ನ್ಯಾಷನಲ್ ಸೇವಿಂಗ್ಸ್ ಸ್ಕೀಮ್, ಅಕ್ಟೋಬರ್ 1ರಿಂದ ಬದಲಾಗಲಿವೆ ಈ ನಿಯಮಗಳು, ಗಮನಿಸಿ
Irregular NSS-87 accounts rules change: 1987ರ ಎನ್ಎಸ್ಎಸ್ ಸ್ಕೀಮ್ ಅಡಿಯಲ್ಲಿ ಒಂದಕ್ಕಿಂತ ಹೆಚ್ಚು ಅಕೌಂಟ್ಗಳನ್ನು ಹೊಂದಿರುವವರು ಗಮನಿಸಬೇಕು. ಒಂದಕ್ಕಿಂತ ಹೆಚ್ಚು ಅಕೌಂಟ್ ಇದ್ದರೆ ಮೊದಲ ಅಕೌಂಟ್ಗೆ ಪ್ರಸಕ್ತ ದರಗಳು ಅನ್ವಯ ಆಗುತ್ತವೆ. ಎರಡನೇ ಅಕೌಂಟ್ಗೆ ಸೇವಿಂಗ್ಸ್ ಅಕೌಂಟ್ ದರ ಮಾತ್ರವೇ ಸಿಗುತ್ತದೆ. ಅಕ್ಟೋಬರ್ 1ರಿಂದ ನಿಯಮ ಜಾರಿಗೆ ಬರಲಿದೆ.
ನವದೆಹಲಿ, ಸೆಪ್ಟೆಂಬರ್ 11: ಹಣಕಾಸು ಸಚಿವಾಲಯ ಸಣ್ಣ ಉಳಿತಾಯ ಯೋಜನೆಗಳ ನಿಯಮಗಳನ್ನು ಸರಳಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಅನಿಯಮಿತವಾಗಿರುವ ಎನ್ಎಸ್ಎಸ್, ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ ನಿಯಮ ಸರಿಪಡಿಸಲಾಗುತ್ತಿದೆ. 2024ರ ಅಕ್ಟೋಬರ್ 1ರಿಂದ ಇವು ಜಾರಿಗೆ ಬರಲಿವೆ. ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಯಾವುದೆಲ್ಲಾ ನಿಯಮಗಳ ಬದಲಾವಣೆ ಆಗಲಿದೆ ಎಂಬುದನ್ನು ತಿಳಿಸುವ ಲಿಂಕ್ಗಳನ್ನು ಈ ಲೇಖನದ ಕೆಳಗಿನ ಸಾಲುಗಳ ಮಧ್ಯೆ ನೀಡಲಾಗಿದೆ, ಗಮನಿಸಿ. ಈ ಲೇಖನದಲ್ಲಿ ಎನ್ಎಸ್ಎಸ್ 87 ಅಕೌಂಟ್ಗಳ ವಿಚಾರದಲ್ಲಿ ಸರ್ಕಾರ ತರಲಿರುವ ಬದಲಾವಣೆ ಬಗ್ಗೆ ಮಾಹಿತಿ ಇದೆ.
ಮೊದಲಿಗೆ, ಎನ್ಎಸ್ಎಸ್ ಎಂಬುದು ನ್ಯಾಷನಲ್ ಸೇವಿಂಗ್ಸ್ ಸ್ಕೀಮ್. ಅಂಚೆ ಕಚೇರಿಯಲ್ಲಿ ಮಾಡಿಸಬಹುದಾದ ಸಣ್ಣ ಉಳಿತಾಯ ಯೋಜನೆಗಳು. ಮಾಸಿಕ ಆದಾಯ ಯೋಜನೆ, ಟೈಮ್ ಡೆಪಾಸಿಟ್, ರೆಕರಿಂಗ್ ಡೆಪಾಸಿಟ್, ರಾಷ್ಟ್ರೀಯ ಉಳಿತಾಯ ಪತ್ರ (ಎನ್ಎಸ್ಸಿ), ಕಿಸಾನ್ ವಿಕಾಸ್ ಪತ್ರ ಇತ್ಯಾದಿ ವಿವಿಧ ಸ್ಕೀಮ್ಗಳು ಒಳಗೊಳ್ಳುತ್ತವೆ.
ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆ: ಅ. 1ರಿಂದ ಬದಲಾಗಲಿವೆ 2 ನಿಯಮಗಳು, ಗಮನಿಸಿ
ಒಂದಕ್ಕಿಂತ ಹೆಚ್ಚು ಎನ್ಎಸ್ಎಸ್ ಅಕೌಂಟ್ಗಳು ತೆರೆಯುವಂತಿಲ್ಲ. ಉದಾಹರಣೆಗೆ, ನೀವು ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ನಲ್ಲಿ ಹೂಡಿಕೆ ಮಾಡಿದ್ದರೆ ಒಬ್ಬ ವ್ಯಕ್ತಿ ಒಂದು ಎನ್ಎಸ್ಸಿ ಖಾತೆ ಮಾತ್ರವೇ ತೆರೆಯಬಹುದು. 1987ರ ಎನ್ಎಸ್ಎಸ್ ಯೋಜನೆ ಅಡಿಯಲ್ಲಿ ಎರಡು ಅಕೌಂಟ್ ತೆರೆದಿದ್ದರೆ ಈಗ ಒಂದನ್ನು ಮಾತ್ರವೇ ಉಳಿಸಿಕೊಳ್ಳಲಾಗುತ್ತದೆ. ಎರಡನೆಯ ಅಕೌಂಟ್ ಏನಾಗುತ್ತದೆ?
1990ರಲ್ಲಿ ಒಂದಕ್ಕಿಂತ ಹೆಚ್ಚು ಎನ್ಎಸ್ಎಸ್ ಖಾತೆ ಹೊಂದುವಂತಿಲ್ಲ ಎಂದು ಡಿಜಿ ವತಿಯಿಂದ ಆರ್ಡರ್ ಮಾಡಲಾಗಿತ್ತು. ಅದಕ್ಕಿಂತ ಮುನ್ನ ಒಂದಕ್ಕಿಂತ ಹೆಚ್ಚು ಎನ್ಎಸ್ಎಸ್ ಖಾತೆ ಆರಂಭಿಸಿದ್ದರೆ ಏನಾಗುತ್ತದೆ ಎನ್ನುವ ವಿವರ ಇಲ್ಲಿದೆ:
- ಒಂದಕ್ಕಿಂತ ಹೆಚ್ಚು ಎನ್ಎಸ್ಎಸ್-87 ಅಕೌಂಟ್ಗಳಿದ್ದರೆ ಮೊದಲು ಆರಂಭಿಸಿದ ಅಕೌಂಟ್ಗೆ ಈಗಿರುವ ಲಾಭ ನೀಡಲಾಗುತ್ತದೆ.
- ಎರಡನೇ ಖಾತೆಗೆ ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ನ ಬಡ್ಡಿದರ ಸಿಗುತ್ತದೆ. ಇದರ ಜೊತೆಗೆ ಬಾಕಿ ಮೊತ್ತಕ್ಕೆ 200 ಬಿಪಿಎಸ್ (ಶೇ. 2) ಬಡ್ಡಿ ಸಿಗುತ್ತದೆ.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಎರಡು ಎನ್ಎಸ್ಎಸ್ ಅಕೌಂಟ್ಗಳಲ್ಲಿ ಇರುವ ಹಣವು ಸ್ಕೀಮ್ನ ಹೂಡಿಕೆ ಮಿತಿಯೊಳಗೆ ಇರಬೇಕು. ಮಿತಿಗಿಂತ ಹೆಚ್ಚು ಹಣ ಇದ್ದರೆ ಅದಕ್ಕೆ ಯಾವುದೇ ಬಡ್ಡಿ ಸಿಗುವುದಿಲ್ಲ. ಅದನ್ನು ಹೂಡಿಕೆದಾರರಿಗೆ ಮರಳಿಸಲಾಗುತ್ತದೆ.
ಇದನ್ನೂ ಓದಿ: ತಪ್ಪದೇ ಗಮನಿಸಿ; ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರುವುದೂ ಸೇರಿ ಪಿಪಿಎಫ್ ಯೋಜನೆಯ 3 ನಿಯಮಗಳಲ್ಲಿ ಮಾರ್ಪಾಡು; ಅ. 1ರಿಂದ ಜಾರಿ
ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಅಕ್ಟೋಬರ್ 1ರಿಂದ ಈ ಎನ್ಎಸ್ಎಸ್-87 ಅಕೌಂಟ್ಗಳಿಗೆ ಯಾವ ಬಡ್ಡಿ ಸಿಗುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ