Gold Silver Price on 11th July: ಚಿನ್ನ, ಬೆಳ್ಳಿ ಬೆಲೆ ಯಥಾಸ್ಥಿತಿ; ಆಭರಣ ಚಿನ್ನ ಗ್ರಾಮ್​ಗೆ 6,710 ರೂ

Bullion Market 2024 July 11th: ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ತುಸು ಏರಿದೆ. ಚೆನ್ನೈನಲ್ಲಿ ಚಿನ್ನದ ಬೆಲೆ ಅಲ್ಪ ಇಳಿಕೆ ಕಂಡಿದೆ. ಇದು ಬಿಟ್ಟರೆ ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ವ್ಯತ್ಯಯ ಆಗಿಲ್ಲ. ಆಭರಣ ಚಿನ್ನದ ಬೆಲೆ ಗ್ರಾಮ್​ಗೆ ಸದ್ಯ 67,100 ರೂನಲ್ಲಿ ಇದೆ.

Gold Silver Price on 11th July: ಚಿನ್ನ, ಬೆಳ್ಳಿ ಬೆಲೆ ಯಥಾಸ್ಥಿತಿ; ಆಭರಣ ಚಿನ್ನ ಗ್ರಾಮ್​ಗೆ 6,710 ರೂ
ಚಿನ್ನ

Updated on: Jul 11, 2024 | 5:00 AM

ಬೆಂಗಳೂರು, ಜುಲೈ 11: ಕಳೆದ ಕೆಲ ವಾರಗಳಿಂದ ಬಹಳಷ್ಟು ಏರುಪೇರಾಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ (Gold and silver Rates) ಗುರುವಾರ ಯಥಾಸ್ಥಿತಿಯಲ್ಲಿವೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ತುಸು ಏರಿಕೆ ಆಗಿರುವುದು ಬಿಟ್ಟರೆ ಉಳಿದಂತೆ ದೇಶಾದ್ಯಂತ ಈ ಲೋಹದ ಬೆಲೆ ವ್ಯತ್ಯಯ ಕಂಡಿಲ್ಲ. ವಿದೇಶಗಳಲ್ಲಿ ಕೆಲವೆಡೆ ಚಿನ್ನದ ಬೆಲೆಯಲ್ಲಿ ಏರುಪೇರು ಆಗಿದೆ. ಕೆಲವೆಡೆ ಬೆಲೆ ಏರಿದರೆ, ಮತ್ತೂ ಕೆಲವೆಡೆ ಇಳಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,200 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,450 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 67,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,450 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 11ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,100 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,200 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 945 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,100 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,200 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 945 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 67,100 ರೂ
  • ಚೆನ್ನೈ: 67,600 ರೂ
  • ಮುಂಬೈ: 67,100 ರೂ
  • ದೆಹಲಿ: 67,250 ರೂ
  • ಕೋಲ್ಕತಾ: 67,100 ರೂ
  • ಕೇರಳ: 67,100 ರೂ
  • ಅಹ್ಮದಾಬಾದ್: 67,150 ರೂ
  • ಜೈಪುರ್: 67,250 ರೂ
  • ಲಕ್ನೋ: 67,250 ರೂ
  • ಭುವನೇಶ್ವರ್: 67,100 ರೂ

ಇದನ್ನೂ ಓದಿ: ಯುವಜನರಿಗೆ 25,000 ರೂ ಟ್ಯಾಕ್ಸ್ ಡಿಡಕ್ಷನ್ ಕೊಟ್ಟು ರಿಟೈರ್ಮೆಂಟ್ ಹೂಡಿಕೆಗೆ ಉತ್ತೇಜಿಸಿ: ಮನವಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,510 ರಿಂಗಿಟ್ (62,370 ರುಪಾಯಿ)
  • ದುಬೈ: 2,660 ಡಿರಾಮ್ (60,480 ರುಪಾಯಿ)
  • ಅಮೆರಿಕ: 720 ಡಾಲರ್ (60,130 ರುಪಾಯಿ)
  • ಸಿಂಗಾಪುರ: 1,000 ಸಿಂಗಾಪುರ್ ಡಾಲರ್ (61,690 ರುಪಾಯಿ)
  • ಕತಾರ್: 2,700 ಕತಾರಿ ರಿಯಾಲ್ (61,960 ರೂ)
  • ಸೌದಿ ಅರೇಬಿಯಾ: 2,730 ಸೌದಿ ರಿಯಾಲ್ (60,780 ರುಪಾಯಿ)
  • ಓಮನ್: 290 ಒಮಾನಿ ರಿಯಾಲ್ (62,030 ರುಪಾಯಿ)
  • ಕುವೇತ್: 220 ಕುವೇತಿ ದಿನಾರ್ (59,060 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,450 ರೂ
  • ಚೆನ್ನೈ: 9,900 ರೂ
  • ಮುಂಬೈ: 9,450 ರೂ
  • ದೆಹಲಿ: 9,450 ರೂ
  • ಕೋಲ್ಕತಾ: 9,450 ರೂ
  • ಕೇರಳ: 9,900 ರೂ
  • ಅಹ್ಮದಾಬಾದ್: 9,450 ರೂ
  • ಜೈಪುರ್: 9,450 ರೂ
  • ಲಕ್ನೋ: 9,450 ರೂ
  • ಭುವನೇಶ್ವರ್: 9,900 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us