AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಫಾರೆಕ್ಸ್ ರಿಸರ್ವ್ಸ್ ಈ ವಾರವೂ ಕುಸಿತ; ಆದರೂ ನಾಲ್ಕನೇ ಸ್ಥಾನದಲ್ಲಿ ಭಾರತ

Forex Reserves of India: ಭಾರತದ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ ನವೆಂಬರ್ 1ರಂದು 682.13 ಬಿಲಿಯನ್ ಡಾಲರ್ ಆಗಿದೆ. ಆ ವಾರ 2.6 ಬಿಲಿಯನ್ ಡಾಲರ್​ನಷ್ಟು ನಿಧಿ ಇಳಿದಿದೆ. ಕಳೆದ ತಿಂಗಳು ಭಾರತದ ಫಾರೆಕ್ಸ್ ಮೀಸಲು ಸಂಪತ್ತು 700 ಬಿಲಿಯನ್ ಡಾಲರ್ ಗಡಿ ದಾಟಿ ಹೋಗಿತ್ತು. ಈಗ ಸತತವಾಗಿ ಕುಸಿದರೂ ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿದ ದೇಶಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನ ಹೊಂದಿದೆ.

ಭಾರತದ ಫಾರೆಕ್ಸ್ ರಿಸರ್ವ್ಸ್ ಈ ವಾರವೂ ಕುಸಿತ; ಆದರೂ ನಾಲ್ಕನೇ ಸ್ಥಾನದಲ್ಲಿ ಭಾರತ
ಆರ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 08, 2024 | 6:06 PM

Share

ನವದೆಹಲಿ, ನವೆಂಬರ್ 8: ಭಾರತದ ವಿದೇಶ ವಿನಿಮಯ ಮೀಸಲು ನಿಧಿ ನಾಲ್ಕನೇ ವಾರ ಕುಸಿತ ಕಂಡಿದೆ. ನವೆಂಬರ್ 1ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 2.6 ಬಿಲಿಯನ್ ಡಾಲರ್​ನಷ್ಟು ಕಡಿಮೆ ಆಗಿದೆ. ಇದರೊಂದಿಗೆ ಫಾರೆಕ್ಸ್ ರಿಸರ್ವ್ಸ್ 682.13 ಬಿಲಿಯನ್ ಡಾಲರ್​ನಷ್ಟು ನಿಧಿ ಭಾರತದಲ್ಲಿದೆ. ಹಿಂದಿನ ವಾರದಲ್ಲಿ (ಅಕ್ಟೋಬರ್ 25) ಫಾರೆಕ್ಸ್ ರಿಸರ್ವ್ಸ್ 3.4 ಬಿಲಿಯನ್ ಡಾಲರ್​ನಷ್ಟು ಕುಸಿತ ಕಂಡಿತ್ತು.

ನವೆಂಬರ್ 1ರ ವಾರದಲ್ಲಿ ಒಟ್ಟಾರೆ ಫಾರೆಕ್ಸ್ ನಿಧಿ 2.6 ಬಿಲಿಯನ್ ಡಾಲರ್​ನಷ್ಟು ಇಳಿಕೆ ಆದರೂ ಗೋಲ್ಡ್ ಸಂಗ್ರಹ 1.2 ಬಿಲಿಯನ್ ಡಾಲರ್ ಮೌಲ್ಯದಷ್ಟು ಹೆಚ್ಚಿದೆ. ಐಎಂಎಫ್​ನೊಂದಿಗಿರುವ ನಿಧಿಯಲ್ಲೂ 4 ಮಿಲಿಯನ್ ಡಾಲರ್​ನಷ್ಟು ಹೆಚ್ಚಳವಾಗಿದೆ. ಆದರೆ, ವಿದೇಶೀ ಕರೆನ್ಸಿ ಆಸ್ತಿ 3.9 ಬಿಲಿಯನ್ ಡಾಲರ್​ನಷ್ಟು ಕುಸಿದಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (SDR) ಕೂಡ ಒಂದು ಮಿಲಿಯನ್ ಡಾಲರ್​ನಷ್ಟು ಇಳಿದಿದೆ.

ಇದನ್ನೂ ಓದಿ: ಗಮನಿಸಿ… ನವೆಂಬರ್ 15 ಮತ್ತು 20ರಂದು ವಾರದ ದಿನವಾದರೂ ಷೇರು ಮಾರುಕಟ್ಟೆಗೆ ರಜೆ

ನವೆಂಬರ್ 1ರಂದು ಭಾರತದ ಫಾರೆಕ್ಸ್ ರಿಸರ್ವ್ಸ್ ವಿವರ

ಒಟ್ಟು ಫಾರೆಕ್ಸ್ ರಿಸರ್ವ್ಸ್: 682.13 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿ: 589.84 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 69.75 ಬಿಲಿಯನ್ ಡಾಲರ್
  • ಎಸ್​ಡಿಆರ್: 18.21 ಬಿಲಿಯನ್ ಡಾಲರ್
  • ಐಎಂಎಫ್​ನಲ್ಲಿನ ನಿಧಿ: 4.3 ಬಿಲಿಯನ್ ಡಾಲರ್

ಫಾರೆಕ್ಸ್ ನಿಧಿಯಲ್ಲಿ ವಿಶ್ವದ ನಂಬರ್ 4, ಭಾರತ

ಭಾರತದ ಫಾರೆಕ್ಸ್ ಸಂಪತ್ತು ಇತ್ತೀಚಿನ ವರ್ಷಗಳಿಂದ ಗಣನೀಯವಾಗಿ ಹೆಚ್ಚುತ್ತಿದೆ. ಕಳೆದ ತಿಂಗಳು ಮೊದಲ ಬಾರಿಗೆ 700 ಬಿಲಿಯನ್ ಡಾಲರ್ ಮೈಲಿಗಲ್ಲು ಮಟ್ಟಿತ್ತು. ಭಾರತ ವಿಶ್ವದ ಅತಿಹೆಚ್ಚು ಫಾರೆಕ್ಸ್ ಸಂಪತ್ತು ಹೊಂದಿರುವ ದೇಶಗಳ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಚೀನಾ, ಜಪಾನ್ ಮತ್ತು ಸ್ವಿಟ್ಜರ್​ಲ್ಯಾಂಡ್ ನಂತರ ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿರುವುದು ಭಾರತವೇ. ಭಾರತದ ರೀತಿ ರಷ್ಯಾ ಕೂಡ ಫಾರೆಕ್ಸ್ ಸಂಪತ್ತು ಹೆಚ್ಚಿಸಿಕೊಳ್ಳುತ್ತಿದೆ. ಭಾರತದ ನಂತರ ಸ್ಥಾನದಲ್ಲಿ ರಷ್ಯಾ ಇದೆ.

ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿರುವ ಟಾಪ್-5 ದೇಶಗಳು

  1. ಚೀನಾ: 3.57 ಟ್ರಿಲಿಯನ್ ಡಾಲರ್
  2. ಜಪಾನ್: 1.25 ಟ್ರಿಲಿಯನ್ ಡಾಲರ್
  3. ಸ್ವಿಟ್ಜರ್​ಲ್ಯಾಂಡ್: 952 ಬಿಲಿಯನ್ ಡಾಲರ್
  4. ಭಾರತ: 684 ಬಿಲಿಯನ್ ಡಾಲರ್
  5. ರಷ್ಯಾ: 628 ಬಿಲಿಯನ್ ಡಾಲರ್

ಇದನ್ನೂ ಓದಿ: ರಿಷಿತ್, ಈ ಬೆಂಗಳೂರು ಹುಡುಗ ಈಗ ಸ್ವೀಡನ್ ಮೂಲದ ಟ್ರೂಕಾಲರ್ ಸಿಇಒ; ಯಾರು ಈ ಜುಂಜುನವಾಲ?

ಆರ್​ಬಿಐ ಈ ಫಾರೆಕ್ಸ್ ರಿಸರ್ವ್ಸ್ ಅನ್ನು ರುಪಾಯಿ ಮೌಲ್ಯ ಕುಸಿತ ತಡೆಯಲು ಬಳಸುತ್ತದೆ. ಡಾಲರ್ ಎದುರು ರುಪಾಯಿ ತೀರಾ ಅಸ್ವಾಭಾವಿಕವಾಗಿ ಕುಸಿದರೆ ಆಗ ಆರ್​ಬಿಐ ಒಂದಷ್ಟು ಡಾಲರ್​ಗಳನ್ನು ಮಾರಿ ರುಪಾಯಿ ಕರೆನ್ಸಿ ಮೌಲ್ಯವನ್ನು ಕಾಪಾಡಲು ಯತ್ನಿಸುತ್ತದೆ. ಇದೇ ಕಾರಣಕ್ಕೆ ಇತ್ತೀಚಿನ ಕೆಲ ವಾರಗಳಿಂದ ಭಾರತದ ಫಾರೆಕ್ಸ್ ರಿಸರ್ವ್ಸ್​ನಿಂದ ವಿದೇಶೀ ಕರೆನ್ಸಿ ಆಸ್ತಿ ಕಡಿಮೆ ಆಗುತ್ತಾ ಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ