Gold Silver Price on 2nd September: ಇಂದು ಸೋಮವಾರವೂ ತಗ್ಗಿದ ಚಿನ್ನ, ಬೆಳ್ಳಿ ಬೆಲೆ; ಇಲ್ಲಿದೆ ದರಪಟ್ಟಿ

Bullion Market 2024 September 2nd: ಭಾರತದಲ್ಲಿ ಇಂದು ಸೋಮವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಕಡಿಮೆಗೊಂಡಿದೆ. ಆಭರಣ ಚಿನ್ನ ಗ್ರಾಮ್​ಗೆ 25 ರೂನಷ್ಟು ಕಡಿಮೆ ಆಗಿದೆ. ಅಪರಂಜಿ ಚಿನ್ನ 27 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆ 1 ರೂನಷ್ಟು ತಗ್ಗಿದೆ.

Gold Silver Price on 2nd September: ಇಂದು ಸೋಮವಾರವೂ ತಗ್ಗಿದ ಚಿನ್ನ, ಬೆಳ್ಳಿ ಬೆಲೆ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Sep 02, 2024 | 10:09 AM

ಬೆಂಗಳೂರು, ಸೆಪ್ಟಂಬರ್ 2: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಸತತ ಇಳಿಕೆ ಮುಂದುವರಿದಿದೆ. ಶುಕ್ರವಾರದಿಂದಲೂ ಬೆಲೆ ಇಳಿಮುಖ ಹಾದಿಯಲ್ಲಿದೆ. ನಿನ್ನೆ ಮತ್ತು ಮೊನ್ನೆ ಗ್ರಾಮ್​ಗೆ 10 ರೂನಷ್ಟು ಇಳಿದಿದ್ದ ಚಿನ್ನದ ಬೆಲೆ ಇಂದು ಬರೋಬ್ಬರಿ 25 ರೂನಷ್ಟು ಕಡಿಮೆ ಆಗಿದೆ. ಅಪರಂಜಿ ಚಿನ್ನ 27 ರೂನಷ್ಟು ಅಗ್ಗವಾಗಿದೆ. ಭಾರತದಲ್ಲಿ ಹೆಚ್ಚಿನ ಇಳಿಕೆ ಆಗಿದೆ. ವಿದೇಶಗಳಲ್ಲಿ ಬಹುತೇಕ ಯಥಾಸ್ಥಿತಿ ಇದೆ. ಬೆಳ್ಳಿ ಬೆಲೆ ಇಂದು ಸೋಮವಾರ ಗ್ರಾಮ್​ಗೆ ಒಂದು ರೂನಷ್ಟು ಕಡಿಮೆ ಆಗಿದೆ. 87 ರೂ ಇದ್ದದ್ದು 86 ರೂಗೆ ಇಳಿದಿದೆ. ಬೆಂಗಳೂರಿನಲ್ಲಿ 85 ರೂ ದರವೇ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,770 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,600 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 66,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,500 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಸೆಪ್ಟೆಂಬರ್ 2ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,700 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,770 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 860 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,700 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,770 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 850 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 66,700 ರೂ
  • ಚೆನ್ನೈ: 66,700 ರೂ
  • ಮುಂಬೈ: 66,700 ರೂ
  • ದೆಹಲಿ: 66,850 ರೂ
  • ಕೋಲ್ಕತಾ: 66,700 ರೂ
  • ಕೇರಳ: 66,700 ರೂ
  • ಅಹ್ಮದಾಬಾದ್: 66,750 ರೂ
  • ಜೈಪುರ್: 66,850 ರೂ
  • ಲಕ್ನೋ: 66,850 ರೂ
  • ಭುವನೇಶ್ವರ್: 66,700 ರೂ

ಇದನ್ನೂ ಓದಿ: ಇವತ್ತಿನ ಒಂದು ಕೋಟಿ ರೂ ಹಣದ ನಿಜ ಮೌಲ್ಯ 30 ವರ್ಷದ ಬಳಿಕ ಎಷ್ಟಾಗಬಹುದು? ಭವಿಷ್ಯದ ಭದ್ರತೆಗೆ ಇದು ಬಹಳ ಮುಖ್ಯ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,450 ರಿಂಗಿಟ್ (66,990 ರುಪಾಯಿ)
  • ದುಬೈ: 2,807.50 ಡಿರಾಮ್ (64,090 ರುಪಾಯಿ)
  • ಅಮೆರಿಕ: 765 ಡಾಲರ್ (64,180 ರುಪಾಯಿ)
  • ಸಿಂಗಾಪುರ: 1,026 ಸಿಂಗಾಪುರ್ ಡಾಲರ್ (65,870 ರುಪಾಯಿ)
  • ಕತಾರ್: 2,850 ಕತಾರಿ ರಿಯಾಲ್ (65,590 ರೂ)
  • ಸೌದಿ ಅರೇಬಿಯಾ: 2,870 ಸೌದಿ ರಿಯಾಲ್ (64,150 ರುಪಾಯಿ)
  • ಓಮನ್: 299.50 ಒಮಾನಿ ರಿಯಾಲ್ (65,260 ರುಪಾಯಿ)
  • ಕುವೇತ್: 227.50 ಕುವೇತಿ ದಿನಾರ್ (62,500 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,500 ರೂ
  • ಚೆನ್ನೈ: 9,100 ರೂ
  • ಮುಂಬೈ: 8,600 ರೂ
  • ದೆಹಲಿ: 8,600 ರೂ
  • ಕೋಲ್ಕತಾ: 8,600 ರೂ
  • ಕೇರಳ: 9,100 ರೂ
  • ಅಹ್ಮದಾಬಾದ್: 8,600 ರೂ
  • ಜೈಪುರ್: 8,600 ರೂ
  • ಲಕ್ನೋ: 8,600 ರೂ
  • ಭುವನೇಶ್ವರ್: 9,100 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us