Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ ಯುವಜನತೆಗೆ ಉದ್ಯೋಗ ನೀಡಿ, ಇಲ್ಲವೇ 9 ಸಾವಿರ ರೂ ನಿರುದ್ಯೋಗ ಭತ್ಯೆ ಕೊಡಿ: ಕಾಂಗ್ರೆಸ್​ ರ್ಯಾಲಿಯಲ್ಲಿ ಡಿಕೆಶಿ ಆಗ್ರಹ

ದೇಶದಲ್ಲಿ, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದೆ. ಸರ್ಕಾರದ ವಿರುದ್ಧ ಧರಣಿಗೆ ರಾಜ್ಯದೆಲ್ಲೆಡೆಯಿಂದ ಬಂದಿದ್ದೀರಿ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿಯಾಗಿದೆ. ರಾಜ್ಯದಲ್ಲಿ ಉದ್ಯೋಗ ನೀಡದಿದ್ದರೆ ನಿರುದ್ಯೋಗ ಭತ್ಯೆ ನೀಡಿ -ಡಿಕೆ ಶಿವಕುಮಾರ್

ರಾಜ್ಯದ ಯುವಜನತೆಗೆ ಉದ್ಯೋಗ ನೀಡಿ, ಇಲ್ಲವೇ 9 ಸಾವಿರ ರೂ ನಿರುದ್ಯೋಗ ಭತ್ಯೆ ಕೊಡಿ: ಕಾಂಗ್ರೆಸ್​ ರ್ಯಾಲಿಯಲ್ಲಿ ಡಿಕೆಶಿ ಆಗ್ರಹ
ಯುವ ಕಾಂಗ್ರೆಸ್ ಪ್ರತಿಭಟನಾ ಱಲಿ
Follow us
TV9 Web
| Updated By: ಆಯೇಷಾ ಬಾನು

Updated on: Dec 17, 2021 | 12:20 PM

ಬೆಳಗಾವಿ: ರಾಜ್ಯ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನಾ ಱಲಿ ಹಮ್ಮಿಕೊಂಡಿದೆ. ‘ಯುವಕರ ನಡೆ ಬೆಳಗಾವಿ ಕಡೆ’ ಘೋಷವಾಕ್ಯದಡಿ ಯುವಜನತೆಗೆ ಉದ್ಯೋಗ ನೀಡಿ, 9 ಸಾವಿರ ರೂಪಾಯಿ ನಿರುದ್ಯೋಗ ಭತ್ಯೆ ನೀಡುವಂತೆ ಒತ್ತಾಯಿಸಿ ಱಲಿ ನಡೆಸಲಾಗುತ್ತಿದೆ. ಈ ವೇಳೆ ಅಜ್ಜಿಯ ನಿಧನದ ದುಃಖದಲ್ಲಿರುವ ಡಿ.ಕೆ.ಶಿವಕುಮಾರ್ ಮಾತನಾಡಿದ್ದು ಧರಣಿಯಲ್ಲಿ ಭಾಗಿಯಾದವರಿಗೆ ಧೈರ್ಯದ ಮಾತುಗಳನ್ನಾಡಿದ್ದಾರೆ.

ದೇಶದಲ್ಲಿ, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದೆ. ಸರ್ಕಾರದ ವಿರುದ್ಧ ಧರಣಿಗೆ ರಾಜ್ಯದೆಲ್ಲೆಡೆಯಿಂದ ಬಂದಿದ್ದೀರಿ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿಯಾಗಿದೆ. ರಾಜ್ಯದಲ್ಲಿ ಉದ್ಯೋಗ ನೀಡದಿದ್ದರೆ ನಿರುದ್ಯೋಗ ಭತ್ಯೆ ನೀಡಿ. ನಮ್ಮ ಹೋರಾಟ ಇತಿಹಾಸವಾಗಲಿದೆ. ನಾನು ನಾಲ್ಕು ಹೆಜ್ಜೆ ಹಾಕಿ ತೆರಳುತ್ತೇನೆ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಯುವಕರಿಗೆ ಉದ್ಯೋಗಿ ನೀಡಿ, ಇಲ್ಲವೇ 9 ಸಾವಿರ ಭತ್ಯೆ ನೀಡಿ. ಪದವಿ ಪ್ರಮಾಣಪತ್ರಗಳನ್ನು ಪ್ರಧಾನಿ ಮೋದಿಗೆ ಕಳಿಸಬೇಕು. ನಮ್ಮ ಮುಂದಿನ ಪ್ರಣಾಳಿಕೆಯಲ್ಲಿ ಉದ್ಯೋಗದ ಪ್ರಸ್ತಾಪಿಸ್ತೇವೆ. ನಿರುದ್ಯೋಗದ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಡುತ್ತೇವೆ. ಇದು ನಮ್ಮ ಹೋರಾಟವಲ್ಲ, ಜನರ ಪರವಾದ ಹೋರಾಟ. ಅವರ ನೋವಿನ ಜತೆಗೆ ನಾವು ಭಾಗಿಯಾಗುತ್ತಿದ್ದೇವೆ ಎಂದರು.

ಇನ್ನು ರಮೇಶ್ ಕುಮಾರ್ ಸದನದಲ್ಲಿ ಮಹಿಳೆಯರ ಬಗ್ಗೆ ವಿವಾದತ್ಮಾಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಡಿಕೆಶಿ, ರಮೇಶ್ ಕುಮಾರ್ ಹೇಳಿಕೆ ನನ್ನ ಗಮನಕ್ಕೆ ಬಂದಿಲ್ಲ. ಕಾಂಗ್ರೆಸ್ನವರು ರೇಪ್ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾಗ ಆ ಹೇಳಿಕೆ ವಿವಾದ ಆಗಲಿಲ್ಲ. ರೇಪ್ ಮಾಡಿದವರನ್ನು ಕೂರಿಸಿಕೊಂಡು ಸಿಎಂ ಮಾತಾಡ್ತಿಲ್ವ? ಎಂದು K.R.ರಮೇಶ್ ಕುಮಾರ್ ಹೇಳಿಕೆಯನ್ನು ಡಿಕೆಶಿ ಸಮರ್ಥಿಸಿಕೊಂಡ ರೀತಿ ಮಾತನಾಡಿದ್ದಾರೆ.

ಇದನ್ನೂ ಓದಿ: ನೂರು ರೂ ವಿಚಾರಕ್ಕೆ ಕೊಲೆ: ತಾಂತ್ರಿಕವಾಗಿ ಅಪಘಾತ ಪ್ರಕರಣದ ರಹಸ್ಯ ಭೇದಿಸಿದ ಯಶವಂತಪುರ ಸಂಚಾರ ಪೊಲೀಸರು