಅಲ್ಲಿ ಈ ಯೋಜನೆ ಮುಂದುವರಿಸಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆಯಾಗಲಿದೆ. ಅಂದೇ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ.

ಸಾರ್ವಜನಿಕರಿಂದ ಫಂಡ್​ಗಳನ್ನು ಸಂಗ್ರಹಿಸಲು ಮತ್ತು ಭೌತಿಕ ಚಿನ್ನಕ್ಕೆ ಬೇಡಿಕೆ ಹೆಚ್ಚಾಗದಂತೆ ನೋಡಿಕೊಳ್ಳಲು ಸರ್ಕಾರ ಸಾವರೀನ್ ಗೋಲ್ಡ್ ಬಾಂಡ್ ಎಂಬ ಆಕರ್ಷಕ ಸ್ಕೀಮ್ ಅನ್ನು 2015ರಲ್ಲಿ ಆರಂಭಿಸಿತು. ಇದು ಆರ್​ಬಿಐನಿಂದ ನಡೆಸಲಾಗುವ ಯೋಜನೆ. ಭೌತಿಕ ಚಿನ್ನದ ಬದಲು ಚಿನ್ನದ ಮೌಲ್ಯ ಅಥವಾ ಬೆಲೆಯ ಮೇಲೆ ನಡೆಯುವ ಹೂಡಿಕೆ. ಬಹಳ ಸರಳವಾದ ಈ ಯೋಜನೆಯಿಂದ ಹೂಡಿಕೆದಾರರಿಗೆ ಬಹುವಿಧದ ಲಾಭಗಳಿಗೆ ಅವಕಾಶ ಇದೆ.

ಇದನ್ನೂ ಓದಿ: ಸರ್ಕಾರಕ್ಕೆ ದುಬಾರಿಯಾಯ್ತಾ ಈ ಗೋಲ್ಡ್ ಸ್ಕೀಮ್? ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಅಂತ್ಯಗೊಳ್ಳುತ್ತಾ?

ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಏನಿದು?

ಆರ್​ಬಿಐ ವಿತರಿಸುವ ಸಾವರಿನ್ ಗೋಲ್ಡ್ ಬಾಂಡ್​ನಲ್ಲಿ ಭೌತಿಕ ಚಿನ್ನದ ಬದಲು ಚಿನ್ನದ ಬೆಲೆಗೆ ಅನುಗುಣವಾಗಿ ಹೂಡಿಕೆ ಮಾಡಬಹುದು. ಒಬ್ಬ ವ್ಯಕ್ತಿ ಒಂದು ಗ್ರಾಮ್​ನಿಂದ ಹಿಡಿದು 4 ಕಿಲೋವರೆಗೆ ಚಿನ್ನದ ಮೌಲ್ಯದ ಹಣವನ್ನು ಹೂಡಿಕೆ ಮಾಡಬಹುದು. 24 ಕ್ಯಾರಟ್ ಚಿನ್ನದ ಬೆಲೆ ಇವತ್ತು ಒಂದು ಗ್ರಾಮ್​ಗೆ 7,100 ರೂ ಇದೆ ಎಂದಿಟ್ಟುಕೊಳ್ಳಿ. ನಾಲ್ಕು ಕಿಲೋಗೆ 2.84 ಕೋಟಿ ರೂ ಆಗುತ್ತದೆ. ಅಂದರೆ ನೀವು 7,100 ರೂನಿಂದ ಆರಂಭವಾಗಿ 2.84 ಕೋಟಿ ರೂ ವರೆಗೆ ಹೂಡಿಕೆ ಮಾಡಬಹುದು.

ಎಂಟು ವರ್ಷಕ್ಕೆ ಈ ಬಾಂಡ್ ಮೆಚ್ಯೂರ್ ಆಗುತ್ತದೆ. ಆ ಸಂದರ್ಭದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 15,000 ರೂ ಆಗಿದ್ದರೆ, ಆಗ ನಿಮ್ಮ 1,00,000 ರೂ ಹೂಡಿಕೆಯು 2.11 ಲಕ್ಷ ರೂ ಆಗುತ್ತದೆ. ಚಿನ್ನದ ಮೌಲ್ಯ ಇನ್ನೂ ಕಡಿಮೆ ಇದ್ದರೆ ನಿಮಗೆ ಸಿಗುವ ರಿಟರ್ನ್ ಇನ್ನೂ ಕಡಿಮೆ ಇರುತ್ತದೆ. ಭೌತಿಕ ಚಿನ್ನಕ್ಕೆ ಸದಾ ಬೇಡಿಕೆ ಇದ್ದೇ ಇರುವುದರಿಂದ ವರ್ಷಕ್ಕೆ ಕನಿಷ್ಠ ಶೇ. 10ರಷ್ಟಾದರೂ ಬೆಲೆ ಹೆಚ್ಚಳ ಸಾಧ್ಯತೆ ಇರುತ್ತದೆ. ಹೀಗಾಗಿ, ಸಾವರಿನ್ ಗೋಲ್ಡ್ ಬಾಂಡ್ ಕೇವಲ ಸುರಕ್ಷಿತ ಹೂಡಿಕೆ ಮಾತ್ರವಲ್ಲ, ಲಾಭದಾಯಕ ಹೂಡಿಕೆಯೂ ಹೌದು.

ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ವರ್ಷಕ್ಕೆ ಶೇ. 2.5ರಷ್ಟು ಬಡ್ಡಿ ಆದಾಯ

ಸಾವರಿನ್ ಗೋಲ್ಡ್ ಬಾಂಡ್​ನ ಇನ್ನೊಂದು ವಿಶೇಷತೆ ಎಂದರೆ ಅದರಿಂದ ಸಿಗುವ ಬಡ್ಡಿ ಆದಾಯ. ನೀವು ಮಾಡಿದ ಹೂಡಿಕೆಗೆ ವಾರ್ಷಿಕ ಶೇ. 2.5ರ ಬಡ್ಡಿದರದಲ್ಲಿ ಆರು ತಿಂಗಳಿಗೊಮ್ಮೆ ನಿಮ್ಮ ಖಾತೆಗೆ ಹಣ ಜಮೆ ಆಗುತ್ತಾ ಹೋಗುತ್ತದೆ. ಇದು ಬಾಂಡ್ ಮೆಚ್ಯೂರ್ ಆದಾಗ ಸಿಗುವ ರಿಟರ್ನ್​ಗೆ ಪ್ರತ್ಯೇಕವಾಗಿ ಬರುವ ಆದಾಯ.

ಇದನ್ನೂ ಓದಿ: ಆಭರಣಕ್ಕೆ ಮೇಕಿಂಗ್ ಚಾರ್ಜಸ್, ವೇಸ್ಟೇಜ್ ಚಾರ್ಜಸ್ ಲೆಕ್ಕಾಚಾರ ಹೇಗಿರುತ್ತೆ? ಒಡವೆ ಖರೀದಿಸುವ ಮುನ್ನ ಈ ಸಂಗತಿ ತಿಳಿದಿರಿ

ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ತೆರಿಗೆ ಸಂಕಟ ಇಲ್ಲ…

ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಮಾಡುವ ಹೂಡಿಕೆಗೆ ಮತ್ತು ಅದರಿಂದ ಪಡೆಯುವ ಲಾಭಕ್ಕೆ ತೆರಿಗೆ ಇರುವುದಿಲ್ಲ ಎನ್ನುವುದು ಈ ಸ್ಕೀಮ್​ನ ಇನ್ನೊಂದು ಪ್ಲಸ್ ಪಾಯಿಂಟ್. ಈ ಎಲ್ಲಾ ಕಾರಣಕ್ಕೆ ಎಸ್​ಜಿಬಿ ಸ್ಕೀಮ್ ಜನಪ್ರಿಯತೆ ವರ್ಷಂಪ್ರತಿ ಹೆಚ್ಚುತ್ತಲೇ ಇದೆ. ಈ ಹಂತದಲ್ಲಿ ಸರ್ಕಾರ ಈ ಯೋಜನೆ ಕೈಬಿಟ್ಟರೆ ಹೂಡಿಕೆದಾರರಿಗೆ ನಿರಾಸೆಯಾಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ