Gold Silver Price on 30th August: ಚಿನ್ನ, ಬೆಳ್ಳಿ ಬೆಲೆಗಳೆರಡೂ ಇಳಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2024 August 30th: ಭಾರತದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 10 ರೂನಷ್ಟು ಕಡಿಮೆ ಆಗಿದೆ. ಆಭರಣ ಚಿನ್ನದ ಬೆಲೆ 6,715 ರೂ ಇದ್ದದ್ದು 6,705 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 7,315 ರೂಗೆ ಇಳಿದಿದೆ. ವಿದೇಶಗಳಲ್ಲಿ ವಿವಿಧೆಡೆ ಚಿನ್ನದ ಬೆಲೆಯಲ್ಲಿ ಏರಿಳಿತಗಳಾಗಿವೆ.

Gold Silver Price on 30th August: ಚಿನ್ನ, ಬೆಳ್ಳಿ ಬೆಲೆಗಳೆರಡೂ ಇಳಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ

Updated on: Aug 30, 2024 | 10:43 AM

ಬೆಂಗಳೂರು, ಆಗಸ್ಟ್ 30: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಂದು ಶುಕ್ರವಾರ ಇಳಿಕೆ ಕಂಡಿವೆ. ಚಿನ್ನದ ಬೆಲೆ ಗ್ರಾಮ್​ಗೆ 10 ರೂನಷ್ಟು ಇಳಿಕೆ ಆಗಿದೆ. ಅಪರಂಜಿ ಚಿನ್ನ ಮತ್ತು ಆಭರಣ ಚಿನ್ನಗಳೆರಡರ ಬೆಲೆಯೂ ಸಮವಾಗಿ ಇಳಿದಿವೆ. ಬೆಳ್ಳಿ ಬೆಲೆ ಮುಂಬೈ ಮೊದಲಾದ ಕೆಲವೆಡೆ ಗ್ರಾಮ್​ಗೆ 10 ಪೈಸೆಯಷ್ಟು ಕಡಿಮೆ ಆಗಿದೆ. ಬೆಂಗಳೂರಿನಲ್ಲಿ ಗ್ರಾಮ್​ಗೆ 83 ರೂ ಇದ್ದ ಬೆಲೆ ಇಂದು 87 ರು ಗಡಿ ದಾಟಿದೆ. ಆದರೆ, ಮುಂಬೈಗಿಂತಲೂ ಬೆಲೆ ತುಸು ಕಡಿಮೆ. ಚೆನ್ನೈ, ಕೇರಳ ಮೊದಲಾದೆಡೆ ಬೆಳ್ಳಿ ಬೆಲೆ 93.50 ರೂ ಇದ್ದದ್ದು 93 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,050 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,150 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,840 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 67,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,750 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 30ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,050 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,150 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 884 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,050 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,150 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 875 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 67,050 ರೂ
  • ಚೆನ್ನೈ: 67,050 ರೂ
  • ಮುಂಬೈ: 67,050 ರೂ
  • ದೆಹಲಿ: 67,200 ರೂ
  • ಕೋಲ್ಕತಾ: 67,050 ರೂ
  • ಕೇರಳ: 67,050 ರೂ
  • ಅಹ್ಮದಾಬಾದ್: 67,100 ರೂ
  • ಜೈಪುರ್: 67,200 ರೂ
  • ಲಕ್ನೋ: 67,200 ರೂ
  • ಭುವನೇಶ್ವರ್: 67,050 ರೂ

ಇದನ್ನೂ ಓದಿ: ನೂರು ಜಿಬಿ ಉಚಿತ ಕ್ಲೌಡ್ ಸ್ಟೋರೇಜ್: ಜಿಯೋ ಬಳಕೆದಾರರಿಗೆ ರಿಲಾಯನ್ಸ್ ಗಿಫ್ಟ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,460 ರಿಂಗಿಟ್ (67,230 ರುಪಾಯಿ)
  • ದುಬೈ: 2,822.50 ಡಿರಾಮ್ (64,470 ರುಪಾಯಿ)
  • ಅಮೆರಿಕ: 765 ಡಾಲರ್ (64,180 ರುಪಾಯಿ)
  • ಸಿಂಗಾಪುರ: 1,025 ಸಿಂಗಾಪುರ್ ಡಾಲರ್ (66,060 ರುಪಾಯಿ)
  • ಕತಾರ್: 2,850 ಕತಾರಿ ರಿಯಾಲ್ (65,560 ರೂ)
  • ಸೌದಿ ಅರೇಬಿಯಾ: 2,890 ಸೌದಿ ರಿಯಾಲ್ (64,620 ರುಪಾಯಿ)
  • ಓಮನ್: 300.50 ಒಮಾನಿ ರಿಯಾಲ್ (65,450 ರುಪಾಯಿ)
  • ಕುವೇತ್: 228.90 ಕುವೇತಿ ದಿನಾರ್ (62,840 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,750 ರೂ
  • ಚೆನ್ನೈ: 9,300 ರೂ
  • ಮುಂಬೈ: 8,840 ರೂ
  • ದೆಹಲಿ: 8,840 ರೂ
  • ಕೋಲ್ಕತಾ: 8,840 ರೂ
  • ಕೇರಳ: 9,300 ರೂ
  • ಅಹ್ಮದಾಬಾದ್: 8,840 ರೂ
  • ಜೈಪುರ್: 8,840 ರೂ
  • ಲಕ್ನೋ: 8,840 ರೂ
  • ಭುವನೇಶ್ವರ್: 9,300 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us