ಕೇಂದ್ರ ಬಜೆಟ್ 2024: ಮಹಿಳೆಯರಿಗೆ ವಿಶೇಷ ತೆರಿಗೆ ಲಾಭ ಸಿಗುತ್ತದಾ? ನಿರೀಕ್ಷೆಗಳಿವು…

Union Budget 2024, expectations by women: 2024ರ ಯೂನಿಯನ್ ಬಜೆಟ್​ನಲ್ಲಿ ಮಹಿಳೆಯರ ಉನ್ನತಿಗೆ ಪೂರಕವಾಗುವ ಹಲವು ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ಹಿರಿಯ ನಾಗರಿಕರಿಗೆ ಇರುವಂತೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್​ನಲ್ಲಿ ಮಹಿಳೆಯರಿಗೂ ರಿಯಾಯಿತಿ ಕೊಡಬೇಕೆಂಬ ಕೂಗು ಕೇಳಿಬರುತ್ತಿದೆ. ಒಂದು ಕೋಟಿ ಲಖ್​ಪತಿ ದೀದಿ ಅಥವಾ ಲಕ್ಷಾಧಿಪತಿ ಮಹಿಳೆಯರನ್ನು ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆಗಳನ್ನು ರೂಪಿಸಬಹುದು, ಅಥವಾ ಅನುದಾನ ಹೆಚ್ಚಿಸಬಹುದು.

ಕೇಂದ್ರ ಬಜೆಟ್ 2024: ಮಹಿಳೆಯರಿಗೆ ವಿಶೇಷ ತೆರಿಗೆ ಲಾಭ ಸಿಗುತ್ತದಾ? ನಿರೀಕ್ಷೆಗಳಿವು...
ಮಹಿಳೆಯರು
Follow us
|

Updated on: Jul 09, 2024 | 2:35 PM

ನವದೆಹಲಿ, ಜುಲೈ 9: ಮೋದಿ 3.0 ಸರ್ಕಾರದಲ್ಲಿ ಒತ್ತು ಕೊಡಲಾಗುತ್ತಿರುವ ನಾಲ್ಕು ಸಮುದಾಯಗಳಲ್ಲಿ ಮಹಿಳೆಯದೂ ಒಂದು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮಹಿಳೆಯರಿಗೆ ಹೆಚ್ಚು ಅವಕಾಶಗಳನ್ನು ನೀಡುವ ಪ್ರಯತ್ನಗಳು ಮತ್ತು ಯೋಜನೆಗಳು ಮುಂಬರುವ ಬಜೆಟ್​ನಲ್ಲಿ ಹೆಚ್ಚುವ ನಿರೀಕ್ಷೆ ಇದೆ. ಮುದ್ರಾ ಯೋಜನೆ ಅಡಿ ವಿತರಿಸಲಾಗುವ ಸಾಲದಲ್ಲಿ 30 ಕೋಟಿ ರೂ ಮೊತ್ತದ ಸಾಲವನ್ನು ಮಹಿಳಾ ಉದ್ದಿಮೆದಾರರಿಗೆ ವಿತರಿಸಲಾಗಿದೆ ಎಂದು ಫೆಬ್ರುವರಿಯ ಮಧ್ಯಂತರ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಒಂದು ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಯಾಗಿಸುವ ಗುರಿ ಸರ್ಕಾರದ ಮುಂದಿದೆ. ಇದಕ್ಕಾಗಿ 83 ಲಕ್ಷ ಸ್ವಸಹಾಯ ಗುಂಪುಗಳು ಕಾರ್ಯೋನ್ಮುಖವಾಗಿವೆ. ಪಿಎಂ ಕಿಸಾನ್ ಯೋಜನೆ ಅಡಿ ಬರುವ 9 ಕೋಟಿಗೂ ಹೆಚ್ಚು ಫಲಾನುಭವಿಗಳಲ್ಲಿ ಮಹಿಳೆಯರ ಸಂಖ್ಯೆ 3 ಕೋಟಿಗೂ ಹೆಚ್ಚಿದೆ. ಜುಲೈ 23ರಂದು ಮಂಡನೆ ಆಗುವ ಬಜೆಟ್​ನಲ್ಲಿ ಮಹಿಳೆಯರಿಗೆ ಪರೋಕ್ಷವಾಗಿ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಸಬ್ಸಿಡಿ, ತೆರಿಗೆ ಲಾಭ ಇತ್ಯಾದಿಯನ್ನು ವಿತ್ತ ಸಚಿವೆ ಘೋಷಿಸಬಹುದು.

ಕೆಲ ದೇಶಗಳಲ್ಲಿ ವಿವಾಹಿತ ದಂಪತಿ ಜಂಟಿಯಾಗಿ ಟ್ಯಾಕ್ಸ್ ಫೈಲಿಂಗ್ ಮಾಡುವ ಆಯ್ಕೆ ಇದೆ. ಇದರಿಂದ ತೆರಿಗೆ ಉಳಿಸುವ ಅವಕಾಶ ಇದೆ. ಉದ್ಯೋಗಸ್ಥ ಮಹಿಳೆಯರು ಉದ್ಯೋಗ ಸಂಬಂಧಿ ವೆಚ್ಚಗಳಿಗೆ, ನಿವೃತ್ತಿ ನಿಧಿಗೆ ಮಾಡುವ ಕೊಡುಗೆಗಳಿಗೆ ಅಥವಾ ಶಿಕ್ಷಣಕ್ಕಾಗಿ ಮಾಡುವ ವೆಚ್ಚಗಳಿಗೆ ಟ್ಯಾಕ್ಸ್ ಡಿಡಕ್ಷನ್ ಇದೆ. ಭಾರತಲ್ಲೂ ಮಹಿಳೆಯರಿಗೆ ಇಂಥ ಕೆಲ ಯೋಜನೆಗಳು ಲಾಭ ತರಬಹುದು.

ಇದನ್ನೂ ಓದಿ: Union Budget 2024: ಜು. 22ಕ್ಕೆ ಸಂಸತ್ ಅಧಿವೇಶನ, ಜು.23ಕ್ಕೆ ಬಜೆಟ್ ಮಂಡನೆ: ​​ ಸಚಿವ ಕಿರಣ್ ರಿಜಿಜು

ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್​ನಲ್ಲಿ ಹಿರಿಯ ನಾಗರಿಕರಿಗೆ ಕೆಲ ರಿಯಾಯಿತಿಗಳಿವೆ. ಹಾಗೆಯೇ, ಮಹಿಳೆಯರಿಗೂ ಆದಾಯ ತೆರಿಗೆ ರಿಯಾಯಿತಿ ಕೊಡಬಹುದು. ಇದರಿಂದ ಮಹಿಳೆಯರ ಸಬಲೀಕರಣಕ್ಕೆ ಪುಷ್ಟಿ ಸಿಗಬಹುದು. ಆರ್ಥಿಕತೆಗೂ ಇದು ಪರೋಕ್ಷವಾಗಿ ಅನುಕೂಲವಾಗಬಹುದು ಎನ್ನುವ ಅಭಿಪ್ರಾಯ ಇದೆ.

ಅಮೆರಿಕ, ಕೆನಡಾ ಮೊದಲಾದ ದೇಶಗಳಲ್ಲಿ ಮಕ್ಕಳ ಪಾಲನೆ ವೆಚ್ಚಕ್ಕೆ ನಿರ್ದಿಷ್ಟ ಟ್ಯಾಕ್ಸ್ ಡಿಡಕ್ಷನ್ ಇದೆ. ಇಂಥದ್ದು ಭಾರತದಲ್ಲೂ ತರಬೇಕು ಎನ್ನುವ ಅಭಿಪ್ರಾಯಗಳಿವೆ. ಮಹಿಳೆಯರಿಗೆ ಹೆಚ್ಚು ವೈದ್ಯಕೀಯ ವೆಚ್ಚ ಇರುವುದರಿಂದ ಅಲ್ಲಿಯೂ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಕಲ್ಪಿಸಬಹುದು ಎನ್ನುವ ಸಲಹೆ ಇದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ