Home Loans: ಗೃಹ ಸಾಲ ಮತ್ತು ಮನೆ ನವೀಕರಣ ಸಾಲದ ಬಗ್ಗೆ ಉಪಯುಕ್ತ ಮಾಹಿತಿ

| Updated By: Rakesh Nayak Manchi

Updated on: Sep 23, 2022 | 7:30 AM

ನೀವು ಹೊಸ ಮನೆಯನ್ನು ಖರೀದಿಸಲು ಬಯಸಿದರೆ ಗೃಹ ಸಾಲವು ಕಾರ್ಯಸಾಧ್ಯವಾದ ಆಯ್ಕೆಯಾಗಿದೆ. ಅಂತೆಯೇ, ನಿಮ್ಮ ಮನೆಯನ್ನು ನವೀಕರಿಸಲು ನೀವು ಬಯಸಿದರೆ ಮನೆ ಸುಧಾರಣೆ ಸಾಲವು ಉತ್ತಮ ಆಯ್ಕೆಯಾಗಿದೆ.

Home Loans: ಗೃಹ ಸಾಲ ಮತ್ತು ಮನೆ ನವೀಕರಣ ಸಾಲದ ಬಗ್ಗೆ ಉಪಯುಕ್ತ ಮಾಹಿತಿ
ಗೃಹ ಸಾಲ ಮತ್ತು ಗೃಹ ನವೀಕರಣ ಸಾಲ (ಸಾಂದರ್ಭಿಕ ಚಿತ್ರ)
Follow us on

ಸ್ವಂತ ಮನೆ ಹೊಂದುವುದು ಅನೇಕರ ಕನಸಾಗಿದೆ. ಅಂದವಾದ ಮನೆಯು ಹೆಮ್ಮೆಯ ವಿಚಾರವೂ ಹೌದು. ಸ್ಥಳ ಮತ್ತು ಕಟ್ಟಡದ ಗುಣಮಟ್ಟದೊಂದಿಗೆ ಸೌಂದರ್ಯ ಮತ್ತು ಸೌಕರ್ಯವು ಮುಖ್ಯವಾಗಿದೆ. ನಿಮ್ಮ ಮನೆಯ ಸ್ಥಿತಿ ಮತ್ತು ವಾತಾವರಣವು ಅತಿಥಿಗಳು ಅದನ್ನು ಹೇಗೆ ಗ್ರಹಿಸುತ್ತಾರೆ ಎಂಬುದರ ಮೇಲೆ ಪ್ರಭಾವ ಬೀರುತ್ತದೆ. ಇದು ನಿರ್ಣಾಯಕ ಮೊದಲ ಆಕರ್ಷಣೆಯಾಗಿದೆ. ಸದ್ಯ ಯಾರೇ ಆಗಲಿ ಹೊಸ ಮನೆ ಕಟ್ಟುತ್ತಾರೆ ಎಂದರೆ ಅದಕ್ಕೆ ಬ್ಯಾಂಕ್​ಗಳು ಸಾಲವನ್ನು ಕೊಡುತ್ತವೆ. ಅಷ್ಟೇ ಅಲ್ಲ ಮನೆ ನವೀಕರಕ್ಕೂ ಸಾಲ ಕೊಡುತ್ತವೆ ಎಂದು ಹೆಚ್ಚಿನವರಿಗೆ ತಿಳಿದಿದ್ದರೂ ಕೆಲವರಿಗೆ ತಿಳಿದಿಲ್ಲ. ನೀವು ಹೊಸ ಮನೆಯನ್ನು ಖರೀದಿಸಲು ಬಯಸಿದರೆ ಗೃಹ ಸಾಲ (Home Loan)ವು ಕಾರ್ಯಸಾಧ್ಯವಾದ ಆಯ್ಕೆಯಾಗಿದೆ. ಅಂತೆಯೇ, ನಿಮ್ಮ ಮನೆಯನ್ನು ದುರಸ್ತಿ ಮಾಡಲು ನೀವು ಬಯಸಿದರೆ ಮನೆ ನವೀಕರಣ ಸಾಲ (Home Renovation Loan)ವು ಉತ್ತಮ ಆಯ್ಕೆಯಾಗಿದೆ. ಹಾಗಿದ್ದರೆ ಗೃಹ ಸಾಲ ಮತ್ತು ಮನೆ ನವೀಕರಣ ಸಾಲದ ಪ್ರಯೋಜಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಹೋಮ್ ಲೋನ್ ಎಂದರೇನು?

ಗೃಹ ಸಾಲವು ವೈಯಕ್ತಿಕ ಸಾಲವಾಗಿದ್ದು, ಸಾಲಗಾರರು ಮನೆಯನ್ನು ಖರೀದಿಸಲು ಅಥವಾ ಹೊಸ ಮನೆ ಕಟ್ಟಲು ನಿರ್ದಿಷ್ಟ ಮೊತ್ತವನ್ನು ಪಡೆಯಲು ಬಳಸಬಹುದು. ಇದರಲ್ಲಿ ಸಾಲದಾತರು ಸಾಲಗಾರರೊಂದಿಗೆ ಸಾಲದ ಒಪ್ಪಂದ ಮಾಡಿಕೊಳ್ಳುತ್ತಾರೆ. ಇದರಲ್ಲಿ ಸಾಲಗಾರನು ಒಪ್ಪಿದ ಬಡ್ಡಿದರದಲ್ಲಿ ನಿಗದಿ ಮಾಡಿರುವ ಅವಧಿಯಲ್ಲಿ ಮರುಪಾವತಿಸಬೇಕಾಗುತ್ತದೆ. ಗೃಹ ಸಾಲವು ಸುರಕ್ಷಿತ ಸಾಲವಾಗಿದೆ.

ಮನೆ ನವೀಕರಣ ಸಾಲ ಎಂದರೇನು?

ನೀವು ಸಣ್ಣ ಮನೆಯನ್ನು ಹೊಂದಿದ್ದೀರಿ ಎಂದು ಭಾವಿಸಿ. ಈಗ ನಿಮ್ಮ ಮನಸ್ಸಿನಲ್ಲಿ ಸಣ್ಣ ಮನೆಗೆ ಹೆಚ್ಚುವರಿಯಾಗಿ ಕೊಠಡಿಯನ್ನು ಸೇರಿಸಬೇಕು ಅಂತ ಭಾವಿಸಿದರೆ ಅಥವಾ ದುರಸ್ತಿಗೊಳಿಸಬೇಕು ಎಂದು ಯೋಚಿಸಿದರೆ ಅದಕ್ಕೂ ಸಾಲ ಪಡೆಯಬಹುದು. ಮನೆ ನವೀಕರಣ ಸಾಲದ ಮೂಲಕ ನೀವು ನಿಮ್ಮ ಮನೆಯನ್ನು ಮಾರ್ಪಡಿಸಬಹುದು ಅಥವಾ ನವೀಕರಿಸಬಹುದು.

ಗೃಹ ಸಾಲದ ಪ್ರಯೋಜನಗಳು

ನೀವೀಗಾ ಹಣಕಾಸಿನ ಕೊರತೆಯಿಂದ ಮನೆ ಕಟ್ಟಲು ಸಾಧ್ಯವಾಗದೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರೆ ಅಥವಾ ಕಡಿಮೆ ಬಜೆಟ್​ನೊಂದಿಗೆ ಫ್ಲಾಟ್​ನಲ್ಲಿ ನೆಲೆಸುವುದು ಜೇಬಿಗೆ ಹೆಚ್ಚುವರಿ ಹೊರೆಯಾಗುತ್ತದೆ. ಇದು ದುಬಾರಿಯೂ ಹೌದು. ಆದ್ದರಿಂದ, ನಿರ್ದಿಷ್ಟ ಅವಧಿಯ ಗೃಹ ಸಾಲ ಪಡೆದು ಮನೆಯನ್ನು ಹೊಂದುವುದು ಉತ್ತಮವಾಗಿದೆ. ಇದಕ್ಕಾಗಿ ಗೃಹಸಾಲ ಉಪಯುಕ್ತವಾಗಿದೆ.

ಹೆಚ್ಚಿನ ಮರುಪಾವತಿ ಅವಧಿ

ಮರುಪಾವತಿ ಅವಧಿಯನ್ನು ವಿಸ್ತರಿಸುವುದು ದೊಡ್ಡ ಕಂತು ಪಾವತಿಗಳನ್ನು ಮಾಡುವ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಬಡ್ಡಿದರಗಳು ಮತ್ತು ಅಡಮಾನ ನಿಯಮಗಳ ಆಧಾರದ ಮೇಲೆ ತಮ್ಮ ಅಗತ್ಯವಿರುವ ಮಾಸಿಕ ಪಾವತಿಗಳನ್ನು ನಿರ್ಧರಿಸಲು ಸಾಲಗಾರರು EMI ಕ್ಯಾಲ್ಕುಲೇಟರ್ ಅನ್ನು ಬಳಸಬಹುದು.

ಕನಸಿನರಮನೆ ಖರೀದಿಗೆ ಅನುಕೂಲ

ನಿಮ್ಮ ನಿಯಮಿತ ಮಾಸಿಕ ಸಂಬಳದೊಂದಿಗೆ ಮನೆಯನ್ನು ಖರೀದಿಸುವುದು ಕಷ್ಟಕರವೆಂದು ತೋರಬಹುದು. ಹೀಗಿದ್ದಾ ಗೃಹ ಸಾಲಗಳು ನಿಮ್ಮ ಕನಸಿನ ಮನೆಯನ್ನು ಪಡೆಯುವ ಅಥವಾ ಹೊಸ ಮನೆ ನಿರ್ಮಾಣ ಮಾಡಲು ಸುಲಭಗೊಳಿಸುತ್ತದೆ.

ಮನೆ ನವೀಕರಣ ಸಾಲದ ಪ್ರಯೋಜನಗಳು

ಯಾವುದೇ ಮೇಲಾಧಾರವಿಲ್ಲ

ಮನೆ ನವೀಕರಣ ಸಾಲಗಳು ಅಸುರಕ್ಷಿತ ವೈಯಕ್ತಿಕ ಸಾಲದ ಒಂದು ರೂಪವಾಗಿದೆ. ಇದರರ್ಥ ಸಾಲಗಾರನು ಸಾಲದ ಮೊತ್ತದ ವಿರುದ್ಧ ಯಾವುದೇ ಮೇಲಾಧಾರವನ್ನು ಇಟ್ಟುಕೊಳ್ಳಬೇಕಾಗಿಲ್ಲ. ಇದಕ್ಕಾಗಿಯೇ ಇದು ಕಡಿಮೆ ಅಪಾಯದ ವೈಯಕ್ತಿಕ ಸಾಲವಾಗಿದೆ.

ಕೈಗೆಟುಕುವ ಬಡ್ಡಿದರಗಳು

ಆನ್‌ಲೈನ್‌ನಲ್ಲಿ ಸಾಧಾರಣ ಮತ್ತು ದೊಡ್ಡ ರಿಪೇರಿಗೆ ಹಣಕಾಸು ಒದಗಿಸಲು ನೀವು ಉತ್ತಮ ಸಾಲಗಳನ್ನು ಕಾಣಬಹುದು. ಹೆಚ್ಚುವರಿಯಾಗಿ ಇದು ಸ್ಥಿರ, ಕಡಿಮೆ ಸಾಲದ ದರಗಳನ್ನು ಹೊಂದಿವೆ. ಪರಿಣಾಮವಾಗಿ, ನೀವು ಮನೆ ಸುಧಾರಣೆಗಳಿಗಾಗಿ ಸಾಲವನ್ನು ತೆಗೆದುಕೊಳ್ಳಬಹುದು ಮತ್ತು ನಿಮ್ಮ ಮರುಪಾವತಿಯನ್ನು ನಿರ್ವಹಿಸಬಹುದು. ಆನ್​ಲೈನ್ ಮೂಲಕ ಸಾಲ ಪಡೆಯುವಾಗ ಬಹಳ ಎಚ್ಚರಿಕೆ ಇರಬೇಕು. ಇದರಲ್ಲಿ ಹಗರಣ, ವಂಚನೆಗಳು ಕೂಡ ನಡೆಯುತ್ತವೆ.

ಕಿರಿಕಿರಿ ಮುಕ್ತ ಪ್ರಕ್ರಿಯೆ

ಹಲವಾರು ದಾಖಲೆಗಳನ್ನು ಸಲ್ಲಿಸದೆಯೇ ಮನೆ ಸುಧಾರಣೆ ಸಾಲವನ್ನು ಪಡೆಯಬಹುದು. ಈ ಲೋನ್‌ಗೆ ನೀವು ಅರ್ಜಿ ಸಲ್ಲಿಸಲು ಕೆಲವು ಮೂಲಭೂತ ದಾಖಲೆಗಳು ಮಾತ್ರ ಬೇಕಾಗುತ್ತವೆ. ಮನೆ ಸುಧಾರಣೆ ಸಾಲಕ್ಕಾಗಿ ದಾಖಲೆಗಳ ಸಲ್ಲಿಕೆಯನ್ನು ತ್ವರಿತವಾಗಿ ಮತ್ತು ಸುಲಭವಾಗಿ ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬಹುದು. ಭಾರತದಲ್ಲಿ ಸಾಲದ ಅಪ್ಲಿಕೇಶನ್‌ಗಳ ಲಭ್ಯತೆಯು ಪ್ರಕ್ರಿಯೆಯನ್ನು ಇನ್ನಷ್ಟು ಬಳಕೆದಾರ ಸ್ನೇಹಿಯನ್ನಾಗಿ ಮಾಡುತ್ತದೆ.

(ಸೂಚನೆ: ಈ ಸುದ್ದಿ ಓದುಗರ ತಿಳುವಳಿಕೆಗಾಗಿ ನೀಡಲಾಗಿದೆ. ಟಿವಿ9 ಯಾವುದೇ ಜವಾಬ್ದಾರಿಯನ್ನು ಹೊರುವುದಿಲ್ಲ)

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ