ಟರ್ಮ್ ಇನ್ಷೂರೆನ್ಸ್ ಮತ್ತು ಲೈಫ್ ಇನ್ಷೂರೆನ್ಸ್ ಮಧ್ಯೆ ವ್ಯತ್ಯಾಸ ಏನು? ಯಾವುದು ಬೆಟರ್? ಎರಡರ ಹೋಲಿಕೆ ಇಲ್ಲಿದೆ…

Difference between Term insurance and Life insurance: ಇನ್ಷೂರೆನ್ಸ್ ಪಾಲಿಸಿಗಳಲ್ಲಿ ನೀವು ಟರ್ಮ್ ಇನ್ಷೂರೆನ್ಸ್ ಮತ್ತು ಲೈಫ್ ಇನ್ಷೂರೆನ್ಸ್ ಬಗ್ಗೆ ಬಹಳಷ್ಟು ಕೇಳಿರಬಹುದು. ಯಾವ ಇನ್ಷೂರೆನ್ಸ್ ಆದರೇನು ಎಂದು ನೀವು ಭಾವಿಸಿದರೆ ಅದು ತಪ್ಪು. ಈ ಎರಡು ಇನ್ಷೂರೆನ್ಸ್ ಮಧ್ಯೆ ಪ್ರಮುಖ ವ್ಯತ್ಯಾಸ ಇದೆ. ಟರ್ಮ್ ಇನ್ಷೂರೆನ್ಸ್ ನಿಗದಿತ ಅವಧಿವರೆಗೆ ಕವರೇಜ್ ಕೊಡುತ್ತದೆ. ಮೆಚ್ಯೂರಿಟಿ ಬಳಿಕ ಲಾಭ ಇರುವುದಿಲ್ಲ. ಲೈಫ್ ಇನ್ಷೂರೆನ್ಸ್ ಇಡೀ ಜೀವಮಾನಕ್ಕೆ ಅನ್ವಯ ಆಗುತ್ತದೆ. ಆದರೆ, ಟರ್ಮ್ ಇನ್ಷೂರೆನ್ಸ್​ನಲ್ಲಿ ಪ್ರೀಮಿಯಮ್ ಬಹಳ ಕಡಿಮೆ ಇರುತ್ತದೆ.

ಟರ್ಮ್ ಇನ್ಷೂರೆನ್ಸ್ ಮತ್ತು ಲೈಫ್ ಇನ್ಷೂರೆನ್ಸ್ ಮಧ್ಯೆ ವ್ಯತ್ಯಾಸ ಏನು? ಯಾವುದು ಬೆಟರ್? ಎರಡರ ಹೋಲಿಕೆ ಇಲ್ಲಿದೆ...
ಇನ್ಷೂರೆನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 18, 2024 | 3:38 PM

ನೀವು ಇನ್ಷೂರೆನ್ಸ್ ಮಾಡಿಸುವುದಿದ್ದರೆ ಮೊದಲೇ ಯಾವ ರೀತಿಯ ಪ್ಲಾನ್​ಗಳು ಸೂಕ್ತ ಎಂಬುದನ್ನು ಯೋಚಿಸುವುದು ಒಳ್ಳೆಯದು. ಬಹಳಷ್ಟು ಬಾರಿ ಏಜೆಂಟ್​ಗಳು ಅವರಿಗೆ ಹೆಚ್ಚು ಲಾಭ ತರುವ ಪ್ಲಾನ್​ಗಳನ್ನು ಮಾರ್ಕೆಟಿಂಗ್ ಮಾಡಲು ಯತ್ನಿಸುತ್ತಾರೆ. ಕೊನೆಗೆ, ನಿಮಗೆ ಅಗತ್ಯ ಇಲ್ಲದ ಇನ್ಷೂರೆನ್ಸ್ ಪಾಲಿಸಿ ನಿಮ್ಮ ಮೇಲೆ ಹೊರೆಯಾಗಿ ನಿಲ್ಲಬಹುದು. ವಿಮೆಯಲ್ಲಿ ನಾನಾ ವಿಧಗಳಿವೆ. ಟರ್ಮ್ ಇನ್ಷೂರೆನ್ಸ್, ಲೈಫ್ ಇನ್ಷೂರೆನ್ಸ್, ಜನರಲ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಎಂದು ವಿಸ್ತೃತವಾಗಿ ವರ್ಗೀಕರಿಸಬಹುದು. ಈ ಪೈಕಿ ಎಲ್​ಐಸಿ ಸಂಸ್ಥೆ ನಿರ್ವಹಿಸುವ ಟರ್ಮ್ ಇನ್ಷೂರೆನ್ಸ್ ಮತ್ತು ಲೈಫ್ ಇನ್ಷೂರೆನ್ಸ್ ಮಧ್ಯೆ ವ್ಯತ್ಯಾಸ ಏನು (Difference between Term insurance and Life insurance) ಎಂದು ತಿಳಿಸುವ ಪ್ರಯತ್ನ ಇಲ್ಲಿದೆ…

ಟರ್ಮ್ ಇನ್ಷೂರೆನ್ಸ್ ಎಂದರೆ ಏನು?

ಟರ್ಮ್ ಎಂದರೆ ಅವಧಿ. ಟರ್ಮ್ ಇನ್ಷೂರೆನ್ಸ್ ಎಂಬುದು ನಿಗದಿತ ಅವಧಿಯವರೆಗೆ ಕವರೇಜ್ ನೀಡುವ ಪ್ಲಾನ್ ಆಗಿರುತ್ತದೆ. ಅಂದರೆ, ನೀವು 30 ವರ್ಷಕ್ಕೆ 50 ಲಕ್ಷ ರೂ ಕವರೇಜ್ ಇರುವ ಟರ್ಮ್ ಇನ್ಷೂರೆನ್ಸ್ ಮಾಡಿಸಿದ್ದೀರಿ ಎಂದಿಟ್ಟುಕೊಳ್ಳಿ. ನೀವು ಸತ್ತರೆ ನಿಮ್ಮ ವಾರಸುದಾರರಿಗೆ 50 ಲಕ್ಷ ರೂ ಸಿಗುತ್ತದೆ. ಆದರೆ, ಇದು 30 ವರ್ಷದವರೆಗೆ ಮಾತ್ರವೇ ಅನ್ವಯ ಆಗುತ್ತದೆ. 30 ವರ್ಷದ ಬಳಿಕ ಪಾಲಿಸಿ ಅಂತ್ಯಗೊಳ್ಳುತ್ತದೆ.

ಇದನ್ನೂ ಓದಿ: ಟರ್ಮ್ ಲೈಫ್ ಇನ್ಷೂರೆನ್ಸ್ ಯಾಕೆ ಮುಖ್ಯ? ಎಷ್ಟು ಮಾಡಿಸಬೇಕು? ಯಾವ್ಯಾವ ಅಂಶಗಳು ಗಮನದಲ್ಲಿರಬೇಕು? ಇಲ್ಲಿದೆ ಡೀಟೇಲ್ಸ್

ಲೈಫ್ ಇನ್ಷೂರೆನ್ಸ್ ಎಂದರೆ ಏನು?

ಲೈಫ್ ಇನ್ಷೂರೆನ್ಸ್ ಎಂಬುದು ಪಾಲಿಸಿದಾರ ಬದುಕಿರುವವರೆಗೂ ಅನ್ವಯ ಆಗುತ್ತದೆ. ಆ ವ್ಯಕ್ತಿ ಸತ್ತ ಬಳಿಕ ವಾರಸುದಾರರಿಗೆ ಹಣ ಸಿಗುತ್ತದೆ.

ಟರ್ಮ್ ಇನ್ಷೂರೆನ್ಸ್, ಲೈಫ್ ಇನ್ಷೂರೆನ್ಸ್ ಅನುಕೂಲ, ಅನನುಕೂಲ ತಿಳಿಯಿರಿ…

ಟರ್ಮ್ ಇನ್ಷೂರೆನ್ಸ್ ನಿಗದಿತ ಅವಧಿ ಬಳಿಕ ಸಮಾಪ್ತಿಗೊಳ್ಳುತ್ತದೆಯಾದರೂ ಅದರ ಪ್ರೀಮಿಯಮ್ ಬಹಳ ಕಡಿಮೆ. ಉದಾಹರಣೆಗೆ, ಮೂವತ್ತು ವರ್ಷಕ್ಕೆ ಒಂದು ಕೋಟಿ ರೂ ಕವರೇಜ್ ಕೊಡುವ ಟರ್ಮ್ ಇನ್ಷೂರೆನ್ಸ್ ಪಾಲಿಸಿ ತೆಗೆದುಕೊಂಡರೆ ನೀವು ತಿಂಗಳಿಗೆ ಕಟ್ಟುವ ಪ್ರೀಮಿಯಮ್ 900 ರೂ ಆಸುಪಾಸು ಇರುತ್ತದೆ.

ಇಷ್ಟೇ ಮೊತ್ತಕ್ಕೆ ನೀವು ಲೈಫ್ ಇನ್ಷೂರೆನ್ಸ್ ಪ್ಲಾನ್ ಪಡೆದಲ್ಲಿ ತಿಂಗಳಿಗೆ ಕಟ್ಟಬೇಕಾದ ಪ್ರೀಮಿಯಮ್ 21,000 ರೂಗಿಂತಲೂ ಹೆಚ್ಚಿರುತ್ತದೆ. ಅಂದರೆ ಟರ್ಮ್ ಇನ್ಷೂರೆನ್ಸ್ ಎಂಬುದು ರಿಸ್ಕ್ ಕವರೇಜ್​ಗೆ ಇರುವ ಸ್ಕೀಮ್ ಆಗಿರುತ್ತದೆ. ಒಂದು ರೀತಿಯಲ್ಲಿ ಹೆಲ್ತ್ ಇನ್ಷೂರೆನ್ಸ್ ಇದ್ದಂತೆ.

ಇದನ್ನೂ ಓದಿ: ನಿಮ್ಮದು ವರ್ಷಕ್ಕೆ 12 ಲಕ್ಷ ರೂ ಆದಾಯ ಇದ್ದರೆ ಎಷ್ಟು ತೆರಿಗೆ ಕಟ್ಟಬೇಕು? ಟ್ಯಾಕ್ಸ್ ಸ್ಲ್ಯಾಬ್ ಹೇಗೆ ಅನ್ವಯ ಆಗುತ್ತೆ ನೋಡಿ

ನೀವು ಬದುಕಿರುವಾಗಲೇ ಇನ್ಷೂರೆನ್ಸ್ ಹಣ ಪಡೆಯಬೇಕೆಂದಿದ್ದಲ್ಲಿ ಲೈಫ್ ಇನ್ಷೂರೆನ್ಸ್​ನಲ್ಲಿ ಎಂಡೋಮೆಂಟ್ ಪಾಲಿಸಿ ಮಾಡಿಸಬಹುದು. ಇಲ್ಲವಾದಲ್ಲಿ ಕಡಿಮೆ ಪ್ರೀಮಿಯಮ್ ಇರುವ ಟರ್ಮ್ ಇನ್ಷೂರೆನ್ಸ್ ಮಾಡಿಸುವುದು ಉತ್ತಮ. ಕೆಲ ಟರ್ಮ್ ಇನ್ಷೂರೆನ್ಸ್ ಪಾಲಿಸಿಗಳು ಮೆಚ್ಯೂರಿಟಿ ಬಳಿಕ ಅಷ್ಟೂ ಪ್ರೀಮಿಯಮ್ ಹಣವನ್ನು ಮರಳಿಸುತ್ತವೆ. ಇವುಗಳ ಪ್ರೀಮಿಯಮ್ ತುಸು ಹೆಚ್ಚಿರಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು