ಆಭರಣಕ್ಕೆ ಮೇಕಿಂಗ್ ಚಾರ್ಜಸ್, ವೇಸ್ಟೇಜ್ ಚಾರ್ಜಸ್ ಲೆಕ್ಕಾಚಾರ ಹೇಗಿರುತ್ತೆ? ಒಡವೆ ಖರೀದಿಸುವ ಮುನ್ನ ಈ ಸಂಗತಿ ತಿಳಿದಿರಿ

What is gold jewellery making charges: ಚಿನ್ನದ ಆಭರಣಕ್ಕೆ ಭಾರೀ ಮೊತ್ತದ ಮೇಕಿಂಗ್ ಚಾರ್ಜಸ್ ಅಥವಾ ವೇಸ್ಟೇಜ್ ಚಾರ್ಜಸ್ ಹಾಕಲಾಗುತ್ತಿರುತ್ತದೆ. 10 ಗ್ರಾಮ್ ಚಿನ್ನಕ್ಕೆ ಮಾರುಕಟ್ಟೆ ಬೆಲೆ 67,000 ರೂ ಇದ್ದರೆ ಅಷ್ಟೇ ಗ್ರಾಮ್​ನ ಚಿನ್ನದ ಸರಕ್ಕೆ ಬೆಲೆ 75,000 ರೂ ಅಥವಾ ಇನ್ನೂ ಹೆಚ್ಚೇ ಇರಬಹುದು. ಈ ಒಡವೆ ತಯಾರಿಸಲು ಹಾಕಲಾಗುವ ಮಾನವ ಶ್ರಮ ಮತ್ತು ಸಮಯಕ್ಕೆ ಈ ಚಾರ್ಜಸ್ ಹಾಕಲಾಗುತ್ತದೆ.

ಆಭರಣಕ್ಕೆ ಮೇಕಿಂಗ್ ಚಾರ್ಜಸ್, ವೇಸ್ಟೇಜ್ ಚಾರ್ಜಸ್ ಲೆಕ್ಕಾಚಾರ ಹೇಗಿರುತ್ತೆ? ಒಡವೆ ಖರೀದಿಸುವ ಮುನ್ನ ಈ ಸಂಗತಿ ತಿಳಿದಿರಿ
ಆಭರಣ ಮಳಿಗೆ
Follow us
|

Updated on: Jul 12, 2024 | 3:15 PM

ಚಿನ್ನ ಒಡವೆ ಖರೀದಿಸುವಾಗ ನೀವು ಜಿಎಸ್​ಟಿ ಜೊತೆಗೆ ಮೇಕಿಂಗ್ ಚಾರ್ಜಸ್, ವೇಸ್ಟೇಜ್ ಚಾರ್ಜಸ್ ಇತ್ಯಾದಿ ಪದಗಳನ್ನು ಕೇಳಿರಬಹುದು. ಗ್ರಾಮ್​ಗೆ 6,700 ರೂ ಬೆಲೆ ಇದೆ ಎಂದು ಭಾವಿಸಿ ನೀವು ಒಡವೆ ಅಂಗಡಿಗೆ ಹೋಗಿ 10 ಗ್ರಾಮ್ ಆಭರವಣವೊಂದರ ಬೆಲೆ ನೋಡಿದರೆ ಅದು 72,000 ರೂ ಮೇಲ್ಪಟ್ಟು ಇರುತ್ತದೆ. ಜಿಎಸ್​ಟಿ ಸೇರಿಸಿದರೂ ಇಷ್ಟೊಂದು ಬೆಲೆ ಆಗಲ್ವಲ್ಲ ಎಂದು ನಿಮಗೆ ಗೊಂದಲವಾಗಬಹುದು. ಇಲ್ಲಿ ಈ ಒಡವೆಗೆ ಮೇಕಿಂಗ್ ಚಾರ್ಜಸ್ ಅಥವಾ ವೇಸ್ಟೇಜ್ ಚಾರ್ಜಸ್ ಅಥವಾ ಎರಡೂ ಚಾರ್ಜಸ್ ಹಾಕಿರಬಹುದು.

ಮೇಕಿಂಗ್ ಚಾರ್ಜಸ್ ಏನು?

ಯಾವುದೇ ಆಭರಣಕ್ಕಾದರೂ ಆಕರ್ಷಕವಾಗಿ ಕಾಣಲು ವಿವಿಧ ವಿನ್ಯಾಸಗಳನ್ನು ಮಾಡಲಾಗಿರುತ್ತದೆ. ಸೂಕ್ಷ್ಮ ಕೆತ್ತನೆ ಕೆಲಸಗಳನ್ನು ಮಾಡಲಾಗುತ್ತದೆ. ಸಾದಾ ಚಿನ್ನವನ್ನು ಒಡವೆಯಾಗಿ ಮಾಡಲು ಸಮಯ ಮತ್ತು ಶ್ರಮ ಇಡಿಯುತ್ತದೆ. ಇದರ ವೆಚ್ಚವೇ ಮೇಕಿಂಗ್ ಚಾರ್ಜಸ್ ಆಗಿರುತ್ತದೆ. ಒಡವೆಯ ವಿನ್ಯಾಸದ ಮೇಲೆ ಈ ಶುಲ್ಕ ಎಷ್ಟೆಂಬುದು ನಿರ್ಧಾರ ಆಗುತ್ತದೆ. ಹೆಚ್ಚಿನ ಕೆತ್ತನೆ ಕೆಲಸ ಇದ್ದರೆ ಮೇಕಿಂಗ್ ಚಾರ್ಜಸ್ ಹೆಚ್ಚಿರುತ್ತದೆ.

ವೇಸ್ಟೇಜ್ ಚಾರ್ಜಸ್

ನೀವು 15 ಗ್ರಾಮ್​ನ ಮತ್ತು ನಿರ್ದಿಷ್ಟ ವಿನ್ಯಾಸದ ಸರಕ್ಕೆ ಆರ್ಡರ್ ಕೊಟ್ಟಿರುತ್ತೀರಿ. ಈ ಒಡವೆ ತಯಾರಿಸಲು ಚಿನ್ನದ ಗಟ್ಟಿಯನ್ನು ಕರಗಿಸಿ, ಅದಕ್ಕೆ ನಿರ್ದಿಷ್ಟ ಆಕಾರ ಕೊಡುವ ಕೆಲಸ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಒಂದಷ್ಟು ಚಿನ್ನ ನಷ್ಟವಾಗಿ ಹೋಗುತ್ತದೆ. ನಿಮ್ಮ 15 ಗ್ರಾಮ್​ನ ಚಿನ್ನದ ಸರವನ್ನು ತಯಾರಿಸಲು ಒಡವೆ ಅಂಗಡಿಯವರು 15.30 ಗ್ರಾಮ್ ಚಿನ್ನವನ್ನು ಬಳಸಿರಬಹುದು. 300 ಮಿಲಿಗ್ರಾಮ್​ನಷ್ಟು ಚಿನ್ನದ ನಷ್ಟವನ್ನು ವೇಸ್ಟೇಜ್ ಚಾರ್ಜಸ್ ಮೂಲಕ ಗ್ರಾಹಕರಿಂದ ಪಡೆಯಲಾಗುತ್ತದೆ.

ಇದನ್ನೂ ಓದಿ: ತೀರುತ್ತಿಲ್ಲ ಸೆಂಟ್ರಲ್ ಬ್ಯಾಂಕ್​ಗಳ ಚಿನ್ನದ ದಾಹ; ಈ ವರ್ಷ ಬೆಲೆ ಬಹಳ ಹೆಚ್ಚಾಗುವ ಭೀತಿ

ಮೇಕಿಂಗ್ ಚಾರ್ಜ್, ವೇಸ್ಟೇಜ್ ಚಾರ್ಜ್ ಕಡಿಮೆ ಮಾಡಲು…

ನಿಮ್ಮ ಒಡವೆಯ ವಿನ್ಯಾಸ ಹೆಚ್ಚು ಸಂಕೀರ್ಣವಾಗಿದ್ದಷ್ಟೂ ಮೇಕಿಂಗ್ ಚಾರ್ಜ್ ಅಥವಾ ವೇಸ್ಟೇಜ್ ಚಾರ್ಜ್ ಸಹಜವಾಗಿ ಹೆಚ್ಚಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟೂ ಸರಳ ಡಿಸೈನ್ ಇರುವ ಒಡವೆಯನ್ನು ಆರಿಸಿಕೊಳ್ಳಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ಮಾರ್ಟಿನ್’ ಖದರ್ ಬೇರೆಯದ್ದೇ ರೀತಿ ಇರುತ್ತದೆ: ಧ್ರುವ ಸರ್ಜಾ
‘ಮಾರ್ಟಿನ್’ ಖದರ್ ಬೇರೆಯದ್ದೇ ರೀತಿ ಇರುತ್ತದೆ: ಧ್ರುವ ಸರ್ಜಾ
PSI ಪರಶುರಾಮ್ ಮೃತ ದೇಹ ನೋಡಿ ಕಣ್ಣೀರಿಟ್ಟ ಅಮ್ಮ
PSI ಪರಶುರಾಮ್ ಮೃತ ದೇಹ ನೋಡಿ ಕಣ್ಣೀರಿಟ್ಟ ಅಮ್ಮ
ಭಾರೀ ಮಳೆಗೆ ಕೊಲ್ಕತ್ತಾ ವಿಮಾನ ನಿಲ್ದಾಣದ ರನ್‌ವೇ ಜಲಾವೃತ
ಭಾರೀ ಮಳೆಗೆ ಕೊಲ್ಕತ್ತಾ ವಿಮಾನ ನಿಲ್ದಾಣದ ರನ್‌ವೇ ಜಲಾವೃತ
ಊರುಗೋಲಿನ ಸಹಾಯದಿಂದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಬಿಜೆಪಿ ಕಾರ್ಯಕರ್ತ
ಊರುಗೋಲಿನ ಸಹಾಯದಿಂದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಬಿಜೆಪಿ ಕಾರ್ಯಕರ್ತ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ಲ್ಯಾಬ್ ಟೆಕ್ನಿಷಿಯನ್‌; ದಂಗಾದ ರೋಗಿಗಳು
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ಲ್ಯಾಬ್ ಟೆಕ್ನಿಷಿಯನ್‌; ದಂಗಾದ ರೋಗಿಗಳು
ನನ್ನ ಗಂಡನಿಗೆ MLA ಮತ್ತು ಮಗ 30 ಲಕ್ಷಕ್ಕೆ ಟಾರ್ಚರ್ ಕೊಟ್ಟವ್ರೆ ಸರ್
ನನ್ನ ಗಂಡನಿಗೆ MLA ಮತ್ತು ಮಗ 30 ಲಕ್ಷಕ್ಕೆ ಟಾರ್ಚರ್ ಕೊಟ್ಟವ್ರೆ ಸರ್
ಪಾದಯಾತ್ರೆ ಮುಗಿಯುವುದರೊಳಗೆ ಸಿಎಂ ರಾಜೀನಾಮೆ ಕೊಡುತ್ತಾರೆ: ಯಡಿಯೂರಪ್ಪ
ಪಾದಯಾತ್ರೆ ಮುಗಿಯುವುದರೊಳಗೆ ಸಿಎಂ ರಾಜೀನಾಮೆ ಕೊಡುತ್ತಾರೆ: ಯಡಿಯೂರಪ್ಪ
BJP JDS Padayatra: ಮೈಸೂರು ಚಲೋ ಸಮಾವೇಶದಲ್ಲಿ ಪ್ರಹ್ಲಾದ್ ಜೋಶಿ ಭಾಷಣ
BJP JDS Padayatra: ಮೈಸೂರು ಚಲೋ ಸಮಾವೇಶದಲ್ಲಿ ಪ್ರಹ್ಲಾದ್ ಜೋಶಿ ಭಾಷಣ
ನಥಿಂಗ್ ಫೋನ್ ಸಿರೀಸ್​ನಲ್ಲಿ ಬಂತು ಮತ್ತೊಂದು ಸೂಪರ್ ಡಿಸೈನ್ ಫೋನ್
ನಥಿಂಗ್ ಫೋನ್ ಸಿರೀಸ್​ನಲ್ಲಿ ಬಂತು ಮತ್ತೊಂದು ಸೂಪರ್ ಡಿಸೈನ್ ಫೋನ್
ಬೌಂಡರಿ ಲೈನ್​ನಲ್ಲಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಮಿಚೆಲ್ ಸ್ಯಾಂಟ್ನರ್
ಬೌಂಡರಿ ಲೈನ್​ನಲ್ಲಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಮಿಚೆಲ್ ಸ್ಯಾಂಟ್ನರ್