
ನವದೆಹಲಿ, ಅಕ್ಟೋಬರ್ 6: ಹೆಲ್ತ್ ಇನ್ಷೂರೆನ್ಸ್ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಯೊಂದು ಆಗುವ ಸಾಧ್ಯತೆ ಇದೆ. ಪಾಲಿಸಿದಾರರು ಶೇ. 10ರಷ್ಟು ಸಹಪಾವತಿ (ಕೋ ಪೇಮೆಂಟ್) ಮಾಡುವ ನಿಯಮವನ್ನು ತರಬೇಕೆಂಬ ವಿಮಾ ಸಂಸ್ಥೆಗಳ ಪ್ರಸ್ತಾಪವನ್ನು ‘ಜನರಲ್ ಇನ್ಶೂರೆನ್ಸ್ ಕೌನ್ಸಿಲ್’ (General Insurance Council) ಪರಿಗಣಿಸುತ್ತಿದೆ ಎನ್ನುವ ಸುದ್ದಿ ಇದೆ. ಇದೇನಾದರೂ ನಿಜವಾದಲ್ಲಿ ಮುಂದಿನ ವರ್ಷದಿಂದ, ಅಂದರೆ, 2027ರ ಜನವರಿ 1ರಿಂದ ಹೆಲ್ತ್ ಇನ್ಷೂರೆನ್ಸ್ ಕ್ಲೈಮ್ನಲ್ಲಿ ಶೇ. 10 ಕೋ ಪೇಮೆಂಟ್ ನಿಯಮ ಜಾರಿಗೆ ಬರಲಿದೆ.
ಈ ಒಂದು ಕೋ-ಪೇಮೆಂಟ್ ನಿಯಮದಿಂದ ಇನ್ಷೂರೆನ್ಸ್ ಕಂಪನಿಗಳಿಗೆ ತುಸು ಹೊರೆ ಕಡಿಮೆ ಆಗಲಿದೆ. ಹಾಗೆಯೇ, ಪಾಲಿಸಿದಾರರಿಗೆ ಪ್ರೀಮಿಯಮ್ ಹೊರೆಯೂ ಕಡಿಮೆ ಆಗಲಿದೆ.
ಇದನ್ನೂ ಓದಿ: ಉಳಿತಾಯ ಖಾತೆಯಲ್ಲಿ ಠೇವಣಿ ಮಿತಿ ಎಷ್ಟು? ಆದಾಯ ತೆರಿಗೆ ಇಲಾಖೆ ನಿಯಮದಲ್ಲಿ ಏನಿದೆ?
ಆಸ್ಪತ್ರೆಗೆ ದಾಖಲಾಗಿ ಆಗುವ ವೆಚ್ಚದಲ್ಲಿ ಇನ್ಷೂರೆನ್ಸ್ ಕಂಪನಿಗಳು ಅನುಮೋದಿಸುವ ಅಂತಿಮ ಅರ್ಹ ಕ್ಲೈಮ್ ಮೊತ್ತದಲ್ಲಿ (Admissible Claim) ಪಾಲಿಸಿದಾರರು ಶೇ. 10ರಷ್ಟು ಹಣ ಪಾವತಿಸಬೇಕು. ಇನ್ಷೂರೆನ್ಸ್ ಕಂಪನಿ ಶೇ. 90ರಷ್ಟು ಕ್ಲೈಮ್ ಹಣ ಪಾವತಿಸಬೇಕು. ಈ ನಿಯಮವು ಕ್ಯಾಷ್ಲೆಸ್ ಮತ್ತು ರೀಇಂಬುರ್ಸ್ಮೆಂಟ್ ಎರಡಕ್ಕೂ ಅನ್ವಯ ಆಗುತ್ತದೆ.
ಇಲ್ಲಿ ಪಾಲಿಸಿದಾರ ಶೇ 10ರಷ್ಟು ಕ್ಲೈಮ್ ಹಣ ಪಾವತಿಸಬೇಕೆಂದಿದ್ದರೂ ಅದರ ಗರಿಷ್ಠ ಮಿತಿ 5 ಲಕ್ಷ ರೂ ಇರಬೇಕು ಎಂದು ಪ್ರಸ್ತಾಪಿತ ನಿಯಮದಲ್ಲಿ ಹೇಳಲಾಗಿದೆ. ಉದಾಹರಣೆಗೆ, 60 ಲಕ್ಷ ರೂ ಅನುಮೋದಿತ ಕ್ಲೈಮ್ ಮೊತ್ತ ಇದ್ದಾಗ ಶೇ. 10 ಎಂದರೆ 6 ಲಕ್ಷ ರೂ ಅನ್ನು ಪಾಲಿಸಿದಾರ ಪಾವತಿಸಬೇಕಾಗುವುದಿಲ್ಲ. 5 ಲಕ್ಷ ರೂಗಿಂತ ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗುವುದಿಲ್ಲ.
ಕಡ್ಡಾಯ ಕೋ-ಪೇಮೆಂಟ್ ನಿಯಮ ಜಾರಿಗೆ ತರುವುದರಿಂದ ವಿಮಾ ಕಂಪನಿಗಳಿಗೆ ಒಂದಷ್ಟು ಹೊರೆ ತಗ್ಗುತ್ತದೆ. ಆಸ್ಪತ್ರೆಗಳಲ್ಲಿ ಅನಗತ್ಯ ಸ್ಕ್ಯಾನಿಂಗ್ ಇತ್ಯಾದಿ ಕಾರ್ಯಗಳಿಗೆ ವೆಚ್ಚವನ್ನು ಪಾಲಿಸಿದಾರರು ಕಡಿಮೆಗೊಳಿಸಬಹುದು ಎನ್ನುವ ನಂಬಿಕೆ ವಿಮಾ ಕಂಪನಿಗಳದ್ದು. ಇದಕ್ಕೆ ಪ್ರತಿಯಾಗಿ ಗ್ರಾಹಕರಿಗೆ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯ ವಾರ್ಷಿಕ ಪ್ರೀಮಿಯಮ್ ದರದಲ್ಲಿ ಕಡಿತಗೊಳಿಸಲು ಮುಂದಾಗಬಹುದು.
ಇದನ್ನೂ ಓದಿ: ಸಣ್ಣ ಉದ್ದಿಮೆಗಳಿಗೆ ಸಿಗಲಿದೆ ದೊಡ್ಡ ಪುಷ್ಟಿ; ಸರ್ಕಾರದಿಂದ 10,000 ಕೋಟಿ ರೂ ‘ಎಸ್ಎಂಇ ಗ್ರೋತ್ ಫಂಡ್’ ಸ್ಥಾಪನೆಗೆ ನಿರ್ಧಾರ
ಇದು ಪ್ರಸ್ತುತ ಪರಿಶೀಲನಾ ಹಂತದಲ್ಲಿದ್ದು, ವಿಮಾ ನಿಯಂತ್ರಣ ಪ್ರಾಧಿಕಾರವಾದ ಐಆರ್‌ಡಿಎಐ (IRDAI) ಅಂತಿಮ ಒಪ್ಪಿಗೆ ನೀಡಿದ ನಂತರ 2027 ರಿಂದ ಅನುಷ್ಠಾನಕ್ಕೆ ಬರಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ