ಇವತ್ತಿನ ಒಂದು ಕೋಟಿ ರೂ ಹಣದ ನಿಜ ಮೌಲ್ಯ 30 ವರ್ಷದ ಬಳಿಕ ಎಷ್ಟಾಗಬಹುದು? ಭವಿಷ್ಯದ ಭದ್ರತೆಗೆ ಇದು ಬಹಳ ಮುಖ್ಯ

Value of money changes over time: ಇವತ್ತಿನ ಒಂದು ರುಪಾಯಿಗೆ ಹೋಲಿಸಿದರೆ, ದಶಕಗಳ ಹಿಂದೆ ಒಂದು ರುಪಾಯಿಯಿಂದ ಬಹಳಷ್ಟು ಖರೀದಿ ಮಾಡಬಹುದಿತ್ತು. ಹಣದ ಮೌಲ್ಯ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿರುತ್ತದೆ. ಅದು ಹಣದುಬ್ಬರ ಅಥವಾ ಬೆಲೆ ಏರಿಕೆ ಪರಿಣಾಮ. ಇದನ್ನು ಗಣನೆಗೆ ತೆಗೆದುಕೊಂಡು ಭವಿಷ್ಯಕ್ಕೆ ಹಣ ಕೂಡಿಡುವ ಕೆಲಸ ಮಾಡಬೇಕಾಗುತ್ತದೆ.

ಇವತ್ತಿನ ಒಂದು ಕೋಟಿ ರೂ ಹಣದ ನಿಜ ಮೌಲ್ಯ 30 ವರ್ಷದ ಬಳಿಕ ಎಷ್ಟಾಗಬಹುದು? ಭವಿಷ್ಯದ ಭದ್ರತೆಗೆ ಇದು ಬಹಳ ಮುಖ್ಯ
ಹಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 01, 2024 | 2:22 PM

ಇವತ್ತು ಯಾರಾದರೂ ನಿವೃತ್ತರಾಗುತ್ತಿದ್ದರೆ ಅವರ ಬಳಿ 1-2 ಕೋಟಿ ರೂ ಉಳಿತಾಯ ಹಣ ಇದ್ದರೆ ಸಾಕಾಗಬಹುದು ಅನಿಸುತ್ತದೆ. ಇದು ಇವತ್ತಿನ ಕಾಲದ ಖರ್ಚು ವೆಚ್ಚ, ಬೆಲೆಗಳನ್ನು ಆಧರಿಸಿ ಮಾಡುವ ಅಂದಾಜು. ಮೂವತ್ತು ವರ್ಷದ ಹಿಂದೆ ಯಾರಾದರೂ ಬಳಿ ಒಂದು ಕೋಟಿ ರೂ ಇದ್ದಿದ್ದೇ ಆದಲ್ಲಿ ಆತ ಬಹಳ ಶ್ರೀಮಂತ ಎನಿಸುತ್ತಿದ್ದ. ಈಗ ಅದು ಸಾಮಾನ್ಯ ಮೊತ್ತದ ಹಣ. ನೀವು ಮುಂದಿನ 30 ವರ್ಷದಲ್ಲಿ ಈ ಒಂದು ಕೋಟಿ ರೂ ಹಣದ ಮೌಲ್ಯ ಎಷ್ಟಾಗಬಹುದು ಆಲೋಚಿಸಿ. ನೀವು ಭವಿಷ್ಯದ ಭದ್ರತೆಗೆ ಹಣ ಕೂಡಿಡುತ್ತಿದ್ದರೆ ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ.

ಹಣದ ಮೌಲ್ಯ ಯಾಕೆ ಕುಸಿಯುತ್ತದೆ?

ಒಂದು ಕೋಟಿ ರೂ ಕರೆನ್ಸಿ ಬೆಲೆ ಯಾವಾಗಲೂ ಒಂದು ಕೋಟಿ ರೂಪಾಯಿಯೇ ಆಗಿರುತ್ತದೆ. ಆದರೆ, ಆ ಹಣದಿಂದ ನಾವು ಪಡೆಯಬಹುದಾದ ವಸ್ತುಗಳ ಬೆಲೆಯಲ್ಲಿ ಬದಲಾವಣೆ ಆಗುತ್ತಿರುತ್ತದೆ. ವಸ್ತುಗಳ ಬೆಲೆ ಹೆಚ್ಚಳ ಆದರೆ ಹಣದುಬ್ಬರ ಎನಿಸುತ್ತದೆ. ಸಾಮಾನ್ಯವಾಗಿ ಹಣದುಬ್ಬರ ಶೇ. 4ರಿಂದ 9ರವರೆಗೆ ಇರುತ್ತದೆ. ಅಂದರೆ, ಪ್ರಮುಖ ವಸ್ತುಗಳ ಬೆಲೆಗಳು ವರ್ಷದಲ್ಲಿ ಸರಾಸರಿಯಾಗಿ ಶೇ. 6ರಷ್ಟು ಹೆಚ್ಚಾಗುತ್ತಾ ಹೋಗಬಹುದು. ಇವತ್ತು ನೂರು ರುಪಾಯಿ ಇದ್ದ ಬೆಲೆ ಒಂದು ವರ್ಷದ ಬಳಿಕ 106 ರೂ ಆಗುತ್ತದೆ. ಅಂದರೆ ನೂರು ರುಪಾಯಿಗೆ ಸಿಗುತ್ತಿದ್ದ ವಸ್ತುವನ್ನು ಒಂದು ವರ್ಷದ ಬಳಿಕ ಪಡೆಯಲು 106 ರೂ ವ್ಯಯಿಸಬೇಕಾಗುತ್ತದೆ. ಹೀಗಾಗಿ, ಹಣದ ರಿಯಲ್ ವ್ಯಾಲ್ಯೂ ಕಡಿಮೆ ಆಗುತ್ತಾ ಹೋಗುತ್ತಿರುತ್ತದೆ.

ಇದನ್ನೂ ಓದಿ: 3 ಕೋಟಿ ರೂ ಇದೆ, ಎಲ್ಲಿ ಹೂಡಿಕೆ ಮಾಡಬೇಕು? ರ‍್ಯಾಪರ್ ಬಾದ್​ಶಾಗೆ ನಿಖಿಲ್ ಕಾಮತ್ ನೀಡಿದ ಸಲಹೆ ಇದು…

ಈ ಅಂಶವನ್ನು ಪರಿಗಣಿಸಿ ನೀವು ರಿಟೈರ್ಮೆಂಟ್ ಪ್ಲಾನಿಂಗ್ ಮಾಡಬೇಕಾಗುತ್ತದೆ. ಅಥವಾ ಮಕ್ಕಳ ಓದಿಗೆ ಹಣ ಎಷ್ಟು ಬೇಕಾಗಬಹುದು ಎಂದು ಲೆಕ್ಕಾಚಾರ ಹಾಕಬೇಕಾಗುತ್ತದೆ. ಇಲ್ಲಿ ಶಿಕ್ಷಣ ಕ್ಷೇತ್ರದ ಹಣದುಬ್ಬರ ಬೇರೆ ಪ್ರಮಾಣದಲ್ಲಿ ಇರಬಹುದು. ದಿನಸಿ ವಸ್ತುಗಳ ಹಣದುಬ್ಬರ ಬೇರೆ ಇರಬಹುದು. ಗೃಹ ನಿರ್ಮಾಣ ಅಥವಾ ರಿಯಲ್ ಎಸ್ಟೇಟ್ ಹಣದುಬ್ಬರ ಬೇರೆ ಇರಬಹುದು. ಹೀಗಾಗಿ, ಒಬ್ಬೊಬ್ಬರ ಅಗತ್ಯತೆ ಮತ್ತು ಆದ್ಯತೆಗಳಗೆ ತಕ್ಕಂತೆ ಹಣದುಬ್ಬರ ಪರಿಗಣಿಸಬೇಕಾಗುತ್ತದೆ.

ಮೂವತ್ತು ವರ್ಷದ ಹಿಂದೆ ಒಂದು ಪ್ರತಿಷ್ಠಿತ ಶಾಲೆಯಲ್ಲಿ ಒಂದು ವರ್ಷದ ವಿದ್ಯಾಭ್ಯಾಸಕ್ಕೆ 10,000 ರೂ ಆದರೆ ಸಾಕಾಗುತ್ತಿತ್ತು. ಈಗ 3 ಲಕ್ಷ ರೂ ಬೇಕಾಗುತ್ತದೆ. ಅಂದರೆ ವೆಚ್ಚ ಮೂವತ್ತು ಪಟ್ಟು ಬೆಳೆದಿದೆ. ನೀವು ಈಗ ಮದುವೆಯಾಗಿದ್ದು ನಿಮ್ಮ ಮಗು ಶಾಲೆಗೆ ಹೋಗತೊಡಗಿದಾಗ ಫೀಸ್ ಪ್ರಮಾಣ ಬೇರೆ ಲೆವೆಲ್​ಗೆ ಹೋಗಬಹುದು.

ನೀವು ನಿವೃತ್ತರಾದ ಬಳಿಕ ನಿಮ್ಮ ಅಗತ್ಯಗಳನ್ನಷ್ಟೇ ನೋಡಿಕೊಳ್ಳುವಷ್ಟು ಆದಾಯ ಸಾಕಾಗಬಹುದು. ಸ್ವಂತ ಮನೆ ಇಲ್ಲದಿದ್ದರೆ ಬಾಡಿಗೆ ವೆಚ್ಚ, ಔಷಧ ವೆಚ್ಚ, ದಿನಸಿ ವೆಚ್ಚ, ಇನ್ಷೂರೆನ್ಸ್ ವೆಚ್ಚ, ಹೋಟೆಲ್ ಊಟದ ವೆಚ್ಚ ಇವು ಪ್ರಮುಖವಾಗಿರುತ್ತದೆ. ಇವತ್ತಿನ ದಿನಗಳಂತೆ ಸಿನಿಮಾ ಇತ್ಯಾದಿ ವೆಚ್ಚಗಳು ಇರುವುದಿಲ್ಲ.

ಇದನ್ನೂ ಓದಿ: ಚಿನ್ನ ಖರೀದಿಸುವಾಗ ಜಿಎಸ್​ಟಿ, ಮಾರುವಾಗ ಜಿಎಸ್​ಟಿ ಜೊತೆಗೆ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್; ಹಳದಿ ಲೋಹಕ್ಕೆ ಏನೆಲ್ಲಾ ಇವೆ ತೆರಿಗೆಗಳು ನೋಡಿ…

ಇದೇ ವೇಳೆ, ನೀವು ಇವತ್ತಿನ ಒಂದು ಕೋಟಿ ರೂ ಹಣದ ಮೌಲ್ಯ 30 ವರ್ಷದ ಬಳಿಕ ಎಷ್ಟಾಗುತ್ತದೆ ಎಂದು ನೋಡಬಹುದು. ಶೇ. 6ರ ಹಣದುಬ್ಬರ ಪ್ರಕಾರವಾಗಿ ಲೆಕ್ಕ ಹಾಕಿದರೆ, ಸುಮಾರು ಐದಾರು ಕೋಟಿ ರೂ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ