53,000 ಕೋಟಿ ರೂಗೆ ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಪ್ರಸ್ತಾಪ; ಬ್ಯಾಂಕ್ ಒಕ್ಕೂಟಗಳಿಂದ ವಿರೋಧ; ಡಿ. 3ಕ್ಕೆ ಮುಷ್ಕರ

ಸಾರ್ವಜನಿಕ ವಲಯದ ಐಡಿಬಿಐ ಬ್ಯಾಂಕ್ ಅನ್ನು ಕೆನಡಾ ಮೂಲದ ಹಣಕಾಸು ಸಂಸ್ಥೆಗೆ ಮಾರಾಟ ಮಾಡುವ ಸರ್ಕಾರದ ಕ್ರಮಕ್ಕೆ ವಿರೋಧ ಮುಂದುವರಿದಿದೆ. ಬ್ಯಾಂಕ್ ಒಕ್ಕೂಟಗಳು ಡಿಸೆಂಬರ್ 3ಕ್ಕೆ ಮುಷ್ಕರ ನಡೆಸಲು ಕರೆ ನೀಡಿವೆ. ಎರಡು ತಿಂಗಳಲ್ಲಿ ಇದು ಎರಡನೇ ಮುಷ್ಕರವಾಗಿದೆ. ಕೆನಡಾದ ಫೇರ್​ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಸಂಸ್ಥೆಯು ಐಡಿಬಿಐ ಬ್ಯಾಂಕ್​ನ ಶೇ. 60ರಷ್ಟು ಪಾಲನ್ನು 53,000 ಕೋಟಿ ರೂಗೆ ಖರೀದಿಸಲು ಮುಂದಾಗಿದೆ.

53,000 ಕೋಟಿ ರೂಗೆ ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಪ್ರಸ್ತಾಪ; ಬ್ಯಾಂಕ್ ಒಕ್ಕೂಟಗಳಿಂದ ವಿರೋಧ; ಡಿ. 3ಕ್ಕೆ ಮುಷ್ಕರ
2026ರ ಅಕ್ಟೋಬರ್​ನಲ್ಲಿ ಐಡಿಬಿಐ ಬ್ಯಾಂಕ್ ಉದ್ಯೋಗಿಗಳು ನಡೆಸಿದ ಪ್ರತಿಭಟನೆಯ ಚಿತ್ರ
Image Credit source: PTI

Updated on: Nov 17, 2026 | 11:58 AM

ನವದೆಹಲಿ, ನವೆಂಬರ್ 17: ಸರ್ಕಾರಿ ಸ್ವಾಮ್ಯದ ಐಡಿಬಿಐ ಬ್ಯಾಂಕ್ ಅನ್ನು ಖಾಸಗೀಕರಣಗೊಳಿಸುವ (IDBI bank privatisation) ಸರ್ಕಾರದ ಪ್ರಸ್ತಾಪಕ್ಕೆ ಉದ್ಯೋಗಿಗಳಿಂದ ವಿರೋಧ ವ್ಯಕ್ತವಾಗಿದೆ. ಡಿಸೆಂಬರ್ 3ರಂದು ಬ್ಯಾಂಕ್ ಒಕ್ಕೂಟಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ಕೊಟ್ಟಿವೆ. ಕಳೆದ ತಿಂಗಳೂ ಕೂಡ ಮುಷ್ಕರ ನಡೆಸಲಾಗಿತ್ತು. ವಿದೇಶೀ ಸಂಸ್ಥೆಗೆ ಬ್ಯಾಂಕ್ ಮಾರಾಟ ಮಾಡುತ್ತಿರುವುದಕ್ಕೆ ಆಕ್ಷೇಪಗಳು ಬಂದಿವೆ.

ಭಾರತ ಮೂಲದ ಕೆನಡಿಯನ್ ಉದ್ಯಮಿ ಪ್ರೇಮ್ ವತ್ಸಾ (Prem Watsa) ಅವರ ಫೇರ್​ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ (Fairfax Financial Holdings) ಸಂಸ್ಥೆಗೆ ಐಡಿಬಿಐ ಬ್ಯಾಂಕ್ ಅನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಅನುಮತಿಸಿದೆ. 53,000 ಕೋಟಿ ರೂನ ಈ ಡೀಲ್​ನಲ್ಲಿ ಐಡಿಬಿಐ ಬ್ಯಾಂಕ್​ನ ಶೇ. 60.72ರಷ್ಟು ಪಾಲನ್ನು ಫೇರ್​ಫ್ಯಾಕ್ಸ್ ಖರೀದಿಸಲಿದೆ. ಇದು ನೆರವೇರಿದರೆ, ಭಾರತದ ಹಣಕಾಸು ಸೇವೆಗಳ ಕ್ಷೇತ್ರಕ್ಕೆ ಅತಿದೊಡ್ಡ ವಿದೇಶೀ ಹೂಡಿಕೆ ಬಂದಂತಾಗುತ್ತದೆ.

Loading...

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ಭಾರತದ ನಿರುದ್ಯೋಗ ದರ ಶೇ. 4.9ಕ್ಕೆ ಇಳಿಕೆ; ಉದ್ಯೋಗಸ್ಥ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ

ಭಾರತದ ಬ್ಯಾಂಕ್ ಒಕ್ಕೂಟಗಳ ತಗಾದೆಗಳೇನು?

  • ಸಾರ್ವಜನಿಕ ವಲಯದ ಬ್ಯಾಂಕ್ ಅನ್ನು ವಿದೇಶೀ ಕಂಪನಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಬ್ಯಾಂಕ್​ನ ವಿಶೇಷ ಗುಣವೇ ಇಲ್ಲದಂತಾಗುತ್ತದೆ.
  • ಫೇರ್​ಫ್ಯಾಕ್ಸ್ ಸಂಸ್ಥೆಗೆ ಬ್ಯಾಂಕಿಂಗ್ ಅನುಭವ ಕಡಿಮೆ ಇದೆ.
  • ಐಡಿಬಿಐ ಬ್ಯಾಂಕ್ ಅನ್ನು ನ್ಯಾಯಯುತವಾಗಿ ಮೌಲ್ಯಮಾಪನ ಮಾಡಲಾಗಿಲ್ಲ. ಡೀಲ್ ಮೊತ್ತ ಸಮರ್ಪಕವಾಗಿಲ್ಲ.
  • ಐಡಿಬಿಐ ಬ್ಯಾಂಕ್ ಅನ್ನು ಖಾಸಗಿ ಸಂಸ್ಥೆಗೆ ಮಾರುವ ಅಗತ್ಯವೇ ಇಲ್ಲ

ಐಡಿಬಿಐ ಅಧಿಕಾರಿಗಳು ಮತ್ತು ಉದ್ಯೋಗಿಗಳ ಸಂಯುಕ್ತ ವೇದಿಕೆಯು ಈ ಡೀಲ್​ಗೆ ನೀಡಿರುವ ಅನುಮೋದನೆಯನ್ನು ತಡೆ ಹಿಡಿಯಬೇಕೆಂದು ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರನ್ನು ಒತ್ತಾಯಿಸಿದೆ.

ಇದನ್ನೂ ಓದಿ: ಹೊಸ ಇತಿಹಾಸ ನಿರ್ಮಿಸಹೊರಟ ಅಗ್ನಿಕುಲ್ ಕಾಸ್ಮೋಸ್; ಬಾಹ್ಯಾಕಾಶದಲ್ಲಿ ಡಾಟಾ ಸೆಂಟರ್, ಮರುಬಳಕೆ ರಾಕೆಟ್ ಉಡಾವಣೆಗೆ ಪ್ಲಾನ್

ಫೇರ್​ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಸಂಸ್ಥೆ ಬಗ್ಗೆ…

ಇದು ಪ್ರೇಮ್ ವತ್ಸಾ ಸ್ಥಾಪಿಸಿದ ಹಣಕಾಸು ಸಂಸ್ಥೆ. ಇನ್ಷೂರೆನ್ಸ್ ಮತ್ತು ಹೂಡಿಕೆ ನಿರ್ವಹಣೆ ಕ್ಷೇತ್ರದಲ್ಲಿ ಬ್ಯುಸಿನೆಸ್ ಹೊಂದಿದೆ. ಬ್ಯಾಂಕಿಂಗ್ ಅನುಭವ ಇಲ್ಲ. ಅದರ ಬಹುಪಾಲು ಆದಾಯವು ವಿಮೆ ವ್ಯವಹಾರಗಳಿಂದ ಬರುತ್ತದೆ. ವಿಮೆಯಲ್ಲಿ ಬರುವ ಪ್ರೀಮಿಯಮ್ ಅನ್ನು ಷೇರು, ಬಾಂಡು ಇತ್ಯಾದಿಗಳಲ್ಲಿ ಅದು ಹೂಡಿಕೆ ಮಾಡುತ್ತದೆ. ಅದಕ್ಕೆಂದೇ ಅದರದ್ದೇ ಒಂದು ಹೂಡಿಕೆ ಸಂಸ್ಥೆ ಇದೆ.

ಕೆನಡಾದಲ್ಲಿ ಮುಖ್ಯ ಕಚೇರಿ ಇರುವ ಈ ಸಂಸ್ಥೆ ಇತ್ತೀಚೆಗೆ ಕೇರಳದ ಸಿಎಸ್​ಬಿ ಬ್ಯಾಂಕ್​ನಲ್ಲಿ ಶೇ. 40ರಷ್ಟು ಪಾಲನ್ನು ಖರೀದಿಸಿತ್ತು. ಈಗ ಐಡಿಬಿಐನಲ್ಲಿ ಶೇ. 60ರಷ್ಟು ಪಾಲು ಖರೀದಿಸಲು ಹೊರಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us