Indian startups: 2025ರಲ್ಲಿ 44,000 ಹೊಸ ಸ್ಟಾರ್ಟಪ್​ಗಳು; ಮಾನ್ಯ ಪಡೆದ ನವೋದ್ದಿಮೆಗಳ ಸಂಖ್ಯೆ ಎರಡು ಲಕ್ಷಕ್ಕೂ ಅಧಿಕ

Union minister Piyush Goyal's X post on Indian startups scene: ಭಾರತದಲ್ಲಿ ಈ ವರ್ಷ (2025) ಶುರುವಾಗಿರುವ ಸ್ಟಾರ್ಟಪ್​ಗಳ ಸಂಖ್ಯೆ 44,000ಕ್ಕೂ ಅಧಿಕ ಎನ್ನುವ ಮಾಹಿತಿ ಇದೆ. ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ನೀಡಿರುವ ಮಾಹಿತಿ ಪ್ರಕಾರ ಈವರೆಗೆ ನೊಂದಾಯಿತವಾದ ಸ್ಟಾರ್ಟಪ್​ಗಳು ಎರಡು ಲಕ್ಷಕ್ಕೂ ಅಧಿಕ ಇದೆ. ಸರ್ಕಾರದ ವಿವಿಧ ಕ್ರಮಗಳಿಂದ ಬಹಳ ಆರೋಗ್ಯಯುತವಾದ ಸ್ಟಾರ್ಟಪ್ ಇಕೋಸಿಸ್ಟಂ ಹೇಗೆ ಬೆಳೆದಿದೆ ಎನ್ನುವುದನ್ನು ಸಚಿವರು ವಿವರಿಸಿದ್ದಾರೆ.

Indian startups: 2025ರಲ್ಲಿ 44,000 ಹೊಸ ಸ್ಟಾರ್ಟಪ್​ಗಳು; ಮಾನ್ಯ ಪಡೆದ ನವೋದ್ದಿಮೆಗಳ ಸಂಖ್ಯೆ ಎರಡು ಲಕ್ಷಕ್ಕೂ ಅಧಿಕ
ಸ್ಟಾರ್ಟಪ್

Updated on: Dec 15, 2025 | 5:22 PM

ನವದೆಹಲಿ, ಡಿಸೆಂಬರ್ 15: ಭಾರತದಲ್ಲಿ ಸ್ಟಾರ್ಟಪ್​ಗಳು ಹುಲುಸಾಗಿ ಬೆಳೆಯುವಂತಹ ಇಕೋಸಿಸ್ಟಂ ನಿರ್ಮಾಣವಾಗಿದೆ. ವರ್ಷ ವರ್ಷವೂ ಸಾವಿರಾರು ಹೊಸ ಸ್ಟಾರ್ಟಪ್​ಗಳು ಆರಂಭವಾಗುತ್ತಿವೆ. ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ (Piyush Goyal) ತಮ್ಮ ಎಕ್ಸ್​ನಲ್ಲಿ ಹಾಕಿರುವ ಪೋಸ್ಟ್ ಪ್ರಕಾರ, ಭಾರತದಲ್ಲಿ ಮಾನ್ಯಗೊಂಡಿರುವ ಸ್ಟಾರ್ಟಪ್​ಗಳ ಸಂಖ್ಯೆ ಎರಡು ಲಕ್ಷ ಗಡಿ ದಾಟಿದೆ. ಸರ್ಕಾರದಿಂದ ಮಾನ್ಯತೆ ಪಡೆದಿರುವ ಸ್ಟಾರ್ಟಪ್​ಗಳ ಪ್ರಮಾಣವೇ ಇಷ್ಟಿರುವುದು ಗಮನಾರ್ಹ.

2025ರಲ್ಲಿ 44,000ಕ್ಕೂ ಅಧಿಕ ಸ್ಟಾರ್ಟಪ್​ಗಳು ನೊಂದಾವಣಿ ಆಗಿವೆ. ಸ್ಟಾರ್ಟಪ್ ಇಂಡಿಯಾ ಯೋಜನೆ ಆರಂಭಗೊಂಡಾಗಿನಿಂದ ಯಾವುದೇ ವರ್ಷದಲ್ಲಿ ಕಂಡ ಗರಿಷ್ಠ ಸ್ಟಾರ್ಟಪ್ ಸಂಖ್ಯೆ ಇದಾಗಿದೆ. ಭಾರತದ ಸ್ಟಾರ್ಟಪ್ ಇಕೋಸಿಸ್ಟಂನಲ್ಲಿ ಮಹತ್ತರವಾಗಿರುವ ಕೆಲ ಅಂಶಗಳನ್ನು ಪೀಯೂಶ್ ಗೋಯಲ್ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ. ಅವುಗಳ ಪಟ್ಟಿ ಇಲ್ಲಿದೆ:

ಇದನ್ನೂ ಓದಿ: ಎಫ್​ಡಿ, ಸಾಲ, ಷೇರು, ಚಿನ್ನ, ವಿಮೆ, ಸೇವಿಂಗ್ಸ್ ಕುರಿತು ಈ ತಪ್ಪು ಅಭಿಪ್ರಾಯ ನಿಮಗಿದೆಯಾ? ಈಗಲೇ ಸರಿಪಡಿಸಿಕೊಳ್ಳಿ

  • ಸ್ಟಾರ್ಟಪ್ಸ್ ಸ್ಕೀಮ್​ನ ಫಂಡ್ ಆಫ್ ಫಂಡ್ಸ್ ಅಡಿಯಲ್ಲಿ 1,350ಕ್ಕೂ ಅಧಿಕ ಸ್ಟಾರ್ಟಪ್​ಗಳಲ್ಲಿ ಆಲ್ಟರ್ನೇಟಿವ್ ಇನ್ವೆಸ್ಟ್​ಮೆಂಟ್ ಫಂಡ್​ಗಳು 25,320 ಕೋಟಿ ರೂಗೂ ಅಧಿಕ ಮೊತ್ತದ ಬಂಡವಾಳ ಹೂಡಿಕೆ ಮಾಡಿವೆ.
  • ಕ್ರೆಡಿಟ್ ಗ್ಯಾರಂಟಿ ಸ್ಕೀಮ್ ಅಡಿಯಲ್ಲಿ ಸ್ಟಾರ್ಟಪ್​ಗಳಿಗೆ 775 ಕೋಟಿ ರೂ ದೇಣಿಗೆ ಕೊಡಲಾಗಿದೆ.
  • ಸ್ಟಾರ್ಟಪ್ ಇಂಡಿಯಾ ಸೀಡ್ ಫಂಡ್ ಸ್ಕೀಮ್ ಅಡಿಯಲ್ಲಿ ಇನ್​ಕುಬೇಟರ್​ಗಳು 3,200ಕ್ಕೂ ಅಧಿಕ ಸ್ಟಾರ್ಟಪ್​ಗಳಿಗೆ 585 ಕೋಟಿ ರೂ ಅನುದಾನಕ್ಕೆ ಅನುಮೋದನೆ ಕೊಟ್ಟಿದ್ದಾರೆ.
  • ಸ್ಟಾರ್ಟಪ್​ಗಳಿಂದ ಸಲ್ಲಿಕೆಯಾಗಿರುವ ಹೊಸ ಪೇಟೆಂಟ್ ಅರ್ಜಿಗಳು 16,400ಕ್ಕೂ ಅಧಿಕ.

ಇದನ್ನೂ ಓದಿ: ವಿಐಗೆ ಸರ್ಕಾರದಿಂದ ನೆರವಿನ ಹಸ್ತ?; ಎಜಿಆರ್ ಬಾಕಿ ಪಾವತಿಯಲ್ಲಿ ಹಲವು ರಿಯಾಯಿತಿ?

‘ಹೊಸ ವರ್ಷ ಪ್ರವೇಶಿಸಲು ಸಜ್ಜಾಗುತ್ತಿರುವಂತೆಯೇ, ನಾವೀನ್ಯತೆ ಮತ್ತು ಉದ್ದಿಮೆಗಾರಿಕೆಯ ಶಕ್ತಿಯು ಎಲ್ಲರಿಗೂ ಅವಕಾಶ, ಸಮೃದ್ಧಿ ಮತ್ತು ಬೆಳವಣಿಗೆಯನ್ನು ತರುತ್ತದೆ’ ಎಂದು ಪಿಯೂಶ್ ಗೋಯಲ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ