ನಿಮಗೆ ಮತ್ತು ಕುಟುಂಬಕ್ಕೆ ಯಾವ ರೀತಿಯ ಇನ್ಷೂರೆನ್ಸ್ ಅಗತ್ಯ? ಹೇಗೆ ಆಯ್ಕೆ ಮಾಡುವುದು? ಇಲ್ಲಿದೆ ಸಿಂಪಲ್ ಟಿಪ್ಸ್
Health Insurance Tips: ಹೆಲ್ತ್ ಇನ್ಷೂರೆನ್ಸ್ ಆಯ್ಕೆ ಮಾಡಿಕೊಳ್ಳುವುದು ಅಷ್ಟು ಸರಳವಲ್ಲ. ಅದರಲ್ಲೂ ಇಡೀ ಕುಟುಂಬಕ್ಕೆ ಕವರೇಜ್ ಕೊಡುವ ವಿಮೆಯನ್ನು ಬಹಳ ಎಚ್ಚರಿಕೆಯಿಂದ ಆರಿಸಿಕೊಳ್ಳಬೇಕು. ಪ್ರೀಮಿಯಮ್ ಹಣ, ಕವರೇಜ್ ಮೊತ್ತ, ಯಾವ್ಯಾವ ರೋಗಗಳಿಗೆ ಕವರೇಜ್ ಇರುತ್ತೆ ಇವೆಲ್ಲಾ ವಿಚಾರಗಳನ್ನು ನೋಡಿ ನಂತರ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಪಡೆಯಬೇಕು.
ವಿಮೆಯಲ್ಲಿ ಮೂರು ವಿಧಗಳಿವೆ. ಲೈಫ್ ಇನ್ಷೂರೆನ್ಸ್, ಜನರಲ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್. ಈ ಪೈಕಿ ಹೆಲ್ತ್ ಇನ್ಷೂರೆನ್ಸ್ (Health Insurance) ಇವತ್ತಿನ ದಿನದಲ್ಲಿ ಬಹಳ ಮುಖ್ಯವಾಗಿದೆ. ಕೆಲಸ ಮಾಡುವ ಆಫೀಸ್ನಲ್ಲಿ ಇನ್ಷೂರೆನ್ಸ್ ಇರುತ್ತಾದರೂ ಕೆಲಸ ಪರ್ಮನೆಂಟ್ ಇರುವುದಿಲ್ಲ. ಹೀಗಾಗಿ, ವೈಯಕ್ತಿಕವಾಗಿ ಇನ್ಷೂರೆನ್ಸ್ ಪಾಲಿಸಿ ಹೊಂದಿರುವುದು ಬಹಳ ಮುಖ್ಯ. ವಿಮೆ ಮಾಡಿಸಿ ಕೆಲ ವರ್ಷ ಅದರ ಉಪಯೋಗ ಆಗದೇ ಇರಬಹುದು. ಆದರೆ, ದೀರ್ಘಾವಧಿಯಲ್ಲಿ ಅನಿರೀಕ್ಷಿತವಾಗಿ ಆರೋಗ್ಯ ತೊಂದರೆಗಳು ಕುಟುಂಬದಲ್ಲಿ ಯಾರಿಗಾದರೂ ಕಾಣಿಸಿಕೊಳ್ಳಬಹುದು. ಅಗ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಬಹಳ ಉಪಯೋಗಕ್ಕೆ ಬರುತ್ತದೆ.
ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಮಾಡಿಸುವುದೆಂದು ನಿರ್ಧರಿಸಿದರೂ ಯಾವ ಪಾಲಿಸಿ ಪಡೆಯಬೇಕು ಎಂಬ ಗೊಂದಲ ಬಹಳ ಜನರಿಗೆ ಇರುತ್ತದೆ. ಪ್ರೀಮಿಯಮ್ ಮೊತ್ತ, ಕವರೇಜ್ ಮೊತ್ತ ಈ ಪೈಕಿ ಯಾವುದನ್ನು ಮಾನದಂಡವಾಗಿ ಇಟ್ಟುಕೊಳ್ಳುವುದು ಎಂದನಿಸಬಹುದು. ಈ ಹಿನ್ನೆಲೆಯಲ್ಲಿ ಒಂದಿಷ್ಟು ಟಿಪ್ಸ್ ಇಲ್ಲಿ ನೀಡಲಾಗಿದೆ.
ಕುಟುಂಬದ ಅಗತ್ಯಗಳೇನು ಅದನ್ನು ಪರಿಗಣಿಸಿ…
ನಿಮ್ಮ ಕುಟುಂಬದಲ್ಲಿ ಹಿರಿಯರೇ ಹೆಚ್ಚು ಇದ್ದರೆ ಅವರಿಗೆ ವಿವಿಧ ಕಾಯಿಲೆಗಳಿಗೆ ಉತ್ತಮ ಕವರೇಜ್ ನೀಡುವಂತಹ ಪಾಲಿಸಿಯನ್ನು ಆಯ್ಕೆ ಮಾಡಿ. ಕುಟುಂಬದಲ್ಲಿ ಯಾರಿಗಾದರೂ ಪೂರ್ವದಲ್ಲೇ ಕಾಯಿಲೆ ಇದ್ದಲ್ಲಿ ಅಂಥವಕ್ಕೆ ಕವರೇಜ್ ಪಡೆದುಕೊಳ್ಳುವುದನ್ನು ಮರೆಯಬೇಡಿ. ಪ್ರೀಮಿಯಮ್ ತುಸು ಹೆಚ್ಚಾಗಬಹುದು.
ಇದನ್ನೂ ಓದಿ: ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ ಅನುಕೂಲವಾ, ಅನನುಕೂಲವಾ? ಇಲ್ಲಿದೆ ಡೀಟೇಲ್ಸ್
ಕುಟುಂಬದಲ್ಲಿ ಹೊಸದಾಗಿ ಸಂಸಾರ ಶುರು ಮಾಡಿರುವವರು ಇದ್ದರೆ ಮ್ಯಾಟರ್ನಿಟಿ ಕವರೇಜ್, ಪೀಡಿಯಾಟ್ರಿಕ್ ಕವರೇಜ್ ಆ್ಯಡ್ ಆನ್ಗಳಿರುವಂತಹವನ್ನು ಆಯ್ಕೆ ಮಾಡಿಕೊಳ್ಳಬಹುದು.
ಆಸ್ಪತ್ರೆ ಕವರೇಜ್ನಲ್ಲಿ ಯಾವುದೆಲ್ಲಾ ಒಳಗೊಂಡಿರುತ್ತೆ ನೋಡಿ…
ಎಲ್ಲಾ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳು ಹಾಸ್ಪಿಟಲೈಸೇಶನ್ ವೆಚ್ಚವನ್ನು ಕವರ್ ಮಾಡುತ್ತವೆ. ಆದರೆ, ಕೆಲ ಪಾಲಿಸಿಗಳು ಪೂರ್ಣ ವೆಚ್ಚ ಭರಿಸುವುದಿಲ್ಲ. ರೂಮ್ ಬಾಡಿಗೆ ಮಿತಿ, ಐಸಿಯು ಶುಲ್ಕದ ಮಿತಿ ಇತ್ಯಾದಿ ಇರುತ್ತವೆ, ಇವನ್ನು ಗಮನಿಸಿ. ಸರ್ಜರಿ ಆದರೆ ಅದಕ್ಕೆ ಕವರೇಜ್ ಇದೆಯಾ ವಿಚಾರಿಸಿ.
ಆಸ್ಪತ್ರೆಗೆ ದಾಖಲಾಗುವ ಕೆಲ ದಿನಗಳ ಮುಂಚಿನ ಮತ್ತು ದಾಖಲಾದ ನಂತರದ ಕೆಲ ದಿನಗಳ ಕನ್ಸಲ್ಟೇಶನ್ ಮತ್ತು ಟ್ರೀಟ್ಮೆಂಟ್ ವೆಚ್ಚಗಳನ್ನು ಒಳಗೊಳ್ಳಲಾಗಿದೆಯಾ ಎಂದು ನೋಡಿ. ಹಾಗೆಯೇ, ಆಸ್ಪತ್ರೆಗೆ ದಾಖಲಾಗಿ ಅದೇ ದಿನ ಡಿಸ್ಚಾರ್ಜ್ ಆಗುವ ಸಂದರ್ಭ ಬಂದರೆ ಅದಕ್ಕೆ ಕವರೇಜ್ ನೀಡುವ ಪಾಲಿಸಿ ಉತ್ತಮ ಆಯ್ಕೆ ಆಗಬಹುದು.
ನೆಟ್ವರ್ಕ್ ಆಸ್ಪತ್ರೆಗಳ ಪಟ್ಟಿ ನೋಡಿ
ಇನ್ಷೂರೆನ್ಸ್ ಕಂಪನಿ ವಿವಿಧ ಆಸ್ಪತ್ರೆಗಳೊಂದಿಗೆ ಟೈಯಪ್ ಹೊಂದಿರುತ್ತದೆ. ಇಲ್ಲಿ ನೀವು ಕ್ಯಾಷ್ಲೆಸ್ ಟ್ರೀಟ್ಮೆಂಟ್ ಪಡೆಯಬಹುದು. ಈ ಪಟ್ಟಿಯಲ್ಲಿ ಉತ್ತಮ ಆಸ್ಪತ್ರೆಗಳಿವೆಯಾ ನೋಡಿ.
ಇದನ್ನೂ ಓದಿ: ಟರ್ಮ್ ಇನ್ಷೂರೆನ್ಸ್ ಮತ್ತು ಲೈಫ್ ಇನ್ಷೂರೆನ್ಸ್ ಮಧ್ಯೆ ವ್ಯತ್ಯಾಸ ಏನು? ಯಾವುದು ಬೆಟರ್? ಎರಡರ ಹೋಲಿಕೆ ಇಲ್ಲಿದೆ…
ಬೇಗ ಕ್ಲೈಮ್ ಸೆಟಲ್ಮೆಂಟ್ ಮಾಡುವಂಥ ಕಂಪನಿಗಳನ್ನು ಆಯ್ಕೆ ಮಾಡಿ
ಕ್ಯಾಷ್ಲೆಸ್ ಟ್ರೀಟ್ಮೆಂಟ್ ಆದರೆ ರಗಳೆ ಇರುವುದಿಲ್ಲ. ಆದರೆ, ನೆಟ್ವರ್ಕ್ ಅಲ್ಲದ ಆಸ್ಪತ್ರೆಗಳಲ್ಲಿ ಅಡ್ಮಿಟ್ ಆದರೆ ಬಿಲ್ ಇತ್ಯಾದಿ ಎಲ್ಲಾ ದಾಖಲೆಗಳನ್ನು ಇನ್ಷೂರೆನ್ಸ್ ಕಂಪನಿಗೆ ಸಲ್ಲಿಸಿ ಕ್ಲೈಮ್ ಮಾಡಬೇಕು. ಇಂಥ ಎಷ್ಟು ಪ್ರಮಾಣದ ಕ್ಲೈಮ್ಗಳನ್ನು ಸೆಟಲ್ ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳಿ.
ಬೇರೆ ಬೇರೆ ಪಾಲಿಸಿಗಳನ್ನು ತುಲನೆ ಮಾಡಿ…
ಒಂದು ಇನ್ಷೂರೆನ್ಸ್ ಕಂಪನಿ ಕೊಡುವ ಸೌಲಭ್ಯಗಳನ್ನೇ ಇನ್ನೊಂದು ಕಂಪನಿ ಕಡಿಮೆ ಪ್ರೀಮಿಯಮ್ಗೆ ಒದಗಿಸುವ ಸಾಧ್ಯತೆ ಇರುತ್ತದೆ. ಆ ಕಂಪನಿಯ ಕ್ಲೇಮ್ ರೇಶಿಯೋ ಉತ್ತಮವಾಗಿದ್ದರೆ ಅದನ್ನೇ ಆರಿಸಿಕೊಳ್ಳಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ