ನಿಮ್ಮ ಆದಾಯದಲ್ಲಿ ಗರಿಷ್ಠ ಎಷ್ಟು ಮೊತ್ತದಷ್ಟು ಟ್ಯಾಕ್ಸ್ ಡಿಡಕ್ಷನ್ಸ್ ಪಡೆಯಬಹುದು? ಇಲ್ಲಿದೆ ಪಟ್ಟಿ

Tax deductions list: ಓಲ್ಡ್ ಟ್ಯಾಕ್ಸ್ ರೆಜಿಮೆಯಲ್ಲಿ ಟ್ಯಾಕ್ಸ್ ಡಿಡಕ್ಷನ್​ಗೆ ಬಹಳಷ್ಟು ಅವಕಾಶಗಳಿವೆ. ಹೆಚ್ಚಿನ ಹೂಡಿಕೆಗಳು ಸೆಕ್ಷನ್ 80 ಸಿ ಅಡಿಗೆ ಬರುತ್ತವೆ. ಒಂದೂವರೆ ಲಕ್ಷ ರೂವರೆಗೆ ಟ್ಯಾಕ್ಸ್ ಡಿಡಕ್ಷನ್ ಕೊಡುತ್ತದೆ ಈ ಸೆಕ್ಷನ್. ಇದನ್ನು ಬಿಟ್ಟು ಇನ್ನೂ ಕೆಲ ಪ್ರಮುಖ ಮಾರ್ಗಗಳ ಮೂಲಕ ಹೆಚ್ಚಿನ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು. ಮೆಡಿಕಲ್ ಇನ್ಷೂರೆನ್ಸ್, ಎನ್​ಪಿಎಸ್, ಗೃಹ ಸಾಲ, ದೇಣಿಗೆ ಇತ್ಯಾದಿಗಳಿಗೆ ಡಿಡಕ್ಷನ್ ಇರುತ್ತದೆ.

ನಿಮ್ಮ ಆದಾಯದಲ್ಲಿ ಗರಿಷ್ಠ ಎಷ್ಟು ಮೊತ್ತದಷ್ಟು ಟ್ಯಾಕ್ಸ್ ಡಿಡಕ್ಷನ್ಸ್ ಪಡೆಯಬಹುದು? ಇಲ್ಲಿದೆ ಪಟ್ಟಿ
ತೆರಿಗೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 04, 2024 | 11:19 AM

ನೀವು ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿ ಐಟಿ ರಿಟರ್ನ್ಸ್ ಫೈಲ್ ಮಾಡುತ್ತಿದ್ದರೆ ನಿಮಗೆ ಟ್ಯಾಕ್ಸ್ ಡಿಡಕ್ಷನ್​ಗೆ ಅವಕಾಶ ಇರುವುದನ್ನು ನೋಡಬಹುದು. ಹೆಚ್ಚಿನ ಜನರಿಗೆ ಒಂದೂವರೆ ಲಕ್ಷ ರೂವರೆಗೆ ಟ್ಯಾಕ್ಸ್ ಡಿಡಕ್ಷನ್ ಇರುವುದು ಗೊತ್ತು. ಅದಕ್ಕೂ ಹೆಚ್ಚಿನ ಮೊತ್ತದ ಡಿಡಕ್ಷನ್ ಅವಕಾಶ ಇರುತ್ತದೆ. ಎನ್​ಪಿಎಸ್, ಮೆಡಿಕಲ್ ಇನ್ಷೂರೆನ್ಸ್​ಗಳಲ್ಲಿ ನೀವು ಮಾಡಿರುವ ಹೂಡಿಕೆಗೆ ಒಂದಷ್ಟು ಡಿಡಕ್ಷನ್ ಪಡೆಯಬಹುದು. ಒಟ್ಟಾರೆ ಮೂರ್ನಾಲ್ಕು ಲಕ್ಷ ರೂವರೆಗೆ ಡಿಡಕ್ಷನ್ ಪಡೆಯುವ ಅವಕಾಶಗಳಿವೆ. ಆದರೆ, ಅಷ್ಟು ತೆರಿಗೆ ಉಳಿಸಲು ಹೋಗಿ ಅನಗತ್ಯ ಹೂಡಿಕೆಯೂ ಸಮಂಜಸ ಎನಿಸುವುದಿಲ್ಲ.

ತೆರಿಗೆ ಉಳಿಸಲು ಟ್ಯಾಕ್ಸ್ ಡಿಡಕ್ಷನ್ ಎಷ್ಟು ಮಹತ್ವದ್ದು ಎಂಬುದು ಮೊದಲಿಗೆ ತಿಳಿಯಲೇಬೇಕಾದ ಸಂಗತಿ. ನಿಮ್ಮ ಒಟ್ಟಾರೆ ಆದಾಯದಲ್ಲಿ ಟ್ಯಾಕ್ಸಬಲ್ ಇನ್ಕಮ್​ಗೆ ಮಾತ್ರವೇ ತೆರಿಗೆ ಅನ್ವಯ ಆಗುತ್ತದೆ. ಈ ಡಿಡಕ್ಷನ್​ಗಳು ಟ್ಯಾಕ್ಸಬಲ್ ಇನ್ಕಮ್ ಮೊತ್ತವನ್ನು ಕಡಿಮೆಗೊಳಿಸುತ್ತವೆ. ಉದಾಹರಣೆಗೆ, ನಿಮ್ಮ ಒಂದು ವರ್ಷದ ಆದಾಯ 10 ಲಕ್ಷ ರೂ ಇದೆ ಎಂದಿಟ್ಟುಕೊಳ್ಳಿ. ನೀವು ಸೆಕ್ಷನ್ 80 ಸಿ ಅಡಿಯಲ್ಲಿ ಪಿಪಿಎಫ್ ಮತ್ತಿತರ ಸ್ಕೀಮ್​ಗಳಲ್ಲಿ ವರ್ಷಕ್ಕೆ ಮಾಡಿದ ಹೂಡಿಕೆಯಲ್ಲಿ ಒಂದೂವರೆ ಲಕ್ಷ ರೂವರೆಗೂ ಟ್ಯಾಕ್ಸ್ ಡಿಡಕ್ಷನ್ ಇರುತ್ತದೆ. ಅಂದರೆ 10 ಲಕ್ಷ ರೂನಲ್ಲಿ ಒಂದೂವರೆ ಲಕ್ಷ ರೂ ಮೈನಸ್ ಮಾಡಿದರೆ 8.5 ಲಕ್ಷ ರೂ ಟ್ಯಾಕ್ಸಬಲ್ ಇನ್ಕಮ್ ಆಗುತ್ತದೆ.

ಇದನ್ನೂ ಓದಿ: ಮನೆಯಲ್ಲೇ ಕ್ಯಾಷ್​ಲೆಸ್ ವೈದ್ಯಕೀಯ ಚಿಕಿತ್ಸೆ ಸೌಲಭ್ಯ; ಸ್ಟಾರ್ ಹೆಲ್ತ್ ಇನ್ಷೂರೆನ್ಸ್​ನಿಂದ 50 ನಗರಗಳಲ್ಲಿ ಹೋಮ್ ಹೆಲ್ತ್ ಕೇರ್ ಸರ್ವಿಸ್

ಟ್ಯಾಕ್ಸ್ ಡಿಡಕ್ಷನ್ ಕೊಡುವ ಪ್ರಮುಖ ಮಾರ್ಗಗಳು

  1. ಸೆಕ್ಷನ್ 80 ಸಿ: 1.5 ಲಕ್ಷ ರೂ
  2. ಎನ್​ಪಿಎಸ್: 50,000 ರೂ (ಎನ್​ಪಿಎಸ್ ಯೋಜನೆ)
  3. ಹೆಲ್ತ್ ಇನ್ಷೂರೆನ್ಸ್: 25,000 ರೂನಿಂದ 1,25,000 ರೂವರೆಗೆ

ಈ ಮೇಲಿನ ಮೂರು ಮಾರ್ಗಗಳ ಮೂಲಕ 2.25 ಲಕ್ಷ ರೂನಿಂದ 3 ಲಕ್ಷ ರೂವರೆಗೆ ಡಿಡಕ್ಷನ್ ಪಡೆಯಲು ಸಾಧ್ಯ.

ಇಲ್ಲಿ ಸೆಕ್ಷನ್ 80 ಸಿ ಅಡಿಯಲ್ಲಿ ಪಿಪಿಎಫ್, ಲೈಫ್ ಇನ್ಷೂರೆನ್ಸ್, ಗೃಹಸಾಲದ ಅಸಲು ಹಣ ಮರುಪಾವತಿ, ಸುಕನ್ಯಾ ಸಮೃದ್ಧಿ ಯೋಜನೆ, ಇಎಲ್​ಎಸ್​ಎಸ್, ಯುಲಿಪ್, ಪೆನ್ಷನ್ ಫಂಡ್ ಮೊದಲಾದವರು ಬರುತ್ತವೆ.

ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ ಮಾಡುವ ಹೂಡಿಕೆಗೆ ವರ್ಷಕ್ಕೆ 50,000 ರೂವರೆಗೆ ಡಿಡಕ್ಷನ್ ಪಡೆಯಬಹುದು. ಅಂದರೆ ನೀವು ಒಂದು ವರ್ಷದಲ್ಲಿ ಎನ್​ಪಿಎಸ್​ನಲ್ಲಿ 50,000 ರೂ ಹೂಡಿಕೆ ಮಾಡಿದರೆ ಅಷ್ಟು ಮೊತ್ತದಷ್ಟು ಟ್ಯಾಕ್ಸನ್ ಇನ್ಕಮ್ ಕಡಿಮೆ ಆಗುತ್ತದೆ.

ಇದನ್ನೂ ಓದಿ: ನಿಮಗೆ ಮತ್ತು ಕುಟುಂಬಕ್ಕೆ ಯಾವ ರೀತಿಯ ಇನ್ಷೂರೆನ್ಸ್ ಅಗತ್ಯ? ಹೇಗೆ ಆಯ್ಕೆ ಮಾಡುವುದು? ಇಲ್ಲಿದೆ ಸಿಂಪಲ್ ಟಿಪ್ಸ್

ಹೆಲ್ತ್ ಇನ್ಷೂರೆನ್ಸ್ ಬಗ್ಗೆ ಇದು ತಿಳಿದಿರಲಿ

ಇಲ್ಲಿ ನಿಮ್ಮ ಕುಟುಂಬ ಎಂದರೆ ನೀವು, ಪತ್ನಿ ಮತ್ತು ಮಕ್ಕಳು. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಿದ್ದರೆ 25,000 ರೂನಷ್ಟು ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು.

ನಿಮ್ಮ ತಂದೆ ತಾಯಿ ಇದ್ದು ಅವರ ವಯಸ್ಸು 60 ವರ್ಷದೊಳಗೆ ಇದ್ದರೆ ಆಗ ಆಗ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗೆ 50,000 ರೂವರೆಗೆ ಡಿಡಕ್ಷನ್ ಪಡೆಯಬಹುದು. ನಿಮ್ಮ ತಂದೆ ತಾಯಿ 60 ವರ್ಷ ಮೇಲ್ಪಟ್ಟು ವಯಸ್ಸಿನವರಾಗಿದ್ದರೆ 75,000 ರೂ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು. ನೀವು ಸೇರಿದಂತೆ ಕುಟುಂಬದ ಪ್ರತಿಯೊಬ್ಬರ ವಯಸ್ಸೂ 60 ವರ್ಷ ಮೇಲ್ಪಟ್ಟಿದ್ದರೆ ಒಂದು ಲಕ್ಷ ರೂವರೆಗೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು.

ಮನೆ ಬಾಡಿಗೆಗೆ ಟ್ಯಾಕ್ಸ್ ಡಿಡಕ್ಷನ್ ಕ್ಲೇಮ್ ಮಾಡಬಹುದು

ನಿಮ್ಮ ಸಂಬಳದಲ್ಲಿ ಎಚ್​ಆರ್​ಎ ಅಥವಾ ಹೌಸ್ ರೆಂಟ್ ಅಲೋಯನ್ಸ್ ಫೀಚರ್ ಇದ್ದರೆ ಆ ಹಣವನ್ನು ಟ್ಯಾಕ್ಸಬಲ್ ಇನ್ಕಮ್​ನಿಂದ ಕಳೆಯಲಾಗುತ್ತದೆ. ಒಂದು ವೇಳೆ ಸಂಬಳದಲ್ಲಿ ಎಚ್​​ಆರ್​ಎ ಇಲ್ಲದೇ ಇದ್ದಾಗ ನೀವು ಮನೆ ಬಾಡಿಗೆಗೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು. ಆದರೆ, ನಿಮ್ಮ ಹಾಗೂ ಕುಟುಂಬದವರ ಹೆಸರಲ್ಲಿ ಸ್ವಂತ ಮನೆ ಇರಬಾರದು. ಆಗ ನೀವು ಬಾಡಿಗೆ ಮನೆಯ ಮೊತ್ತಕ್ಕೆ ಡಿಡಕ್ಷನ್ ಪಡೆಯಲು ಸಾಧ್ಯ. ಇದು ಗರಿಷ್ಠ 60,000 ರೂವರೆಗೂ ಡಿಡಕ್ಷನ್ ಅವಕಾಶ ಇದೆ.

ಇದನ್ನೂ ಓದಿ: ಸುಕನ್ಯಾ ಸಮೃದ್ಧಿ, ಪಿಪಿಎಫ್ ಇತ್ಯಾದಿ ಸ್ಮಾಲ್ ಸೇವಿಂಗ್ ಸ್ಕೀಮ್ ದರಗಳ ಮುಂದುವರಿಕೆ; ಇಲ್ಲಿದೆ ಈ ಯೋಜನೆಗಳ ದರಪಟ್ಟಿ

ಟ್ಯಾಕ್ಸ್ ಡಿಡಕ್ಷನ್ ಕೊಡುವ ಇತರ ಮಾರ್ಗಗಳು…

ಶಿಕ್ಷಣ ಸಾಲ, ಗೃಹಸಾಲದ ಬಡ್ಡಿ, ಸೇವಿಂಗ್ಸ್ ಅಕೌಂಟ್​ನಿಂದ ಬರುವ ಬಡ್ಡಿ ಇವಕ್ಕೆ ಸೀಮಿತ ಪ್ರಮಾಣದಲ್ಲಿ ಟ್ಯಾಕ್ಸ್ ಡಿಡಕ್ಷನ್ ಸಿಗುತ್ತದೆ. ಹಾಗೆಯೇ, ಪಿಎಂ ನ್ಯಾಷನಲ್ ರಿಲೀಫ್ ಫಂಡ್, ನ್ಯಾಷನಲ್ ಡಿಫೆನ್ಸ್ ಫಂಡ್, ನ್ಯಾಷನಲ್ ಸ್ಪೋರ್ಟ್ಸ್ ಫಂಡ್ ಇತ್ಯಾದಿ ಫಂಡ್​ಗಳಿಗೆ ನೀವು ದೇಣಿಗೆಯ ಹಣಕ್ಕೆ ಪೂರ್ಣ ಡಿಡಕ್ಷನ್ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:18 am, Thu, 4 July 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ