ಆದಾಯ ತೆರಿಗೆ ಅಪ್​ಡೇಟ್; ಐಟಿಆರ್-1 ನಮೂನೆ ಭರ್ತಿ ಮಾಡಿ, ಸಲ್ಲಿಸುವ ಕ್ರಮ; 16 ಹಂತಗಳ ವಿವರಣೆ

Income tax dept uploads video with step-by-step guidance to file ITR-1: ಸಂಬಳದ ಆದಾಯ ಇರುವವರು, ಪಿಂಚಣಿ ಪಡೆಯುತ್ತಿರುವವರು, ಎರಡು ಮನೆಗಳ ಮಾಲೀಕರು, ಫ್ಯಾಮಿಲಿ ಪೆನ್ಷನ್ ಪಡೆಯುತ್ತಿರುವವರು ಮೊದಲಾದ ಆದಾಯ ವರ್ಗದವರು ಐಟಿಆರ್-1 ನಮೂನೆಯನ್ನು ಆಯ್ದುಕೊಂಡು ಭರ್ತಿ ಮಾಡಿ ರಿಟರ್ನ್ಸ್ ಸಲ್ಲಿಸಬೇಕು. ಇದನ್ನು ಹೇಗೆ ಮಾಡುವುದು ಎಂದು ವಿವರಿಸುವ 16 ಹಂತಗಳ ಕ್ರಮ ಇಲ್ಲಿದೆ.

ಆದಾಯ ತೆರಿಗೆ ಅಪ್​ಡೇಟ್; ಐಟಿಆರ್-1 ನಮೂನೆ ಭರ್ತಿ ಮಾಡಿ, ಸಲ್ಲಿಸುವ ಕ್ರಮ; 16 ಹಂತಗಳ ವಿವರಣೆ
ಆದಾಯ ತೆರಿಗೆ ರಿಟರ್ನ್
Image Credit source: Shutterstock

Updated on: Jun 03, 2026 | 12:03 PM

ಆದಾಯ ತೆರಿಗೆ ಪಾವತಿಸುತ್ತಿರುವವರು, ತೆರಿಗೆ ಬಾಧ್ಯತೆ ಹೊಂದಿರುವವರೆಲ್ಲರೂ ಟ್ಯಾಕ್ಸ್ ರಿಟರ್ನ್ಸ್ (Income Tax Returns) ಸಲ್ಲಿಸುವುದು ಕಡ್ಡಾಯ. ವಿವಿಧ ವರ್ಗದ ತೆರಿಗೆ ಪಾವತಿದಾರರಿಗೆ ವಿವಿಧ ಐಟಿಆರ್ ಫಾರ್ಮ್​ಗಳಿವೆ. ಆದಾಯ ತೆರಿಗೆ ಇಲಾಖೆ ಖುದ್ದಾಗಿ ಐಟಿಆರ್ 1 ನಮೂನೆ (ITR-1 form) ಬಗ್ಗೆ ಮಾಹಿತಿ ನೀಡಿದೆ. ಅದರ ಬಳಕೆ ಯಾಕೆ, ಹೇಗೆ ಅರ್ಜಿ ತುಂಬಿಸಬೇಕು, ಹೇಗೆ ಸಲ್ಲಿಸಬೇಕು ಎನ್ನುವ ವಿವರಣೆ ಇರುವ ಮಾರ್ಗದರ್ಶಿ ವಿಡಿಯೋವೊಂದನ್ನು ಐಟಿ ಇಲಾಖೆ ಪೋಸ್ಟ್ ಮಾಡಿದೆ.

ಐಟಿಆರ್-1 ಯಾರು ಬಳಸಬಹುದು?

  • ಸಂಬಳ ಅಥವಾ ಪಿಂಚಣಿ ಆದಾಯ ಇರುವವರು
  • ಎರಡು ಮನೆಗಳನ್ನು ಹೊಂದಿರುವವರು
  • ಕುಟುಂಬ ಪಿಂಚಣಿ ಬರುತ್ತಿರುವವರು
  • 5,000 ರೂವರೆಗೆ ಕೃಷಿ ಆದಾಯ ಇರುವವರು
  • ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆ ಬಾಧ್ಯತೆ ಇರುವವರು (1.25 ಲಕ್ಷ ರೂವರೆಗೆ)
  • ಸೇವಿಂಗ್ಸ್ ಅಕೌಂಟ್​ನಿಂದ ಬಡ್ಡಿ, ಠೇವಣಿಗಳಿಂದ ಬಡ್ಡಿ, ಆದಾಯ ತೆರಿಗೆ ರೀಫಂಡ್​ನಿಂದ ಬಡ್ಡಿ ಇತ್ಯಾದಿ ಇತರ ಮೂಲಗಳಿಂದ ಆದಾಯ ಹೊಂದಿರವವರು.

ಇದನ್ನೂ ಓದಿ: ಅಗತ್ಯ ಸಂದರ್ಭದಲ್ಲೇ ಹೆಲ್ತ್ ಇನ್ಷೂರೆನ್ಸ್ ಕ್ಯಾಷ್​ಲೆಸ್ ಕೈಕೊಡಬಹುದು; ಇಲ್ಲಿವೆ ಪ್ರಮುಖ ಕಾರಣಗಳು

ಐಟಿಆರ್-1 ಅಥವಾ ಸಹಜ್ ಫಾರ್ಮ್ ಭರ್ತಿ ಮಾಡುವ ಹಂತ ಹಂತದ ಮಾರ್ಗದರ್ಶಿ

  • ಹಂತ 1: ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್​ಗೆ ಭೇಟಿ ನೀಡಿ (incometax.gov.in). ಇಲ್ಲಿ ಲಾಗಿನ್ ಆಗಿರಿ
  • ಹಂತ 2: ಹೋಮ್ ಪೇಜ್‌ನಲ್ಲಿ ಕಾಣಿಸಿದ e-File -> Income Tax Returns -> File Income Tax Return ಎಂಬ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ.
  • ಹಂತ 3: ನಂತರದ ಪುಟದಲ್ಲಿ ಮೌಲ್ಯಮಾಪನ ವರ್ಷವನ್ನು (Assessment Year) 2026-27 ಎಂದು ಆಯ್ದುಕೊಂಡು, ಫೈಲಿಂಗ್ ಮೋಡ್ ಅನ್ನು Online ಎಂದು ಸೆಲೆಕ್ಟ್ ಮಾಡಬೇಕು.
  • ಹಂತ 4: ನೀವು ಈ ಮೊದಲೇ ರಿಟರ್ನ್ ಅನ್ನು ಸೇವ್ ಮಾಡಿದ್ದರೆ ‘Resume Filing’ ಅನ್ನು ಒತ್ತಿರಿ. ಇಲ್ಲದಿದ್ದರೆ ‘Start New Filing’ ಕ್ಲಿಕ್ ಮಾಡಿ.
  • ಹಂತ 5: ತನ್ನ ತೆರಿಗೆ ಸ್ಥಿತಿಯನ್ನು (Status) ‘Individual’ ಅಥವಾ ಬೇರೆ ಸೂಕ್ತವಾದುದನ್ನು ಆಯ್ಕೆ ಮಾಡಬೇಕು.
  • ಹಂತ 6: ಡ್ರಾಪ್‌ಡೌನ್ ಮೆನುವಿನಿಂದ ITR-1 (Sahaj) ಫಾರ್ಮ್ ಅನ್ನು ಆರಿಸಿಕೊಳ್ಳಬೇಕು.
  • ಹಂತ 7: ಒಂದು ವೇಳೆ ತನಗೆ ಯಾವ ಫಾರ್ಮ್ ಬೇಕು ಎಂದು ಗೊಂದಲವಿದ್ದರೆ, ‘Help me decide which ITR form to file’ ಆಯ್ಕೆ ಬಳಸಬಹುದು.
  • ಹಂತ 8: ಸ್ಕ್ರೀನ್ ಮೇಲೆ ಕಾಣುವ ಅಗತ್ಯ ದಾಖಲೆಗಳ ಪರಿಶೀಲನಾ ಪಟ್ಟಿಯನ್ನು (Document Checklist) ಓದಿಕೊಂಡು, ‘Let’s get started’ ಬಟನ್ ಒತ್ತಬೇಕು.
  • ಹಂತ 9: ತೆರಿಗೆ ರಿಟರ್ನ್ ಸಲ್ಲಿಸುತ್ತಿರುವುದಕ್ಕೆ ಇರುವ ಸೂಕ್ತ ಕಾರಣವನ್ನು (ಉದಾಹರಣೆಗೆ: ಆದಾಯವು ತೆರಿಗೆ ವಿನಾಯಿತಿ ಮಿಗಿಲಾಗಿರುವುದು) ಆಯ್ಕೆ ಮಾಡಬೇಕು.
  • ಹಂತ 10: ಈಗ ಮೊದಲೇ ಭರ್ತಿಯಾದ (Pre-filled) ಡೇಟಾ ಇರುತ್ತದೆ. ಅದನ್ನು ತನ್ನ AIS (Annual Information Statement) ಮತ್ತು Form 26AS ಜೊತೆ ಎಚ್ಚರಿಕೆಯಿಂದ ಹೋಲಿಸಿ ನೋಡಿ, ಅಗತ್ಯ ತಿದ್ದುಪಡಿಗಳಿದ್ದರೆ ಮಾಡಬೇಕು.
  • ಹಂತ 11: ಆದಾಯ ಮತ್ತು ಕಡಿತಗಳ (Income and Deduction) ವಿವರಗಳನ್ನು ಆಯಾ ಸೆಕ್ಷನ್‌ಗಳ ಅಡಿಯಲ್ಲಿ ನಿಖರವಾಗಿ ದಾಖಲಿಸಬೇಕು.
  • ಹಂತ 12 (ಎ): ತೆರಿಗೆ ಲೆಕ್ಕಾಚಾರ (Tax Computation) ಪರಿಶೀಲಿಸಿ. ತೆರಿಗೆ ಬಾಕಿ ಇದ್ದರೆ ‘Pay Now’ ಕ್ಲಿಕ್ ಮಾಡಿ, ಆನ್‌ಲೈನ್ ಪಾವತಿ ಮುಗಿಸಿ ಮತ್ತೆ ಫೈಲಿಂಗ್ ಪುಟಕ್ಕೆ ಮರಳಬೇಕು.
  • ಹಂತ 12 (ಬಿ): ತೆರಿಗೆ ಬಾಕಿ ಇಲ್ಲದಿದ್ದರೆ ಅಥವಾ ರೀಫಂಡ್ ಬರುವುದಿದ್ದರೆ, ನೇರವಾಗಿ ಮುಂದಿನ ಹಂತಕ್ಕೆ ಹೋಗಬಹುದು.

ಪ್ರಮುಖ ಸೂಚನೆ: ಪಾವತಿಸಿರುವ ತೆರಿಗೆ ವಿವರಗಳು ಆಟೋ-ಪಾಪುಲೇಟ್ (ಸ್ವಯಂಚಾಲಿತವಾಗಿ ಅಪ್ಡೇಟ್) ಆಗದಿದ್ದರೆ, ‘Resume Filing’ ಮಾಡಿ, ‘Tax Paid’ ಸೆಕ್ಷನ್‌ಗೆ ಹೋಗಿ, ‘Add Another’ ಕ್ಲಿಕ್ ಮಾಡಿ ಮ್ಯಾನುಯಲ್ ಆಗಿ ವಿವರಗಳನ್ನು ತುಂಬಿ ಸೇವ್ ಮಾಡಬೇಕು.

  • ಹಂತ 13: ಎಲ್ಲವೂ ಸರಿಯಾಗಿರುವುದನ್ನು ಖಚಿತಪಡಿಸಿಕೊಂಡು ಡಿಕ್ಲರೇಶನ್ (ಸ್ವಯಂ ಘೋಷಣೆ) ಒಪ್ಪಿ Validation ಗೆ ಸಾಗಬೇಕು.

ಇದನ್ನೂ ಓದಿ: ಭಾರತ ಈಗ ಗ್ಲೋಬಲ್ ಬ್ಯಾಕ್ ಆಫೀಸ್ ಮಾತ್ರವೇ ಅಲ್ಲ, ವಿಶ್ವದರ್ಜೆ ಪ್ರಾಡಕ್ಟ್ ನೀಡುವ ದೇಶವಾಗಿದೆ: ಪ್ರಸಾದ್ ಷಣ್ಮುಗಂ

ಇದನ್ನೂ ಗಮನಿಸಿ: ನೀವು ಫೈಲಿಂಗ್ ಸಲ್ಲಿಸಿದ ಬಳಿಕ ಸಿಸ್ಟಂನಿಂದ ವ್ಯಾಲಿಡೇಶನ್ ಪರಿಶೀಲನೆ ಆಗುತ್ತದೆ. ಯಾವುದಾದರೂ ತಪ್ಪು ಕಂಡರೆ ಮೆಸೇಜ್ ಪರಾಮರ್ಶಿಸಿ, ಅದು ನೀಡುವ ಸಲಹೆಯಂತೆ ಕ್ರಮ ತೆಗೆದುಕೊಳ್ಳಿ.

  • ಹಂತ 14: ಆಂತರಿಕ ವ್ಯಾಲಿಡೇಶನ್ ಯಶಸ್ವಿಯಾದ ನಂತರ, ಇಡೀ ರಿಟರ್ನ್ ಅನ್ನು ಮತ್ತೊಮ್ಮೆ ಪರಿಶೀಲಿಸಲು ‘Preview’ ಕ್ಲಿಕ್ ಮಾಡಿ ನೋಡಿ, ನಂತರ ‘Proceed to Validation’ ಒತ್ತಬೇಕು.
  • ಹಂತ 15: ವ್ಯಾಲಿಡೇಶನ್ ಮುಗಿದ ತಕ್ಷಣ, ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘Proceed to Verification’ ಮೇಲೆ ಕ್ಲಿಕ್ ಮಾಡಬೇಕು.
  • ಹಂತ 16: ಕೊನೆಯದಾಗಿ, ಸುಲಭವೆನಿಸಿದ ಇ-ವೆರಿಫಿಕೇಶನ್ ವಿಧಾನವನ್ನು (ಉದಾಹರಣೆಗೆ: ಆಧಾರ್ ಒಟಿಪಿ – Aadhaar OTP) ಆಯ್ದುಕೊಂಡು ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಐಟಿ ಇಲಾಖೆ ಪೋಸ್ಟ್ ಮಾಡಿದ ವಿಡಿಯೋ

ಸಬ್ಮಿಟ್ ಮಾಡುವ ಮುನ್ನ ಪ್ರತಿಯೊಂದು ಸೆಕ್ಷನ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಸಲ್ಲಿಕೆಯಾದ ಬಳಿಕ “ನಿಮ್ಮ ITR-1 ಫೈಲಿಂಗ್ ಯಶಸ್ವಿಯಾಗಿದೆ” ಎಂಬ ಸಂದೇಶ ಪರದೆಯ ಮೇಲೆ ಬರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us