ಮನೆಯಲ್ಲೇ ಕ್ಯಾಷ್​ಲೆಸ್ ವೈದ್ಯಕೀಯ ಚಿಕಿತ್ಸೆ ಸೌಲಭ್ಯ; ಸ್ಟಾರ್ ಹೆಲ್ತ್ ಇನ್ಷೂರೆನ್ಸ್​ನಿಂದ 50 ನಗರಗಳಲ್ಲಿ ಹೋಮ್ ಹೆಲ್ತ್ ಕೇರ್ ಸರ್ವಿಸ್

Star Health Insurance Launches Home Healthcare Service: ದೇಶದ ಪೂರ್ಣಪ್ರಮಾಣದ ಹೆಲ್ತ್ ಇನ್ಷೂರೆನ್ಸ್ ಕಂಪನಿಯಾದ ಸ್ಟಾರ್ ಹೆಲ್ತ್ ಇದೀಗ ಹೋಮ್ ಹೆಲ್ತ್ ಕೇರ್ ಸೇವೆ ಆರಂಭಿಸಿದೆ. ಕೆಲ ನಿರ್ದಿಷ್ಟ ಕಾಯಿಲೆ ಮತ್ತು ಅಸ್ವಸ್ಥತೆಗೆ ಮನೆಯಲ್ಲೇ ಚಿಕಿತ್ಸೆ ಒದಗಿಸುತ್ತದೆ ಈ ಸ್ಕೀಮ್. ಅಕ್ಯೂಟ್ ಗ್ಯಾಸ್ಟ್ರೋ ಎಂಟಿಟಿಸ್, ಅಕ್ಯೂಟ್ ಗ್ಯಾಸ್ಟ್ರೈಟಿಸ್, ಜ್ವರ, ಯೂರಿನರಿ ಇನ್ಫೆಕ್ಷನ್ ಮೊದಲಾದ ಕಾಯಿಲೆಗಳಿಗೆ ಚಿಕಿತ್ಸಾ ವೆಚ್ಚವನ್ನು ಇನ್ಷೂರೆನ್ಸ್ ಸಂಸ್ಥೆಯೇ ಭರಿಸುತ್ತದೆ.

ಮನೆಯಲ್ಲೇ ಕ್ಯಾಷ್​ಲೆಸ್ ವೈದ್ಯಕೀಯ ಚಿಕಿತ್ಸೆ ಸೌಲಭ್ಯ; ಸ್ಟಾರ್ ಹೆಲ್ತ್ ಇನ್ಷೂರೆನ್ಸ್​ನಿಂದ 50 ನಗರಗಳಲ್ಲಿ ಹೋಮ್ ಹೆಲ್ತ್ ಕೇರ್ ಸರ್ವಿಸ್
ಹೋಮ್ ಹೆಲ್ತ್ ಕೇರ್ ಸರ್ವಿಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 03, 2024 | 5:38 PM

ನವದೆಹಲಿ, ಜುಲೈ 3: ಸ್ಟಾರ್ ಹೆಲ್ತ್ ಇನ್ಷೂರೆನ್ಸ್ ಸಂಸ್ಥೆ ಇಂದು ದೇಶಾದ್ಯಂತ 50 ನಗರಗಳಲ್ಲಿ ‘ಹೋಮ್ ಹೆಲ್ತ್ ಕೇರ್’ ಸೇವೆ ಅನಾವರಣಗೊಳಿಸಿದೆ. ಆಸ್ಪತ್ರೆಗೆ ಹೋಗಬೇಕಾದ ಅಗತ್ಯ ಇಲ್ಲದೇ ಮನೆಬಾಗಿಲಿನಲ್ಲೇ ಚಿಕಿತ್ಸೆ ಪಡೆಯುವ ಅವಕಾಶ ಸಿಗುತ್ತದೆ. ವಿವಿಧ ರೀತಿಯ ಸೋಂಕುಗಳು ಸೇರಿದಂತೆ ಹಲವು ಅನಾರೋಗ್ಯಗಳಿಗೆ ಮನೆಯಲ್ಲೇ ಟ್ರೀಟ್ಮೆಂಟ್ ಪಡೆಯುವುದು. ಚಿಕಿತ್ಸಾ ವೆಚ್ಚವನ್ನು ಇನ್ಷೂರೆನ್ಸ್ ಕಂಪನಿಯೇ ಭರಿಸುತ್ತದೆ. ಹೆಚ್ಚಿನಂಶ ಕ್ಯಾಷ್​ಲೆಸ್ ಆಗಿರುತ್ತದೆ.

ಕೇರ್24, ಪೋರ್ಟಿಯಾ, ಕಾಲ್​ಹೆಲ್ತ್, ಅತುಲ್ಯ ಹೋಮ್​ಕೇರ್ ಮೊದಲಾದ ಹೋಮ್ ಹೆಲ್ತ್ ಕೇರ್ ಸರ್ವಿಸ್ ಕೊಡುವ ಕಂಪನಿಗಳ ಜೊತೆ ಸ್ಟಾರ್ ಹೆಲ್ತ್ ಇನ್ಷೂರೆನ್ಸ್ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ.

ಇದನ್ನೂ ಓದಿ: ತಿಂಗಳಿಗೆ 35 ರೂ ಮಾತ್ರ; ಪೇಟಿಎಂ ಹೆಲ್ತ್ ಸಾಥಿ ಪ್ಲಾನ್​ನ ಪ್ರಯೋಜನ ತಿಳಿಯಿರಿ

ಜ್ವರ, ತೀವ್ರ ತರದ ಗ್ಯಾಸ್ಟ್ರೋಎಂಟೆರಿಟಿಸ್, ಯುರಿನರಿ ಟ್ರ್ಯಾಕ್ಟ್ ಇನ್ಫೆಕ್ಷನ್, ಅಕ್ಯೂಟ್ ಗ್ಯಾಸ್ಟ್ರೈಟಿಸ್ ಮೊದಲಾದ ಸೋಂಕು ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗಬೇಕಾಗಿಲ್ಲ. ಮನೆಯಲ್ಲಿದ್ದುಕೊಂಡೇ ಟ್ರೀಟ್ಮೆಂಟ್ ಪಡೆಯಬಹುದು.

ಅಗತ್ಯಬಿದ್ದಲ್ಲಿ ಮನೆಗೆ ವೈದ್ಯರು, ನರ್ಸ್​ಗಳೇ ಬರುತ್ತಾರೆ. ಲ್ಯಾಬ್ ಪರೀಕ್ಷೆಗೆ ಮನೆಗೆ ಬಂದು ಸ್ಯಾಂಪಲ್ ಪಡೆದು ಹೋಗುತ್ತಾರೆ. ಫಿಸಿಯೋಥೆರಪಿಸ್ಟ್​ಗಳು, ವೃದ್ಧರ ಆರೈಕೆ ಮಾಡುವ ಶುಷ್ರೂಷಕರು ಲಭ್ಯ ಇರುತ್ತಾರೆ. ಔಷಧಗಳನ್ನೂ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಆನ್ಲೈನ್​ನಲ್ಲಿ ಫೋನ್​ನಲ್ಲೇ ಸಲಹೆಗಳನ್ನು ನೀಡುವುದು ಸೇರಿದಂತೆ ಇನ್ನೂ ಬಹಳಷ್ಟು ಫೀಚರ್​ಗಳನ್ನು ಸ್ಟಾರ್ ಹೆಲ್ತ್ ಇನ್ಷೂರೆನ್ಸ್ ಕಂಪನಿ ನೀಡುತ್ತದೆ.

ಇದನ್ನೂ ಓದಿ: ನಿಮಗೆ ಮತ್ತು ಕುಟುಂಬಕ್ಕೆ ಯಾವ ರೀತಿಯ ಇನ್ಷೂರೆನ್ಸ್ ಅಗತ್ಯ? ಹೇಗೆ ಆಯ್ಕೆ ಮಾಡುವುದು? ಇಲ್ಲಿದೆ ಸಿಂಪಲ್ ಟಿಪ್ಸ್

ಸ್ಟಾರ್ ಹೆಲ್ತ್ ಇನ್ಷೂರೆನ್ಸ್ ಕಂಪನಿಯ ಹೋಮ್ ಹೆಲ್ತ್ ಕೇರ್ ಸರ್ವಿಸ್ ಪ್ಯಾಕೇಜ್​ನಲ್ಲಿ ಪ್ರೊಫೆಷನಲ್ ಫೀಸ್, ನರ್ಸಿಂಗ್ ಫೀಸ್, ಔಷಧ, ಲ್ಯಾಬ್ ಪರೀಕ್ಷೆಯ ಪೂರ್ಣ ವೆಚ್ಚವನ್ನು ಭರಿಸಲಾಗುತ್ತದೆ. ಕೈಯಿಂದ ಹಣ ಕಟ್ಟುವ ಅವಶ್ಯಕತೆ ಇರುವುದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ