- Kannada News Photo gallery Five year period investments, here are few good plans, details in Kannada
ಐದು ವರ್ಷಕ್ಕೆ ಮಾತ್ರ ಹೂಡಿಕೆ ಮಾಡಬೇಕಾ? ಇಲ್ಲಿವೆ ಕೆಲ ಉತ್ತಮ ಆಯ್ಕೆಗಳು
Five year period investment plans: ನೀವು ಅಲ್ಪಾವಧಿಗೆ ಅಂದರೆ ಐದು ವರ್ಷದವರೆಗೆ ಹೂಡಿಕೆ ಮಾಡುವ ನಿರ್ಧಾರ ಮಾಡಿದ್ದರೆ ಹಲವು ಆಯ್ಕೆಗಳಿವೆ. ಅದರಲ್ಲಿ ಹೆಚ್ಚು ರಿಸ್ಕ್ ಇಲ್ಲದ, ಮತ್ತು ರಿಟರ್ನ್ಸ್ ಹೆಚ್ಚು ಇರುವ ಕೆಲ ಹೂಡಿಕೆ ಪ್ಲಾನ್ಗಳು ಮತ್ತವುಗಳ ವಿವರವನ್ನು ಇಲ್ಲಿ ನೀವು ಕಾಣಬಹುದು.
Updated on: Aug 21, 2024 | 5:34 PM

ಇಎಲ್ಎಸ್ಎಸ್ ಫಂಡ್ಗಳು.... ಈಕ್ವಿಟಿಗೆ ಜೋಡಿತವಾದ ಉಳಿತಾಯ ಯೋಜನೆಗಳಾದ ಇವು ತೆರಿಗೆ ಲಾಭ ಕೊಡಬಲ್ಲ ಮ್ಯೂಚುವಲ್ ಫಂಡ್ಗಳಾಗಿವೆ. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗಿನ ಹೂಡಿಕೆಗೆ ಇದು ತೆರಿಗೆ ವಿನಾಯಿತಿ ನೀಡುತ್ತದೆ. ಒಂದು ಲಕ್ಷ ರೂವರೆಗೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ನಿಂದ ವಿನಾಯಿತಿ ಕೊಡುತ್ತದೆ. ಎಸ್ಐಪಿ ಮೂಲಕ ನೀವು ಹೂಡಿಕೆ ಮಾಡಬಹುದು. ಇಎಲ್ಎಸ್ಎಸ್ ಬೇಡವಾದಲ್ಲಿ ಬೇರೆ ಯಾವುದಾದರೂ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಬಹುದು.

ಫಿಕ್ಸೆಡ್ ಡೆಪಾಸಿಟ್ ಮತ್ತು ರಿಕರಿಂಗ್ ಡೆಪಾಸಿಟ್ಗಳು ಮತ್ತಷ್ಟು ಆಯ್ಕೆಯ ಅವಕಾಶ ಒದಗಿಸುತ್ತವೆ. ಈಗ ಬಹುತೇಕ ಎಲ್ಲಾ ಬ್ಯಾಂಕುಗಳು ಠೇವಣಿ ದರಗಳನ್ನು ಹೆಚ್ಚಿಸಿವೆ. ಫಿಕ್ಸೆಡ್ ಡೆಪಾಸಿಟ್ನಲ್ಲಿ ಹಣ ಇರಿಸಲು ಇದು ಉತ್ತಮ ಕಾಲ. ಶೇ. 7.5ರಿಂದ ಶೇ. 9ರವರೆಗೂ ಬಡ್ಡಿ ನಿರೀಕ್ಷಿಸಬಹುದು. ತೆರಿಗೆ ಉಳಿಸಲು ಎದುರುನೋಡುತ್ತಿದ್ದರೆ ಟ್ಯಾಕ್ಸ್ ಸೇವಿಂಗ್ ಎಫ್ಡಿಗಳೂ ಇವೆ. ಆವರ್ತಿತ ಠೇವಣಿ ಅಥವಾ ಆರ್ಡಿಯಲ್ಲೂ ಹೂಡಿಕೆ ಮಾಡಬಹುದು.

ಚಿನ್ನದ ಮೇಲೂ ಹೂಡಿಕೆ ಮಾಡಬಹುದು. ಡಿಜಿಟಲ್ ಗೋಲ್ಡ್ ಖರೀದಿಸಬಹುದು. ಕೊಳ್ಳುವಾಗ ಶೇ. 3 ಜಿಎಸ್ಟಿ ಇರುತ್ತದೆ. ಮಾರುವಾಗಲೂ ಜಿಎಸ್ಟಿ ಅನ್ವಯ ಆಗುತ್ತದೆ. ಹಾಗೆಯೇ ಲಾಭದ ಮೇಲೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ವಯ ಆಗುತ್ತದೆ. ಇವೆಲ್ಲವನ್ನೂ ಪರಿಗಣಿಸಿಯೂ ಐದು ವರ್ಷದಲ್ಲಿ ಚಿನ್ನದಿಂದ ಉತ್ತಮ ಎನಿಸುವ ರಿಟರ್ನ್ಸ್ ನಿರೀಕ್ಷಿಸಬಹುದು.

ಫಿಕ್ಸೆಡ್ ಮೆಚ್ಯೂರಿಟಿ ಪ್ಲಾನ್ ಅಥವಾ ಎಫ್ಎಂಪಿಗಳು ಕ್ಲೋಸ್ ಎಂಡೆಡ್ ಡೆಟ್ ಮ್ಯೂಚುವಲ್ ಫಂಡ್ಗಳಾಗಿವೆ. ಒಂದರಿಂದ ಐದು ವರ್ಷದ ಅವಧಿಗೆ ನಿಗದಿತ ಅವಧಿಯವರೆಗೆ ಮಾತ್ರ ಇವು ಇರುತ್ತವೆ. ಸರ್ಕಾರದ ಮತ್ತು ಕಾರ್ಪೊರೆಟ್ ಸಂಸ್ಥೆಗಳ ಬಾಂಡ್ಗಳ ಮೇಲೆ ಈ ಫಂಡ್ಗಳು ಹೂಡಿಕೆ ಮಾಡುತ್ತವೆ. ಹೆಚ್ಚುಕಡಿಮೆ ಎಫ್ಡಿಯಷ್ಟು ರಿಟರ್ನ್ ಅನ್ನು ಇದರಲ್ಲಿ ನೀವು ನಿರೀಕ್ಷಿಸಬಹುದು.

ಎನ್ಎಸ್ಸಿ, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್. ಐದು ವರ್ಷದ ಅವಧಿಯ ಈ ಹೂಡಿಕೆ ಯೋಜನೆಯಲ್ಲಿ ವರ್ಷಕ್ಕೆ ಶೇ. 7.7ರಂತೆ ಬಡ್ಡಿದರ ಸಿಗುತ್ತದೆ. ಒಂದು ಸಾವಿರ ರೂನಿಂದ ಪ್ರಾರಂಭವಾಗಿ ಎಷ್ಟು ಬೇಕಾದರೂ ಹಣವನ್ನು ನೀವು ಇದರಲ್ಲಿ ತೊಡಗಿಸಬಹುದು. ಸರ್ಕಾರ ಬೆಂಬಲಿತವಾಗಿರುವ ಈ ಯೋಜನೆಯಲ್ಲಿ ಸೆಕ್ಷನ್ 80ಸಿ ಅಡಿಯಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗಿನ ಹೂಡಿಕೆಗೆ ಡಿಡಕ್ಷನ್ ಪಡೆಯಬಹುದು.

ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್. ಇದರಲ್ಲಿ 1, 2, 3 ಮತ್ತು 5 ವರ್ಷದ ಅವಧಿಯ ಠೇವಣಿ ಆಯ್ಕೆಗಳಿವೆ. ಐದು ವರ್ಷದ ಟೈಮ್ ಡೆಪಾಸಿಟ್ಗೆ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ಪ್ರತೀ ಮೂರು ತಿಂಗಳಿಗೊಮ್ಮೆ ಬಡ್ಡಿ ಎಣಿಕೆ ಮಾಡಲಾಗುತ್ತದೆ. ಹೀಗಾಗಿ, ಹೂಡಿಕೆಯ ಮೇಲೆ ಕಾಂಪೌಂಡಿಂಗ್ ಎಫೆಕ್ಟ್ ಇರುತ್ತದೆ. ಹೆಚ್ಚು ರಿಟರ್ನ್ ಸಿಗುತ್ತದೆ.

ಯುಲಿಪ್ ಅಥವಾ ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್ಗಳನ್ನು ಬಳಸಬಹುದು. ಇವು ಲೈಫ್ ಇನ್ಷೂರೆನ್ಸ್ ಮತ್ತು ಇನ್ವೆಸ್ಟ್ಮೆಂಟ್ ಎರಡನ್ನೂ ಮಿಳಿತಗೊಂಡಿರುವ ಯೋಜನೆಗಳು. ಇದಕ್ಕೆ ಪಾವತಿಸುವ ಪ್ರೀಮಿಯಮ್ನಲ್ಲಿ ಒಂದು ಭಾಗವು ಇನ್ಷೂರೆನ್ಸ್ ಕಡೆಗೆ ಹೋಗುತ್ತದೆ. ಉಳಿದ ಹಣವನ್ನು ಈಕ್ವಿಟಿ ಮತ್ತು ಡೆಟ್ ಫಂಡ್ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಐದು ವರ್ಷದ ಲಾಕ್ ಇನ್ ಅವಧಿ ಇರುತ್ತದೆ.




