
ನವದೆಹಲಿ, ಫೆಬ್ರುವರಿ 1: ಭಾರತದ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ (GST collections) ಜನವರಿಯಲ್ಲಿ 1,93,384 ಕೋಟಿ ರೂ ಆಗಿದೆ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಜಿಎಸ್ಟಿ ಸಂಗ್ರಹದಲ್ಲಿ ಶೇ. 6.2ರಷ್ಟು ಹೆಚ್ಚಿದೆ. 2025ರ ಜನವರಿಯಲ್ಲಿ ಜಿಎಸ್ಟಿ ಸಂಗ್ರಹ 1,82,094 ಕೋಟಿ ರೂ ಇತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ, ಅಂದರೆ 2025ರ ಏಪ್ರಿಲ್ನಿಂದ 2026ರ ಜನವರಿವರೆಗೆ 10 ತಿಂಗಳಲ್ಲಿ ಸಂಗ್ರಹವಾದ ಒಟ್ಟು ಜಿಎಸ್ಟಿ 18,43,423 ಕೋಟಿ ರೂ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 8.3ರಷ್ಟು ಸಂಗ್ರಹ ಹೆಚ್ಚಳ ಆಗಿದೆ.
2026ರ ಜನವರಿಯಲ್ಲಿ ಒಟ್ಟು ಸಂಗ್ರಹ 1,93,384 ಕೋಟಿ ರೂ ಇದ್ದರೆ, ನಿವ್ವಳ ಜಿಎಸ್ಟಿ ಆದಾಯ 1,70,719 ಕೋಟಿ ರೂ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ನಿವ್ವಳ ಜಿಎಸ್ಟಿ ಸಂಗ್ರಹದಲ್ಲಿ ಶೇ. 7.6ರಷ್ಟು ಹೆಚ್ಚಾಗಿದೆ. ಈ ಹಣಕಾಸು ವರ್ಷದ 10 ತಿಂಗಳಲ್ಲಿ ನಿವ್ವಳ ಜಿಎಸ್ಟಿ 15,95,752 ಕೋಟಿ ರೂ ಸಂಗ್ರಹ ಆಗಿದೆ.
ಇದನ್ನೂ ಓದಿ: Union Budget 2026-27: ಯಾವ ಇಲಾಖೆಗೆ ಎಷ್ಟು ಅನುದಾನ? ಇಲ್ಲಿದೆ ಡಿಟೇಲ್ಸ್
ಜಿಎಸ್ಟಿ ರೀಫಂಡ್ಗಳಲ್ಲಿ ಶೇ 3.1ರಷ್ಟು ಇಳಿಕೆ ಆಗಿದೆ. ಜನವರಿಯಲ್ಲಿ 22,665 ಕೋಟಿ ರೂ ಮೊತ್ತದಷ್ಟು ರೀಫಂಡ್ಗಳಾಗಿವೆ. ದೇಶೀಯ ರೀಫಂಡ್ಗಳು 13,119 ಕೋಟಿ ರೂ ಇದ್ದು, ಶೇ. 7.1ರಷ್ಟು ಇಳಿಕೆಯಾಗಿದೆ. ರಫ್ತು ರೀಫಂಡ್ಗಳು 9,546 ಕೋಟಿ ರೂನಷ್ಟು ಇದ್ದು, ಇದರಲ್ಲಿ ಶೇ. 2.9ರಷ್ಟು ಏರಿಕೆ ಆಗಿದೆ.
ದೇಶೀಯ ಜಿಎಸ್ಟಿ ಸಂಗ್ರಹ 1,41,132 ಕೋಟಿ ರೂ ಇದೆ. ಆಮದು ಜಿಎಸ್ಟಿ ಸಂಗ್ರಹ ಶೇ. 10.1ರಷ್ಟು ಹೆಚ್ಚಳ ಆಗಿ 52,253 ಕೋಟಿ ರೂ ಇದೆ.
ಇದನ್ನೂ ಓದಿ: ಬಜೆಟ್ 2026 ಪ್ರಕಟಣೆ; ಬಾಂಗ್ಲಾದೇಶದಿಂದ ಹಿಡಿದು ಮಾರಿಷಸ್ವರೆಗೆ ವಿವಿಧ ದೇಶಗಳಿಗೆ ಭಾರತ ಮಾಡುವ ಧನಸಹಾಯವೆಷ್ಟು?
ಹರ್ಯಾಣ, ಮಹಾರಾಷ್ಟ್ರ, ಗುಜರಾತ್, ಹಿಮಾಚಲಪ್ರದೇಶ ಮತ್ತು ಪಂಜಾಬ್ ರಾಜ್ಯಗಳು ಶೇ 10ಕ್ಕಿಂತ ಹೆಚ್ಚು ಸೆಟಲ್ಮೆಂಟ್ ನಂತರದ ಜಿಎಸ್ಟಿ ಆದಾಯ ಗಳಿಸಿವೆ. ಕರ್ನಾಟಕ, ತಮಿಳುನಾಡು ರಾಜ್ಯಗಳೂ ಕೂಡ ಉತ್ತಮ ಆದಾಯ ಏರಿಕೆ ಕಂಡಿವೆ. ಮಧ್ಯಪ್ರದೇಶ, ಜಾರ್ಖಂಡ್, ಒಡಿಶಾ, ಛತ್ತೀಸ್ಗಡ್, ಲಡಾಖ್, ಲಕ್ಷದ್ವೀಪ್ ರಾಜ್ಯಗಳಲ್ಲಿ ಜಿಎಸ್ಟಿ ಆದಾಯದಲ್ಲಿ ಇಳಿಕೆ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ