Gold Silver Price on 12th September: ಚಿನ್ನದ ಬೆಲೆಯಲ್ಲಿ ತುಸು ಹೆಚ್ಚಳ; ಬೆಳ್ಳಿ ಬೆಲೆ ಯಥಾಸ್ಥಿತಿ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2024 September 12th: ಆಭರಣ ಚಿನ್ನದ ಬೆಲೆ ಬುಧವಾರ ಗ್ರಾಮ್​ಗೆ 6,676 ರೂ ಇದ್ದದ್ದು ಇಂದು ಗುರುವಾರ 6,705ಕ್ಕೆ ಏರಿದೆ. ಅಪರಂಜಿ ಚಿನ್ನದ ಬೆಲೆ 7,315 ರೂ ಆಗಿದೆ. ಬೆಳ್ಳಿ ಬೆಲೆ 86.50 ರೂನಲ್ಲಿ ಮುಂದುವರಿದಿದೆ.

Gold Silver Price on 12th September: ಚಿನ್ನದ ಬೆಲೆಯಲ್ಲಿ ತುಸು ಹೆಚ್ಚಳ; ಬೆಳ್ಳಿ ಬೆಲೆ ಯಥಾಸ್ಥಿತಿ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ

Updated on: Sep 12, 2024 | 10:29 AM

ಬೆಂಗಳೂರು, ಸೆಪ್ಟಂಬರ್ 12: ಚಿನ್ನದ ಬೆಲೆ ನಿನ್ನೆಗಿಂತ ಇವತ್ತು ಏರಿಕೆ ಆಗಿದೆ. ಗ್ರಾಮ್​ಗೆ 290 ರೂನಷ್ಟು ಬೆಲೆ ಹೆಚ್ಚಳ ಆಗಿದೆ. ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ವಿದೇಶಗಳಲ್ಲಿ ಕೆಲವೆಡೆ ಏರಿಕೆ ಆದರೆ, ಮತ್ತೆ ಕೆಲವೆಡೆ ಕಡಿಮೆ ಆಗಿದೆ. ಅಮೆರಿಕದಲ್ಲಿ ಬಡ್ಡಿದರ ಮುಂದಿನ ವಾರ ಇಳಿಕೆಯಾಗುವ ಖಚಿತ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಒಂದಷ್ಟು ಮಟ್ಟಕ್ಕೆ ಏರಿಕೆಯಾಗುವ ಸಾಧ್ಯತೆ ಇಲ್ಲದಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,050 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,150 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,650 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 67,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,400 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಸೆಪ್ಟೆಂಬರ್ 12ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,050 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,150 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 865 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,050 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,150 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 840 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 67,050 ರೂ
  • ಚೆನ್ನೈ: 67,050 ರೂ
  • ಮುಂಬೈ: 67,050 ರೂ
  • ದೆಹಲಿ: 67,200 ರೂ
  • ಕೋಲ್ಕತಾ: 67,050 ರೂ
  • ಕೇರಳ: 67,050 ರೂ
  • ಅಹ್ಮದಾಬಾದ್: 67,100 ರೂ
  • ಜೈಪುರ್: 67,200 ರೂ
  • ಲಕ್ನೋ: 67,200 ರೂ
  • ಭುವನೇಶ್ವರ್: 67,050 ರೂ

ಇದನ್ನೂ ಓದಿ: ಅಮೆರಿಕದಲ್ಲಿ ಹಣದುಬ್ಬರ ಇಳಿಕೆ; ಚಿನ್ನ, ಬೆಳ್ಳಿ ಬೆಲೆ ಏರುವ ಸಾಧ್ಯತೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,460 ರಿಂಗಿಟ್ (67,120 ರುಪಾಯಿ)
  • ದುಬೈ: 2,812.50 ಡಿರಾಮ್ (64,300 ರುಪಾಯಿ)
  • ಅಮೆರಿಕ: 765 ಡಾಲರ್ (64,250 ರುಪಾಯಿ)
  • ಸಿಂಗಾಪುರ: 1,027 ಸಿಂಗಾಪುರ್ ಡಾಲರ್ (66,140 ರುಪಾಯಿ)
  • ಕತಾರ್: 2,850 ಕತಾರಿ ರಿಯಾಲ್ (65,650 ರೂ)
  • ಸೌದಿ ಅರೇಬಿಯಾ: 2,890 ಸೌದಿ ರಿಯಾಲ್ (64,670 ರುಪಾಯಿ)
  • ಓಮನ್: 301 ಒಮಾನಿ ರಿಯಾಲ್ (65,660 ರುಪಾಯಿ)
  • ಕುವೇತ್: 227.80 ಕುವೇತಿ ದಿನಾರ್ (62,590 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,400 ರೂ
  • ಚೆನ್ನೈ: 9,150 ರೂ
  • ಮುಂಬೈ: 8,650 ರೂ
  • ದೆಹಲಿ: 8,650 ರೂ
  • ಕೋಲ್ಕತಾ: 8,650 ರೂ
  • ಕೇರಳ: 9,150 ರೂ
  • ಅಹ್ಮದಾಬಾದ್: 8,650 ರೂ
  • ಜೈಪುರ್: 8,650 ರೂ
  • ಲಕ್ನೋ: 8,650 ರೂ
  • ಭುವನೇಶ್ವರ್: 9,150 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us