ಅಮೆರಿಕದಲ್ಲಿ ಹಣದುಬ್ಬರ ಇಳಿಕೆ; ಚಿನ್ನ, ಬೆಳ್ಳಿ ಬೆಲೆ ಏರುವ ಸಾಧ್ಯತೆ

US inflation rate and Gold rates: ಕಳೆದ ಕೆಲ ವಾರಗಳಿಂದ ಇಳಿಕೆಯಾಗುತ್ತಿರುವ ಚಿನ್ನ, ಬೆಳ್ಳಿ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಅಮೆರಿಕದಲ್ಲಿ ಹಣದುಬ್ಬರ ಮಟ್ಟ ಕಳೆದ ಮೂರು ವರ್ಷದಲ್ಲೇ ಕನಿಷ್ಠಕ್ಕೆ ಬಂದಿದೆ. ಹೀಗಾಗಿ, ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರ ತಗ್ಗಿಸುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಚಿನ್ನ, ಬೆಳ್ಳಿಗೆ ಬೇಡಿಕೆ ಹೆಚ್ಚಾಗಬಹುದು.

ಅಮೆರಿಕದಲ್ಲಿ ಹಣದುಬ್ಬರ ಇಳಿಕೆ; ಚಿನ್ನ, ಬೆಳ್ಳಿ ಬೆಲೆ ಏರುವ ಸಾಧ್ಯತೆ
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 11, 2024 | 7:07 PM

ನವದೆಹಲಿ, ಸೆಪ್ಟೆಂಬರ್ 11: ಅಮೆರಿಕದಲ್ಲಿ ಹಣದುಬ್ಬರ ದರ ಕಡಿಮೆ ಆಗಿದೆ. ಅಲ್ಲಿನ ಕಾರ್ಮಿಕ ಇಲಾಖೆ ಬಿಡುಗಡೆ ಮಾಡಿದ ವರದಿ ಪ್ರಕಾರ ಆಗಸ್ಟ್ ತಿಂಗಳಲ್ಲಿ ಹಣದುಬ್ಬರ ಶೇ. 2.5ರಷ್ಟು ಇದೆ. ಅಂದರೆ, 2023ರ ಆಗಸ್ಟ್​​ನಲ್ಲಿ ಇದ್ದ ಬೆಲೆ ಒಂದು ವರ್ಷದ ಅಂತರದಲ್ಲಿ ಶೇ. 2.5ರಷ್ಟು ಏರಿದೆ. ಇಷ್ಟೊಂದು ಅಲ್ಪ ಏರಿಕೆ ಆಗಿರುವುದು ಕಳೆದ ಮೂರು ವರ್ಷದಲ್ಲೇ ಇದೇ ಮೊದಲು. ಹಣದುಬ್ಬರ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಈಗ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರ ಇಳಿಸುವ ಸಾಧ್ಯತೆ ಇನ್ನಷ್ಟು ದಟ್ಟವಾಗಿದೆ. ಇದರ ಪರಿಣಾಮ ಚಿನ್ನ, ಬೆಳ್ಳಿ ಇತ್ಯಾದಿ ವಲಯಗಳ ಮೇಲಾಗಲಿದೆ.

ಫೆಡರಲ್ ರಿಸರ್ವ್ ಮುಂದಿನ ವಾರ ಸಭೆ ನಡೆಸಲಿದೆ. ಅದರ ಮುಖ್ಯಸ್ಥ ಜಿರೋಮ್ ಪೋವೆಲ್ ಅವರು ಈ ವರ್ಷ ಒಂದೆರಡು ಬಾರಿ ಬಡ್ಡಿದರ ಇಳಿಸಲಾಗುವುದು ಎನ್ನುವ ಸುಳಿವು ನೀಡಿದ್ದಾರೆ. ಹಣದುಬ್ಬರ ಏರಲಿ, ಬಿಡಲಿ ಬಡ್ಡಿದರ ಇಳಿಕೆ ಶತಃ ಸಿದ್ಧ ಎಂದೂ ಗಟ್ಟಿಯಾದ ಸುಳಿವು ನೀಡಿದ್ದಾರೆ. ಮುಂದಿನ ವಾರ 25 ಬೇಸಿಸ್ ಪಾಯಿಂಟ್​ಗಳಷ್ಟು ಬಡ್ಡಿದರ ಇಳಿಯುವ ನಿರೀಕ್ಷೆ ಇದೆ. ಆದರೆ, ಹಣದುಬ್ಬರ ಇಳಿಕೆ ಆಗಿರುವುದರಿಂದ ಮುಂದಿನ ವಾರ ಬಡ್ಡಿದರವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆ ಮಾಡಿದರೆ ಯಾವ ಅಚ್ಚರಿಯೂ ಇರುವುದಿಲ್ಲ.

ಚಿನ್ನ, ಬೆಳ್ಳಿ ಬೆಲೆ ಏರಿಕೆ ಸಾಧ್ಯತೆ

ಚಿನ್ನ ಮತ್ತು ಬೆಳ್ಳಿ ಬೆಲೆ ಈಗ್ಗೆ ಕೆಲವಾರು ವಾರಗಳಿಂದಲೂ ಇಳಿಕೆ ಆಗುತ್ತಿದೆ. ಒಂದು ವೇಳೆ ಫೆಡರಲ್ ರಿಸರ್ವ್ ತನ್ನ ಬಡ್ಡಿದರ ಇಳಿಕೆ ಮಾಡಿದ್ದೇ ಆದಲ್ಲಿ ಇವೆರಡು ಲೋಹಗಳಿಗೆ ಬೇಡಿಕೆ ಹೆಚ್ಚಲಿದೆ. ಹೂಡಿಕೆದಾರರು ಚಿನ್ನ, ಬೆಳ್ಳಿ ಖರೀದಿಯ ಭರಾಟೆಗೆ ಇಳಿಯಬಹುದು ಎನ್ನಲಾಗಿದೆ. ಈ ರೀತಿಯ ಪ್ರವೃತ್ತಿ ಹಿಂದಿನ ಬೆಳವಣಿಗೆಗಳಲ್ಲಿ ಕಾಣಬಹುದು. ಈ ಬಾರಿಯೂ ಈ ಟ್ರೆಂಡ್ ಮುಂದುವರಿಯಬಹುದು.

ಇದನ್ನೂ ಓದಿ: ಎಸ್​ಬಿಐನ ಈ ಫಂಡ್ ಭರ್ಜರಿ ಲಾಭ; ತಿಂಗಳಿಗೆ 10,000 ರೂ ಹೂಡಿಕೆ; 3 ವರ್ಷದಲ್ಲಿ 5 ಲಕ್ಷ ರೂ ಸಂಪತ್ತು

ಬಡ್ಡಿದರ ಕಡಿಮೆ ಆದರೆ ಚಿನ್ನಕ್ಕೆ ಯಾಕೆ ಬೇಡಿಕೆ ಬರುತ್ತದೆ ಎಂಬುದಕ್ಕೆ ಕಾರಣ ಇದೆ. ಬಡ್ಡಿದರ ಕಡಿಮೆ ಆದಲ್ಲಿ ಅಮೆರಿಕದ ಟ್ರೆಷರಿ ಯೀಲ್ಡ್ ಕಡಿಮೆ ಆಗುತ್ತದೆ. ಡಾಲರ್ ಕರೆನ್ಸಿಯನ್ನೂ ದುರ್ಬಲಗೊಳಿಸಬಹುದು. ತಜ್ಞರ ಪ್ರಕಾರ ಇದು ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್