ಬೆಂಗಳೂರು, ನವೆಂಬರ್ 10: ಚಿನ್ನದ ಬೆಲೆ ವಾರಾಂತ್ಯದಲ್ಲಿ ಅಲ್ಪ ಇಳಿಕೆ ಕಂಡಿದೆ. ಗ್ರಾಮ್ಗೆ 10 ರೂನಷ್ಟು ಇಳಿಕೆ ಆಗಿದೆ. 7,285 ರೂ ಇದ್ದ ಬೆಲೆ 7,275ರೂಗೆ ಕುಸಿದಿದೆ. ಇದೇ ವೇಳೆ, ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. 94 ಮತ್ತು 103 ರೂ ಬೆಲೆ ಮುಂದುವರಿದಿದೆ. ಕಳೆದ 10 ದಿನದಲ್ಲಿ ಬೆಳ್ಳಿ ಬೆಲೆ ಆರು ರೂನಷ್ಟು ಇಳಿಕೆ ಕಂಡಿದೆ. ನವೆಂಬರ್ 1 ಮತ್ತು 7ರಂದು ತಲಾ ಮೂರು ರೂಗಳಂತೆ ಬೆಲೆ ಇಳಿಕೆ ಆಗಿದ್ದರ ಪರಿಣಾಮವಾಗಿ ಬೆಳ್ಳಿ ತುಸು ಅಗ್ಗಗೊಂಡಿದೆ. ಚಿನ್ನದ ಬೆಲೆಯೂ ಹತ್ತು ದಿನದಲ್ಲಿ ಗಮನಾರ್ಹ ಎನಿಸುವಷ್ಟು ಇಳಿಕೆ ಕಂಡಿದೆ. 22 ಕ್ಯಾರಟ್ನ ಆಭರಣ ಚಿನ್ನದ ಬೆಲೆ ಈ ತಿಂಗಳ ಆರಂಭದಲ್ಲಿ 7,455 ರೂ ಇತ್ತು. ಈಗ ಅದು 7,275 ರೂ ತಲುಪಿದೆ. ಗ್ರಾಮ್ಗೆ 180 ರೂನಷ್ಟು ಬೆಲೆ ಇಳಿಕೆ ಆಗಿದೆ. ಇದೇ ವೇಳೆ ವಿದೇಶದ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಯಥಾಸ್ಥಿತಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 72,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 79,360 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 72,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,400 ರುಪಾಯಿಯಲ್ಲಿ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ ಈ ವಾರವೂ ಕುಸಿತ; ಆದರೂ ನಾಲ್ಕನೇ ಸ್ಥಾನದಲ್ಲಿ ಭಾರತ
ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ