2021ರ ಡಿಸೆಂಬರ್ ಹೊತ್ತಿಗೆ ಭಾರತದಲ್ಲಿ 5.3 ಕೋಟಿ ನಿರುದ್ಯೋಗಿಗಳಿದ್ದಾರೆ, ಅದರಲ್ಲಿ ಮಹಿಳೆಯರ ಪ್ರಮಾಣ ಹೆಚ್ಚು ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಹೇಳಿದೆ. ಈ ಸಂಖ್ಯೆಯಲ್ಲಿ ನಿರುದ್ಯೋಗಿಗಳಾಗಿರುವ 3.5 ಕೋಟಿ ಮಂದಿ ಸಕ್ರಿಯವಾಗಿ ಉದ್ಯೋಗಕ್ಕೆ ಕೇಳುತ್ತಿದ್ದು, 1.7 ಕೋಟಿ ಮಂದಿ ಉದ್ಯೋಗ ಮಾಡುವುದಕ್ಕೆ ಸಾಧ್ಯವಿದ್ದರೂ ಸಕ್ರಿಯವಾಗಿ ಪ್ರಯತ್ನಿಸುತ್ತಿಲ್ಲ ಎಂದು ಸಿಎಂಐಇ ಹೇಳಿದೆ. “ಭಾರತವು ತಕ್ಷಣವೇ ಈ ನಿರುದ್ಯೋಗ ದರದ ಪೈಕಿಯ ಶೇ 7.9ರಷ್ಟು ಮಂದಿಗೆ ಅಥವಾ 2021ರ ಡಿಸೆಂಬರ್ನಲ್ಲಿ ಇರುವ 3.5 ಕೋಟಿ ಮಂದಿ ಯಾರು ಸಕ್ರಿಯವಾಗಿ ಉದ್ಯೋಗಕ್ಕೆ ಹುಡುಕುತ್ತಿದ್ದಾರೋ ಅವರಿಗೆ ಒದಗಿಸಬೇಕು,” ಎಂದು ಸಿಎಂಐಇ ತನ್ನ ಸಾಪ್ತಾಹಿಕ ವಿಶ್ಲೇಷಣೆಯಲ್ಲಿ ಹೇಳಿದೆ. “ಇದರ ಜತೆಗೆ ಉದ್ಯೋಗ ಇಲ್ಲದ ಆ ಹೆಚ್ಚುವರಿ 1.7 ಕೋಟಿ ಮಂದಿಗೆ ಕೂಡ ಉದ್ಯೋಗ ಒದಗಿಸುವುದು ಅಷ್ಟೇ ಮುಖ್ಯವಾದ ಸವಾಲು. ಅವರು ಸಹ ಉದ್ಯೋಗ ಮಾಡುವ ಸಾಮರ್ಥ್ಯ ಹೊಂದಿದ್ದು, ಆದರೆ ಸಕ್ರಿಯವಾಗಿ ಅದಕ್ಕಾಗಿ ಹುಡುಕುತ್ತಿಲ್ಲ,” ಎಂದು ಸೇರಿಸಲಾಗಿದೆ.
ಸಿಎಂಐಇ ಪ್ರಕಾರ, 3.5 ಕೋಟಿ ನಿರುದ್ಯೋಗಿಗಳಲ್ಲಿ 2021ರ ಡಿಸೆಂಬರ್ ತಿಂಗಳಲ್ಲಿ ಸಕ್ರಿಯವಾಗಿ ಉದ್ಯೋಗಕ್ಕೆ ಎದುರು ನೋಡುತ್ತಿರುವ ಪೈಕಿ ಶೇ 23ರಷ್ಟು ಅಥವಾ 80 ಲಕ್ಷ ಮಹಿಳೆಯರಿದ್ದಾರೆ. ಇದೇ ವೇಳೆ 1.7 ಕೋಟಿ ಮಂದಿ ಪ್ಯಾಸಿವ್ ಆಗಿ ನಿರುದ್ಯೋಗಿಗಳಾಗಿದ್ದು, ಶೇ 53ರಷ್ಟು ಅಥವಾ 90 ಲಕ್ಷ ಮಹಿಳೆಯರು ಸಕ್ರಿಯವಾಗಿ ಕೆಲಸಕ್ಕಾಗಿ ಹುಡುಕದಿದ್ದರೂ ಅವರಿಗೆ ಉದ್ಯೋಗ ಮಾಡುವ ಸಾಮರ್ಥ್ಯ ಇದೆ. “ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಉದ್ಯೋಗ ಮಾಡುವ ಸಾಮರ್ಥ್ಯ ಇದ್ದರೂ ಸಕ್ರಿಯವಾಗಿ ಕೆಲಸಕ್ಕೆ ಏಕೆ ಅಪ್ಲೈ ಮಾಡುತ್ತಿಲ್ಲ ಅಥವಾ ಉದ್ಯೋಗ ಅರಸಲು ಬೇರೆ ಪ್ರಯತ್ನ ಏಕೆ ಮಾಡುತ್ತಿಲ್ಲ. ಉದ್ಯೋಗ ಲಭ್ಯ ಇಲ್ಲ ಎಂಬ ಕಾರಣವೋ ಅಥವಾ ಕೆಲಸಕ್ಕೆ ಸೇರುವುದಕ್ಕೆ ಸಾಮಾಜಿಕ ಬೆಂಬಲದ ಕೊರತೆಯೋ,” ಎಂಬ ಚರ್ಚೆ ನಡೆಯುತ್ತಿದೆ.
ವಿಶ್ವ ಬ್ಯಾಂಕ್ನ ಡೇಟಾ ಗಮನಿಸುವಂತೆ, ಸಿಎಂಐಇ ಹೇಳಿರುವ ಪ್ರಕಾರ, 2020ರಲ್ಲಿ ವಿಶ್ವ ಬ್ಯಾಂಕ್ ಕಲೆ ಹಾಕಿರುವ ಅಂಕಿ- ಅಂಶದಂತೆ ಜಾಗತಿಕ ಉದ್ಯೋಗ ದರ ಶೇ 55 ಅಥವಾ 2019ರಲ್ಲಿ ಶೇ 58. ಇದರಲ್ಲಿ ಭಾರತದಲ್ಲಿ ಶೇ 43ರಷ್ಟಿದೆ. ಆದರೆ ಸಿಎಂಐಇ ಲೆಕ್ಕದಂತೆ ಭಾರತದಲ್ಲಿನ ಉದ್ಯೋಗ ದರ ಶೇ 38. “ಭಾರತದ ನಿರುದ್ಯೋಗ ಸಮಸ್ಯೆಯು ನಿರುದ್ಯೋಗ ದರದಲ್ಲಿ ಪ್ರತಿಫಲಿಸುತ್ತಿಲ್ಲ. ಇದರ ಸಮಸ್ಯೆ ಕಡಿಮೆ ಉದ್ಯೋಗ ದರ ಮತ್ತು ನಿರುತ್ತೇಜಿತ ಆಗಿರುವ ಯುವ ಮಹಿಳಾ ಕಾರ್ಮಿಕ ಗುಂಪು,” ಎಂದು ಸಿಎಂಐಇ ಹೇಳಿದೆ.
ಸಿಎಂಐಇ ಪ್ರಕಾರ, ಭಾರತದ ಶ್ರೀಮಂತಿಕೆಯ ಹಾದಿ ಇರುವುದು ಹತ್ತಿರಹತ್ತಿರ ಶೇ 60ರಷ್ಟು ಜನಸಂಖ್ಯೆಗೆ ಉದ್ಯೋಗ ಹುಡುಕುವುದರಲ್ಲಿ. “ಜಾಗತಿಕ ಉದ್ಯೋಗ ದರದ ಗುಣಮಟ್ಟವನ್ನು ತಲುಪಬೇಕು ಅಂದರೆ ಭಾರತವು ಹೆಚ್ಚುವರಿಯಾಗಿ 18.75 ಕೋಟಿ ಜನರನ್ನು ನೇಮಕಾತಿ ಮಾಡಬೇಕು,” ಎಂದು ಹೇಳಿದೆ.
ಇದನ್ನೂ ಓದಿ: ರಾಜ್ಯದ ಯುವಜನತೆಗೆ ಉದ್ಯೋಗ ನೀಡಿ, ಇಲ್ಲವೇ 9 ಸಾವಿರ ರೂ ನಿರುದ್ಯೋಗ ಭತ್ಯೆ ಕೊಡಿ: ಕಾಂಗ್ರೆಸ್ ರ್ಯಾಲಿಯಲ್ಲಿ ಡಿಕೆಶಿ ಆಗ್ರಹ