
ನವದೆಹಲಿ, ಆಗಸ್ಟ್ 25: ಸಾಲು-ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಸಕ್ಕರೆ ಬೆಲೆ ಏರಿಕೆಯಾಗುವುದನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೇಂದ್ರ ವಾಣಿಜ್ಯ ಸಚಿವಾಲಯವು 10 ಲಕ್ಷ ಮೆಟ್ರಿಕ್ ಟನ್ ಕಚ್ಚಾ ಸಕ್ಕರೆಯನ್ನು (Raw Sugar) ಯಾವುದೇ ಆಮದು ಸುಂಕವಿಲ್ಲದೆ (Zero Duty) ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ. ಆಮದು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಗಸ್ಟ್‌ನಿಂದ ಅಕ್ಟೋಬರ್ 31 ರವರೆಗೆ (ಎರಡು ತಿಂಗಳ ಕಾಲಾವಧಿ) ಕಾಲಾವಕಾಶ ನೀಡಲಾಗಿದೆ.
ಭಾರತವು ಸಕ್ಕರೆಯನ್ನು ಆಮದು ಮಾಡಿಕೊಳ್ಳುತ್ತಿರುವುದು ಕಳೆದ ಸುಮಾರು 10 ವರ್ಷಗಳಲ್ಲಿ (2016-17ರ ನಂತರ) ಇದೇ ಮೊದಲ ಬಾರಿಯಾಗಿದೆ. ಕಚ್ಚಾ ಸಕ್ಕರೆ ಆಮದು ಮಾಡಿಕೊಳ್ಳುವ ಸರ್ಕಾರದ ಈ ನಿರ್ಧಾರಕ್ಕೆ ಪ್ರಮುಖ ಕಾರಣಗಳಿವೆ. ಅವುಗಳು ಈ ಕೆಳಕಂಡಂತಿವೆ:
ಇದನ್ನೂ ಓದಿ: ಭಾರತದಿಂದ ಇನ್ನೂ 8-9 ವ್ಯಾಪಾರ ಒಪ್ಪಂದಗಳಿಗೆ ಮಾತುಕತೆ ಚಾಲನೆಯಲ್ಲಿ: ಪಿಯೂಷ್ ಗೋಯಲ್
ಆಮದು ಅನುಮತಿಯ ಜೊತೆಗೆ, ಸಕ್ಕರೆ ಕಾಳಸಂತೆ ಮತ್ತು ಕೃತಕ ಅಭಾವ ತಡೆಯಲು ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ವ್ಯಾಪಾರಿಗಳು ಗರಿಷ್ಠ 400 ಟನ್‌ಗಳಿಗಿಂತ ಹೆಚ್ಚು ಸಕ್ಕರೆ ದಾಸ್ತಾನು ಇಟ್ಟುಕೊಳ್ಳುವಂತಿಲ್ಲ.
ತಿಂಗಳಿಗೆ 10 ಟನ್‌ಗಿಂತ ಹೆಚ್ಚು ಸಕ್ಕರೆ ಬಳಸುವ ದೊಡ್ಡ ಬಳಕೆದಾರರು (Bulk Consumers) 15 ದಿನಗಳ ಬಳಕೆಗೆ ಬೇಕಾಗುವಷ್ಟು ಪ್ರಮಾಣಕ್ಕಿಂತ ಹೆಚ್ಚಿನ ದಾಸ್ತಾನು ಹೊಂದುವಂತಿಲ್ಲ. ಸೆಪ್ಟೆಂಬರ್ 1 ರಿಂದ ಇದು ಜಾರಿಗೆ ಬರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ