AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐದು ವರ್ಷಕ್ಕೆ ಮಾತ್ರ ಹೂಡಿಕೆ ಮಾಡಬೇಕಾ? ಇಲ್ಲಿವೆ ಕೆಲ ಉತ್ತಮ ಆಯ್ಕೆಗಳು

Five year period investment plans: ನೀವು ಅಲ್ಪಾವಧಿಗೆ ಅಂದರೆ ಐದು ವರ್ಷದವರೆಗೆ ಹೂಡಿಕೆ ಮಾಡುವ ನಿರ್ಧಾರ ಮಾಡಿದ್ದರೆ ಹಲವು ಆಯ್ಕೆಗಳಿವೆ. ಅದರಲ್ಲಿ ಹೆಚ್ಚು ರಿಸ್ಕ್ ಇಲ್ಲದ, ಮತ್ತು ರಿಟರ್ನ್ಸ್ ಹೆಚ್ಚು ಇರುವ ಕೆಲ ಹೂಡಿಕೆ ಪ್ಲಾನ್​ಗಳು ಮತ್ತವುಗಳ ವಿವರವನ್ನು ಇಲ್ಲಿ ನೀವು ಕಾಣಬಹುದು.

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 21, 2024 | 5:34 PM

Share
ಇಎಲ್​ಎಸ್​ಎಸ್ ಫಂಡ್​ಗಳು.... ಈಕ್ವಿಟಿಗೆ ಜೋಡಿತವಾದ ಉಳಿತಾಯ ಯೋಜನೆಗಳಾದ ಇವು ತೆರಿಗೆ ಲಾಭ ಕೊಡಬಲ್ಲ ಮ್ಯೂಚುವಲ್ ಫಂಡ್​ಗಳಾಗಿವೆ. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗಿನ ಹೂಡಿಕೆಗೆ ಇದು ತೆರಿಗೆ ವಿನಾಯಿತಿ ನೀಡುತ್ತದೆ. ಒಂದು ಲಕ್ಷ ರೂವರೆಗೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್​ನಿಂದ ವಿನಾಯಿತಿ ಕೊಡುತ್ತದೆ. ಎಸ್​ಐಪಿ ಮೂಲಕ ನೀವು ಹೂಡಿಕೆ ಮಾಡಬಹುದು. ಇಎಲ್​ಎಸ್​ಎಸ್ ಬೇಡವಾದಲ್ಲಿ ಬೇರೆ ಯಾವುದಾದರೂ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಬಹುದು.

1 / 7
ಫಿಕ್ಸೆಡ್ ಡೆಪಾಸಿಟ್ ಮತ್ತು ರಿಕರಿಂಗ್ ಡೆಪಾಸಿಟ್​ಗಳು ಮತ್ತಷ್ಟು ಆಯ್ಕೆಯ ಅವಕಾಶ ಒದಗಿಸುತ್ತವೆ. ಈಗ ಬಹುತೇಕ ಎಲ್ಲಾ ಬ್ಯಾಂಕುಗಳು ಠೇವಣಿ ದರಗಳನ್ನು ಹೆಚ್ಚಿಸಿವೆ. ಫಿಕ್ಸೆಡ್ ಡೆಪಾಸಿಟ್​ನಲ್ಲಿ ಹಣ ಇರಿಸಲು ಇದು ಉತ್ತಮ ಕಾಲ. ಶೇ. 7.5ರಿಂದ ಶೇ. 9ರವರೆಗೂ ಬಡ್ಡಿ ನಿರೀಕ್ಷಿಸಬಹುದು. ತೆರಿಗೆ ಉಳಿಸಲು ಎದುರುನೋಡುತ್ತಿದ್ದರೆ ಟ್ಯಾಕ್ಸ್ ಸೇವಿಂಗ್ ಎಫ್​ಡಿಗಳೂ ಇವೆ. ಆವರ್ತಿತ ಠೇವಣಿ ಅಥವಾ ಆರ್​​ಡಿಯಲ್ಲೂ ಹೂಡಿಕೆ ಮಾಡಬಹುದು.

2 / 7
ಚಿನ್ನದ ಮೇಲೂ ಹೂಡಿಕೆ ಮಾಡಬಹುದು. ಡಿಜಿಟಲ್ ಗೋಲ್ಡ್ ಖರೀದಿಸಬಹುದು. ಕೊಳ್ಳುವಾಗ ಶೇ. 3 ಜಿಎಸ್​​ಟಿ ಇರುತ್ತದೆ. ಮಾರುವಾಗಲೂ ಜಿಎಸ್​ಟಿ ಅನ್ವಯ ಆಗುತ್ತದೆ. ಹಾಗೆಯೇ ಲಾಭದ ಮೇಲೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ವಯ ಆಗುತ್ತದೆ. ಇವೆಲ್ಲವನ್ನೂ ಪರಿಗಣಿಸಿಯೂ ಐದು ವರ್ಷದಲ್ಲಿ ಚಿನ್ನದಿಂದ ಉತ್ತಮ ಎನಿಸುವ ರಿಟರ್ನ್ಸ್ ನಿರೀಕ್ಷಿಸಬಹುದು.

3 / 7
ಫಿಕ್ಸೆಡ್ ಮೆಚ್ಯೂರಿಟಿ ಪ್ಲಾನ್ ಅಥವಾ ಎಫ್​ಎಂಪಿಗಳು ಕ್ಲೋಸ್ ಎಂಡೆಡ್ ಡೆಟ್ ಮ್ಯೂಚುವಲ್ ಫಂಡ್​ಗಳಾಗಿವೆ. ಒಂದರಿಂದ ಐದು ವರ್ಷದ ಅವಧಿಗೆ ನಿಗದಿತ ಅವಧಿಯವರೆಗೆ ಮಾತ್ರ ಇವು ಇರುತ್ತವೆ. ಸರ್ಕಾರದ ಮತ್ತು ಕಾರ್ಪೊರೆಟ್ ಸಂಸ್ಥೆಗಳ ಬಾಂಡ್​ಗಳ ಮೇಲೆ ಈ ಫಂಡ್​ಗಳು ಹೂಡಿಕೆ ಮಾಡುತ್ತವೆ. ಹೆಚ್ಚುಕಡಿಮೆ ಎಫ್​ಡಿಯಷ್ಟು ರಿಟರ್ನ್ ಅನ್ನು ಇದರಲ್ಲಿ ನೀವು ನಿರೀಕ್ಷಿಸಬಹುದು.

4 / 7
ಎನ್​ಎಸ್​ಸಿ, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್. ಐದು ವರ್ಷದ ಅವಧಿಯ ಈ ಹೂಡಿಕೆ ಯೋಜನೆಯಲ್ಲಿ ವರ್ಷಕ್ಕೆ ಶೇ. 7.7ರಂತೆ ಬಡ್ಡಿದರ ಸಿಗುತ್ತದೆ. ಒಂದು ಸಾವಿರ ರೂನಿಂದ ಪ್ರಾರಂಭವಾಗಿ ಎಷ್ಟು ಬೇಕಾದರೂ ಹಣವನ್ನು ನೀವು ಇದರಲ್ಲಿ ತೊಡಗಿಸಬಹುದು. ಸರ್ಕಾರ ಬೆಂಬಲಿತವಾಗಿರುವ ಈ ಯೋಜನೆಯಲ್ಲಿ ಸೆಕ್ಷನ್ 80ಸಿ ಅಡಿಯಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗಿನ ಹೂಡಿಕೆಗೆ ಡಿಡಕ್ಷನ್ ಪಡೆಯಬಹುದು.

5 / 7
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್. ಇದರಲ್ಲಿ 1, 2, 3 ಮತ್ತು 5 ವರ್ಷದ ಅವಧಿಯ ಠೇವಣಿ ಆಯ್ಕೆಗಳಿವೆ. ಐದು ವರ್ಷದ ಟೈಮ್ ಡೆಪಾಸಿಟ್​ಗೆ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ಪ್ರತೀ ಮೂರು ತಿಂಗಳಿಗೊಮ್ಮೆ ಬಡ್ಡಿ ಎಣಿಕೆ ಮಾಡಲಾಗುತ್ತದೆ. ಹೀಗಾಗಿ, ಹೂಡಿಕೆಯ ಮೇಲೆ ಕಾಂಪೌಂಡಿಂಗ್ ಎಫೆಕ್ಟ್ ಇರುತ್ತದೆ. ಹೆಚ್ಚು ರಿಟರ್ನ್ ಸಿಗುತ್ತದೆ.

6 / 7
ಯುಲಿಪ್ ಅಥವಾ ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್​ಗಳನ್ನು ಬಳಸಬಹುದು. ಇವು ಲೈಫ್ ಇನ್ಷೂರೆನ್ಸ್ ಮತ್ತು ಇನ್ವೆಸ್ಟ್​ಮೆಂಟ್ ಎರಡನ್ನೂ ಮಿಳಿತಗೊಂಡಿರುವ ಯೋಜನೆಗಳು. ಇದಕ್ಕೆ ಪಾವತಿಸುವ ಪ್ರೀಮಿಯಮ್​ನಲ್ಲಿ ಒಂದು ಭಾಗವು ಇನ್ಷೂರೆನ್ಸ್ ಕಡೆಗೆ ಹೋಗುತ್ತದೆ. ಉಳಿದ ಹಣವನ್ನು ಈಕ್ವಿಟಿ ಮತ್ತು ಡೆಟ್ ಫಂಡ್​ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಐದು ವರ್ಷದ ಲಾಕ್ ಇನ್ ಅವಧಿ ಇರುತ್ತದೆ.

7 / 7
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ

ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು

ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ

ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ

ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?

ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ