ಷೇರು ಮಾರುಕಟ್ಟೆಯಲ್ಲಿ (Stock Market) ಅಕ್ರಮ ವಹಿವಾಟು ನಡೆಸಿ ಶೇರುಗಳನ್ನು ನಕಲಿ ಮಾಡಿದ್ದಕ್ಕಾಗಿ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ 19 ಮಂದಿಗೆ ಒಟ್ಟು 95 ಲಕ್ಷ ರೂಪಾಯಿ ದಂಡ ವಿಧಿಸಿದೆ. ಸೆಬಿ ತನಿಖೆ ನಡೆಸಿದಾಗ 19 ಜನರು ಗ್ಲೋಬಲ್ ಇನ್ಫ್ರಾಟೆಕ್ ಮತ್ತು ಫೈನಾನ್ಸ್ ಲಿಮಿಟೆಡ್ ಷೇರುಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದ ನಂತರ ಸೆಬಿ ತಪ್ಪಿತಸ್ಥರಿಗೆ 95 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಆದೇಶ ನೀಡಿದ ದಿನದಿಂದ ದಂಡದ ಮೊತ್ತವನ್ನು 45 ದಿನಗಳಲ್ಲಿ ಪಾವತಿಸಬೇಕಾಗುತ್ತದೆ. ಷೇರುಪೇಟೆಯಲ್ಲಿ ಅಕ್ರಮ ವಹಿವಾಟು ನಡೆಸಿರುವ ಪ್ರಕರಣದ ತನಿಖೆಯನ್ನು 2017-18 ರಲ್ಲಿ ನಡೆಸಲಾಗಿತ್ತು. ಇದೀಗ 19 ಮಂದಿ ಅಕ್ರಮದಲ್ಲಿ ಭಾಗಿಯಾಗಿರುವುದು ತಿಳಿದುಬಂದ ಹಿನ್ನೆಲೆ ದಂಡ ವಿಧಿಸಲಾಗಿದೆ.
ಗ್ಲೋಬಲ್ ಇನ್ಫ್ರಾಟೆಕ್ ಮತ್ತು ಫೈನಾನ್ಸ್ ಲಿಮಿಟೆಡ್ (GIFL) ಷೇರುಗಳಲ್ಲಿ ಪಿಎಫ್‌ಯುಟಿಪಿ (ವಂಚನೆಯ ಮತ್ತು ಅನ್ಯಾಯದ ವ್ಯಾಪಾರ ಅಭ್ಯಾಸಗಳ ನಿಷೇಧ) ನಿಗದಿಪಡಿಸಿದ ನಿಯಮಗಳ ಉಲ್ಲಂಘನೆಯನ್ನು ಕಂಡುಹಿಡಿಯಲು ಮಾರುಕಟ್ಟೆ ನಿಯಂತ್ರಕ ಸೆಬಿ ಡಿಸೆಂಬರ್ 2017 ಮತ್ತು ಫೆಬ್ರವರಿ 2018 ರ ನಡುವೆ ವಿಚಾರಣೆ ನಡೆಸಿತ್ತು. ಅದರಂತೆ 19 ವ್ಯಕ್ತಿಗಳು ಗಣನೀಯ ಪ್ರಮಾಣದ ಷೇರುಗಳಲ್ಲಿ 3,266 ವಹಿವಾಟುಗಳನ್ನು ಕಾರ್ಯಗತಗೊಳಿಸುವ ಅದೇ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ ಎಂದು ಕಂಡುಹಿಡಿಯಲಾಗಿದೆ. ಇದು 39 ದಿನಗಳವರೆಗೆ ಹೆಚ್ಚಿನ ಸಂಖ್ಯೆಯ ವಹಿವಾಟುಗಳ ಮೂಲಕ 87 ರಿಂದ 458 ವಹಿವಾಟುಗಳವರೆಗಿನ ಒಟ್ಟು ಮಾರುಕಟ್ಟೆ ಪರಿಮಾಣದ 12.86 ಪ್ರತಿಶತವಾಗಿದೆ.
ಪ್ರಕರಣದ ತನಿಖೆಯಂತೆ ಸೆಬಿಯು, ಹರೀಶ್‌ಕುಮಾರ್ ಕಾಂತಿಲಾಲ್ ಪಟೇಲ್, ವಿಶಾಲಕುಮಾರ್ ಕೃಷ್ಣಕಾಂತ್ ಬೋರಿಶಾ, ಪಾರ್ಧಿ ಧೀರೂಭಾಯ್ ಖಾನಾಭಾಯಿ, ಭಾವಿನ್ ನಟ್ವರ್‌ಲಾಲ್ ಪಾಂಚಾಲ್, ಅಂಕಿತ್ ಜಗದೀಶ್‌ಭಾಯ್ ಪಿಥ್ವಾ, ಕೇತನ್ ಪ್ರವೀಣ್‌ಭಾಯ್ ಪಾಂಚಾಲ್, ಪ್ರವೀಣ್ ಕುಮಾರ್ ಮತ್ತು ರಮೇಶ್‌ಚಂದ್ರ ಚಿತುಭಾಯಿ ಸೇರಿದಂತೆ ಒಟ್ಟು 19 ಜನರ ವಿರುದ್ಧ ಕ್ರಮ ಕೈಗೊಂಡಿದ್ದು, ಒಬ್ಬೊಬ್ಬರಿಗೆ ತಲಾ 5 ಲಕ್ಷದಂತೆ ಒಟ್ಟು 95 ಲಕ್ಷ ರೂ. ದಂಡ ವಿಧಿಸಿದೆ.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:25 pm, Tue, 27 September 22