AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವಜನರಿಗೆ 25,000 ರೂ ಟ್ಯಾಕ್ಸ್ ಡಿಡಕ್ಷನ್ ಕೊಟ್ಟು ರಿಟೈರ್ಮೆಂಟ್ ಹೂಡಿಕೆಗೆ ಉತ್ತೇಜಿಸಿ: ಮನವಿ

Union budget 2024 expectations: ಬಹಳಷ್ಟು ಜನರು ನಿವೃತ್ತರಾಗುವವರೆಗೂ ಮುಂದಿನ ಜೀವನದ ಅಂದಾಜು ಮಾಡಿರುವುದಿಲ್ಲ. ಎಷ್ಟು ಹಣ ಉಳಿಸಿಡಬೇಕೆಂಬ ಅರಿವೂ ಇರುವುದಿಲ್ಲ. ರಿಟೈರ್ಮೆಂಟ್ ಪ್ಲಾನಿಂಗ್ ಎಂಬುದು ಒಬ್ಬ ವ್ಯಕ್ತಿ ವೃತ್ತಿ ಜೀವನದ ಆರಂಭದಿಂದಲೇ ಯೋಜಿಸಬೇಕಾದ ಸಂಗತಿ. ತೆರಿಗೆ ರಿಯಾಯಿತಿ ಮೂಲಕ ಯುವಕರನ್ನು ಈ ನಿಟ್ಟಿನಲ್ಲಿ ಉತ್ತೇಜಿಸಬಹುದು ಎನ್ನುವ ಸಲಹೆ ಕೇಳಿಬರುತ್ತಿದೆ.

ಯುವಜನರಿಗೆ 25,000 ರೂ ಟ್ಯಾಕ್ಸ್ ಡಿಡಕ್ಷನ್ ಕೊಟ್ಟು ರಿಟೈರ್ಮೆಂಟ್ ಹೂಡಿಕೆಗೆ ಉತ್ತೇಜಿಸಿ: ಮನವಿ
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 10, 2024 | 5:32 PM

Share

ನವದೆಹಲಿ, ಜುಲೈ 10: ನಾಳೆಯ ದಿನಗಳಿಗೆ ಇವತ್ತಿನಿಂದಲೇ ತಯಾರಾಗುವುದು ಅಗತ್ಯ. ಖಾಸಗಿ ಕ್ಷೇತ್ರದಲ್ಲಿ ನಿವೃತ್ತಿ ಬಳಿಕ ಪಿಂಚಣಿ ಸಿಗುವುದಿಲ್ಲ. ಇಪಿಎಫ್ ಹೊರತಾಗಿ ಹೆಚ್ಚಿನ ರಿಟೈರ್ಮೆಂಟ್ ಯೋಜನೆಗಳಿಲ್ಲ. ಆದ್ದರಿಂದ ನಿವೃತ್ತಿ ನಂತರದ ಬದುಕಿನ ನಿರ್ವಹಣೆಗಾಗಿ ಬಹಳ ಮುಂಚಿನಿಂದಲೇ ಪ್ಲಾನ್ ಮಾಡಬೇಕಾಗುತ್ತದೆ. 35 ವರ್ಷ ದಾಟುವ ಮುನ್ನವೇ ರಿಟೈರ್ಮೆಂಟ್ ಪ್ಲಾನ್​ಗೆ ಅಡಿ ಇಡುವುದು ಉತ್ತಮ. ಇಲ್ಲವಾದರೆ ನಿವೃತ್ತಿ ಬಳಿಕ ಜೀವನ ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಯುವಜನರು ರಿಟೈರ್ಮೆಂಟ್ ಪ್ಲಾನ್ ಅನ್ನು ಅಪ್ಪಿಕೊಳ್ಳಲು ಸರ್ಕಾರವೇ ಉತ್ತೇಜಿಸಬೇಕು. ಈ ಬಗ್ಗೆ ಮಾತನಾಡಿರುವ ಅಕ್ಯೂಬ್ ವೆಂಚರ್ಸ್​ನ ನಿರ್ದೇಶಕ ಆಶೀಶ್ ಅಗರ್ವಾಲ್ ಅವರು, ಬಜೆಟ್​ನಲ್ಲಿ ಹೆಚ್ಚುವರಿ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಕೊಡಬೇಕು ಎಂದು ಸಲಹೆ ನೀಡಿದ್ದಾರೆ.

ಎನ್​ಪಿಎಸ್ ಇತ್ಯಾದಿ ಹೂಡಿಕೆಗೆ ಟ್ಯಾಕ್ಸ್ ಡಿಡಕ್ಷನ್ ಇರುವಂತೆ ಯೂತ್ ರಿಟೈರ್ಮೆಂಟ್ ಬೆನಿಫಿಟ್ ಯೋಜನೆ ಪರಿಚಯಿಸಿ ಅದರಲ್ಲಿ ಮಾಡುವ ಹೂಡಿಕೆಗೆ 25,000 ರೂವರೆಗೆ ಡಿಡಕ್ಷನ್ ಕಲ್ಪಿಸಬಹುದು. 35 ವರ್ಷದೊಳಗಿನ ಯುವಕರಿಗೆ ಈ ಸ್ಕೀಮ್ ತರಬಹುದು. ಇದರಿಂದ ಬಹಳ ಚಿಕ್ಕ ವಯಸ್ಸಿನಲ್ಲೇ ಜನರು ರಿಟೈರ್ಮೆಂಟ್​ಗೆ ಹಣ ಹೊಂದಿಸುವ ಕೆಲಸ ಆರಂಭಿಸಬಹುದು.

ಇದನ್ನೂ ಓದಿ: ನಿಮ್ಮ ಆದಾಯದಲ್ಲಿ ಗರಿಷ್ಠ ಎಷ್ಟು ಮೊತ್ತದಷ್ಟು ಟ್ಯಾಕ್ಸ್ ಡಿಡಕ್ಷನ್ಸ್ ಪಡೆಯಬಹುದು? ಇಲ್ಲಿದೆ ಪಟ್ಟಿ

10,000 ರೂ ಟ್ಯಾಕ್ಸ್ ಕ್ರೆಡಿಟ್ ಕೊಡಿ

ಅಮೆರಿಕದ ಮಾದರಿಯಲ್ಲಿ ಕಡಿಮೆ ಆದಾಯದ ವರ್ಗದವರಿಗೆ ರಿಟೈರ್ಮೆಂಟ್ ಸೇವಿಂಗ್ಸ್ ಕ್ರೆಡಿಟ್ ಸ್ಕೀಮ್ ಅನ್ನು ಜಾರಿಗೆ ತನ್ನಿ ಎಂದು ಫಿನ್​ಕಾರ್ಪಿಟ್ ಕನ್ಸಲ್ಟಿಂಗ್ ಸಂಸ್ಥೆಯ ಅಸೋಸಿಯೇಟ್ ಡೈರೆಕ್ಟರ್ ಗೌರವ್ ಸಿಂಗ್ ಪಾರ್ಮಾರ್ ಹೇಳಿದ್ದಾರೆ. ಕೆಳ ಆದಾಯ ಗುಂಪಿನ ಜನರು ತಮ್ಮ ರಿಟೈರ್ಮೆಂಟ್ ಪ್ಲಾನ್​ನ ಖಾತೆಗಳಿಗೆ ಹಣ ತೊಡಗಿಸಲು ಉತ್ತೇಜನ ನೀಡಲು 10,000 ರೂ ಟ್ಯಾಕ್ಸ್ ಕ್ರೆಡಿಟ್ ಅನ್ನು ಸರ್ಕಾರ ಕೊಡಬೇಕು ಎನ್ನುವುದು ಅವರ ಒತ್ತಾಯ.

ಎನ್​ಪಿಎಸ್​ನಲ್ಲಿ ವಿತ್​ಡ್ರಾಯಲ್ ಮಿತಿ ಹೆಚ್ಚಿಸಿ…

ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ ನಿವೃತ್ತಿ ಬಳಿಕ ಶೇ. 60ರವರೆಗೆ ಫಂಡ್ ಹಣ ಹಿಂಪಡೆಯಬಹುದು. ಈ ಮಿತಿಯನ್ನು ಶೇ. 80ಕ್ಕೆ ಹೆಚ್ಚಿಸಬೇಕು ಎಂದು ಗೌರವ್ ಸಿಂಗ್ ಪಾರ್ಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಕೇಂದ್ರ ಬಜೆಟ್ 2024: ಮಹಿಳೆಯರಿಗೆ ವಿಶೇಷ ತೆರಿಗೆ ಲಾಭ ಸಿಗುತ್ತದಾ? ನಿರೀಕ್ಷೆಗಳಿವು…

ರಿಟೈರ್ಮೆಂಟ್ ಸೇವಿಂಗ್ಸ್ ಮ್ಯಾಚ್ ಪ್ರೋಗ್ರಾಂ

ವಿಭವಂಗಲ್ ಅಂಕುಲಕಲರ ಪ್ರೈ ಲಿ ಸಂಸ್ಥೆಯ ಸಂಸ್ಥಾಪಕ ಸಿದ್ಧಾರ್ಥ್ ಮೌರ್ಯ ಅವರು ರಿಟೈರ್ಮೆಂಟ್ ಸೇವಿಂಗ್ಸ್ ಮ್ಯಾಚ್ ಪ್ರೋಗ್ರಾಮ್ ಎನ್ನುವ ವಿನೂತನ ಸ್ಕೀಮ್​ನ ಪ್ರಸ್ತಾಪ ಮಾಡಿದ್ದಾರೆ. ಕೆಳಗಿನ ತೆರಿಗೆ ಗುಂಪಿಗೆ ಸೇರುವ ವ್ಯಕ್ತಿಗಳು ತಮ್ಮ ರಿಟೈರ್ಮೆಂಟ್ ಅಕೌಂಟ್​ಗೆ ತುಂಬಿಸುವ ಹಣದಲ್ಲಿ ಪ್ರತೀ ಐದು ಸಾವಿರ ರೂಗೆ ಸರ್ಕಾರ ಒಂದು ಸಾವಿರ ರೂ ಸೇರಿಸಬೇಕು ಎನ್ನುವುದು ಅವರ ಸಲಹೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ