ನೂರು ಜಿಬಿ ಉಚಿತ ಕ್ಲೌಡ್ ಸ್ಟೋರೇಜ್: ಜಿಯೋ ಬಳಕೆದಾರರಿಗೆ ರಿಲಾಯನ್ಸ್ ಗಿಫ್ಟ್

RIL's 47th AGM: ಇದೇ ದೀಪಾವಳಿಯಿಂದ ಜಿಯೋ ಬಳಕೆದಾರರು 100 ಜಿಬಿವರೆಗಿನ ಡಾಟಾವನ್ನು ಉಚಿತವಾಗಿ ಕ್ಲೌಡ್ ಸ್ಟೋರೇಜ್​ನಲ್ಲಿ ಸಂಗ್ರಹಿಸಬಹುದು. ಆರ್​ಐಎಲ್​ನ ವಾರ್ಷಿಕ ಮಹಾಸಭೆಯಲ್ಲಿ ಛೇರ್ಮನ್ ಮುಕೇಶ್ ಅಂಬಾನಿ ತಿಳಿಸಿದ್ದಾರೆ. ಇದೇ ವೇಳೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಅಳವಡಿಕೆ ನಿಟ್ಟಿನಲ್ಲಿ ಜಿಯೋ ಬ್ರೇನ್ ಯೋಜನೆ ತರಲಾಗುತ್ತಿರುವುದನ್ನೂ ಅವರು ಹೇಳಿದ್ದಾರೆ.

ನೂರು ಜಿಬಿ ಉಚಿತ ಕ್ಲೌಡ್ ಸ್ಟೋರೇಜ್: ಜಿಯೋ ಬಳಕೆದಾರರಿಗೆ ರಿಲಾಯನ್ಸ್ ಗಿಫ್ಟ್
ಜಿಯೋ ಕ್ಲೌಡ್
Follow us
|

Updated on: Aug 29, 2024 | 4:50 PM

ಮುಂಬೈ, ಆಗಸ್ಟ್ 29: ಜಿಯೋ ಬಳಕೆದಾರರಿಗೆ ಉಚಿತವಾಗಿ 100 ಜಿಬಿವರೆಗೂ ಕ್ಲೌಡ್ ಸ್ಟೋರೇಜ್ ಸೌಲಭ್ಯ ಸಿಗಲಿದೆ. ಈ ವಿಷಯವನ್ನು ರಿಲಾಯನ್ಸ್ ಇಂಡಸ್ಟ್ರೀಸ್​ನ 47ನೇ ವಾರ್ಷಿಕ ಮಹಾಸಭೆಯಲ್ಲಿ ಕಂಪನಿಯ ಛೇರ್ಮನ್ ಮುಕೇಶ್ ಅಂಬಾನಿ ಘೋಷಿಸಿದ್ದಾರೆ. ದೀಪಾವಳಿ ಹಬ್ಬದಿಂದ ಈ ಆಫರ್ ಅನ್ನು ಎಲ್ಲಾ ಜಿಯೋ ಬಳಕೆದಾರರಿಗೂ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಹಾಗೆಯೇ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ತಮ್ಮ ಕಾರ್ಯಾಚರಣೆಗೆಗಳಲ್ಲಿ ಅಳವಡಿಸಲು ಅಂಬಾನಿ ಅವರು ಜಿಯೋ ಬ್ರೇನ್ ಯೋಜನೆಯನ್ನು ಪ್ರಕಟಿಸಿದ್ದಾರೆ.

ಕ್ಲೌಡ್ ಸ್ಟೋರೇಜ್​ನಿಂದ ಉಪಯೋಗವೇನು?

ಕ್ಲೌಡ್ ಸ್ಟೋರೇಜ್​ನಲ್ಲಿ ನಮ್ಮ ಫೋಟೋ, ವಿಡಿಯೋ, ಫೈಲ್ಸ್ ಸೇರಿದಂತೆ ಎಲ್ಲಾ ರೀತಿಯ ಡಿಜಿಟಲ್ ಕಂಟೆಂಟ್ ಅನ್ನು ಸಂಗ್ರಹಿಸಬಹುದು. ಜಿಯೋದ ಕ್ಲೌಡ್ ಸ್ಟೋರೇಜ್​ನಲ್ಲಿ 100 ಜಿಬಿವರೆಗಿನ ಡಾಟಾವನ್ನು ಉಚಿತವಾಗಿ ಸಂಗ್ರಹಿಸಬಹುದು. ಮುಕೇಶ್ ಅಂಬಾನಿ ನೀಡಿದ ಮಾಹಿತಿ ಪ್ರಕಾರ ಇದಕ್ಕಿಂತ ಹೆಚ್ಚಿನ ಕ್ಲೌಡ್ ಸ್ಟೋರೇಜ್​ಗೆ ಶುಲ್ಕ ನೀಡಬೇಕಾಗಬಹುದು.

ಇದನ್ನೂ ಓದಿ: ಶ್ರೀಮಂತಿಕೆಯಲ್ಲಿ ಅಂಬಾನಿಯನ್ನು ಹಿಂದಿಕ್ಕಿದ ಅದಾನಿ; ಬಿಲಿಯನೇರ್ಸ್ ಪಟ್ಟಿಗೆ ಶಾರುಖ್ ಸೇರ್ಪಡೆ

ಬೇರೆ ಕಂಪನಿಗಳು ಹೆಚ್ಚಿನ ಕ್ಲೌಡ್ ಸ್ಟೋರೇಜ್​ಗೆ ಶುಲ್ಕ ವಿಧಿಸುತ್ತವೆ. ಗೂಗಲ್​ನಲ್ಲಿ 100 ಜಿಬಿ ಕ್ಲೌಡ್ ಸ್ಟೋರೇಜ್​ಗೆ ತಿಂಗಳಿಗೆ 130 ರೂ ದರ ವಿಧಿಸಲಾಗುತ್ತದೆ. ಆ್ಯಪಲ್ ಕಂಪನಿ 50ಜಿಬಿ ಸ್ಟೋರೇಜ್​ಗೆ ತಿಂಗಳಿಗೆ 75 ರೂ ವಿಧಿಸುತ್ತದೆ. 200 ಜಿಬಿ ಸ್ಟೋರೇಜ್​ಗೆ 219 ರೂ ಶುಲ್ಕ ಇದೆ. ಜಿಯೋದಲ್ಲಿ 100 ಜಿಬಿಗಿಂತ ಹೆಚ್ಚು ಸ್ಟೋರೇಜ್​ಗೆ ಶುಲ್ಕ ವಿಧಿಸಲಾಗುತ್ತದಾದರೂ ಬೇರೆ ಪ್ರಮುಖ ಕಂಪನಿಗಳ ದರಕ್ಕಿಂತ ಕಡಿಮೆ ಇರುತ್ತದೆ ಎಂದಿದ್ದಾರೆ.

ಜಿಯೋ ಬ್ರೇನ್ ಯೋಜನೆ

ರಿಲಾಯನ್ಸ್ ಗ್ರೂಪ್​ನ ಎಲ್ಲಾ ಉದ್ದಿಮೆಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬಳಕೆ ಮಾಡಿ ಉತ್ಕೃಷ್ಟ ಸೇವೆ ಒದಗಿಸುವಂತೆ ಮಾಡಲು ಅನುವಾಗುವಂತೆ ಜಿಯೋ ಬ್ರೇನ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರಿಯಲ್ ಟೈಮ್​ನಲ್ಲಿ ಕಸ್ಟಮರ್ ಸರ್ವಿಸ್ ಉತ್ತಮ ಗೊಳಿಸುವುದು, ಎಐ ಬಳಕೆ ಹೆಚ್ಚಿಸುವುದು, ವರ್ಕ್​ಫ್ಲೋ ಸುಗಮಗೊಳಿಸುವುದು ಇವೇ ಮುಂತಾದ ಕೆಲಸಗಳತ್ತ ಜಿಯೋ ಬ್ರೇನ್ ಗಮನ ಹರಿಸಲಿದೆ. ಈ ವಿಚಾರವನ್ನು ಆರ್​ಐಎಲ್​ನ ವಾರ್ಷಿಕ ಮಹಾಸಭೆಯಲ್ಲಿ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಇದನ್ನೂ ಓದಿ: ತಿಂಗಳಿಗೆ 2ರಿಂದ 8 ಲಕ್ಷ ರೂ ಗಳಿಸುವ ಸುವರ್ಣಾವಕಾಶ; ಫೇಸ್​ಬುಕ್, ಇನ್ಸ್​ಟಾ, ಯೂಟ್ಯೂಬ್​ಗಳಲ್ಲಿ ಸರ್ಕಾರಿ ಯೋಜನೆ ಪ್ರೊಮೋಟ್ ಮಾಡೋದು ಕೆಲಸ

ಜಿಯೋ ಬ್ರೇನ್ ಮೊದಲಿಗೆ ರಿಲಾಯನ್ಸ್ ಗ್ರೂಪ್​ಗೆ ಸೀಮಿತವಾಗಿರುತ್ತದಾದರೂ, ಅದು ಪರಿಪಕ್ವಗೊಂಡ ಬಳಿಕ ಬೇರೆ ಸಂಸ್ಥೆಗಳಿಗೂ ಅದರ ಸೇವೆ ವಿಸ್ತರಿಸುವ ಆಲೋಚನೆ ಇರುವುದನ್ನು ಅಂಬಾನಿ ಬಹಿರಂಗಪಡಿಸಿದ್ದಾರೆ.

ಮುಕೇಶ್ ಅಂಬಾನಿ ಪ್ರಕಾರ ಎಐ ಟೆಕ್ನಾಲಜಿಯು ಕೃಷಿಗಾರಿಕೆ, ಶಿಕ್ಷಣ, ಹೆಲ್ತ್​ಕೇರ್ ಕ್ಷೇತ್ರಗಳಲ್ಲಿ ಗಣನೀಯ ಸುಧಾರಣೆ ತರಬಲ್ಲುದು. ಸಣ್ಣ ಉದ್ದಿಮೆಗಳಿಗೆ ಅದು ವರದಾನವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ