
ನವದೆಹಲಿ, ಡಿಸೆಂಬರ್ 9: ಭಾರತದಲ್ಲಿ ನವೆಂಬರ್ ತಿಂಗಳು ವಾಹನೋದ್ಯಮಕ್ಕೆ (Automobile industry) ಪಾಸಿಟಿವ್ ಆಗಿದೆ. ಆ ತಿಂಗಳು ಭಾರತದಲ್ಲಿ ಒಟ್ಟಾರೆ ವಾಹನಗಳ ಮಾರಾಟದಲ್ಲಿ (vehicles sales) ಶೇ. 2.14ರಷ್ಟು ಹೆಚ್ಚಳ ಆಗಿದೆ. ದ್ವಿಚಕ್ರ ವಾಹನಗಳ ಸೇಲ್ಸ್ ಕಡಿಮೆ ಆಗಿದ್ದಾಗ್ಯೂ ಒಟ್ಟಾರೆ ಮಾರಾಟ ಏರಿಕೆ ಆಗಿರುವುದು ಗಮನಾರ್ಹ. ಕಾರು, ಬಸ್ಸು ಮೊದಲಾದ ಪ್ಯಾಸೆಂಜರ್ ಮತ್ತು ಕಮರ್ಷಿಯಲ್ ವಾಹನಗಳಿಗೆ ಬೇಡಿಕೆ ಹೆಚ್ಚಿದೆ. ವಾಹನಗಳ ಮೇಲೆ ಜಿಎಸ್ಟಿ ದರವನ್ನು ಕಡಿಮೆಗೊಳಿಸಿದರ ಪ್ರತಿಫಲ ಇದು ಎಂದೆನ್ನಲಾಗುತ್ತಿದೆ. ಡೀಲರ್ಗಳ ಪ್ರಕಾರ, ಇದೇ ಪಾಸಿಟಿವ್ ಟ್ರೆಂಡ್ ಡಿಸೆಂಬರ್ನಲ್ಲೂ ಮುಂದುವರಿಯಲಿದೆ.
ಅಕ್ಟೋಬರ್ ತಿಂಗಳವರೆಗೆ ಭಾರತದಲ್ಲಿ ಹಬ್ಬದ ಋತು ಇದೆ. ಭರ್ಜರಿ ಆಫರ್ಗಳ ಕಾರಣ ವಾಹನಗಳ ಮಾರಾಟವೂ ಭರ್ಜರಿಯಾಗಿಯೇ ಇರುತ್ತದೆ. ಆದರೆ, ನವೆಂಬರ್ನಲ್ಲಿ ಮಾರಾಟ ಸ್ವಲ್ಪ ಕುಂಠಿತಗೊಳ್ಳುತ್ತದೆ. ಆದರೆ, ಈ ಬಾರಿ ವಾಹನಗಳ ಮಾರಾಟ ಹೆಚ್ಚಿರುವುದು ಗಮನಾರ್ಹ.
ಸೆಪ್ಟೆಂಬರ್ ಕೊನೆಯಲ್ಲಿ ವಾಹನಗಳ ಮೇಲಿನ ಜಿಎಸ್ಟಿ ದರಗಳನ್ನು ಸರ್ಕಾರ ಪರಿಷ್ಕರಿಸಿತ್ತು. ಸಣ್ಣ ಕಾರುಗಳ ಮೇಲೆ ಜಿಎಸ್ಟಿಯನ್ನು ಶೇ. 28ರಿಂದ ಶೇ. 18ಕ್ಕೆ ಇಳಿಸಲಾಯಿತು. 1,500 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ ಇರುವ ಎಸ್ಯುವಿಗಳ ಮೇಲಿನ ಜಿಎಸ್ಟಿಯನ್ನು ಶೇ. 50ರಿಂದ ಶೇ. 40ಕ್ಕೆ ಇಳಿಸಲಾಗಿತ್ತು.
ಇದನ್ನೂ ಓದಿ: ಮನೆಯಲ್ಲಿ ತಯಾರಿಸುವ ಸಸ್ಯಾಹಾರ, ಮಾಂಸಾಹಾರ ಅಡುಗೆ ವೆಚ್ಚದಲ್ಲಿ ಇಳಿಕೆ; ತರಕಾರಿ, ಕೋಳಿ ಬೆಲೆ ಇಳಿಕೆ ಪರಿಣಾಮ
ಇದರ ಪರಿಣಾಮವಾಗಿ ಅಕ್ಟೋಬರ್ ತಿಂಗಳಲ್ಲಿ ವಾಹನಗಳ ರೀಟೇಲ್ ಮಾರಾಟದಲ್ಲಿ ದಾಖಲೆಯ ಶೇ. 40.5ರಷ್ಟು ಏರಿಕೆ ಆಗಿದೆ. ತೆರಿಗೆ ಕಡಿತದ ಜೊತೆಗೆ ಫೆಸ್ಟಿವಲ್ ಸೀಸಲ್ ಇದ್ದದ್ದೂ ಕೂಡ ಅಕ್ಟೋಬರ್ನಲ್ಲಿ ವಾಹನ ಮಾರಾಟಕ್ಕೆ ಧಮಾಕ ಸಿಕ್ಕಿದೆ.
ನವೆಂಬರ್ ತಿಂಗಳಲ್ಲಿ ಒಟ್ಟಾರೆ ವಾಹನಗಳ ರೀಟೇಲ್ ಮಾರಾಟ ಶೇ. 2.14ರಷ್ಟು ಏರಿಕೆ ಆಗಿದೆ. ಆದರೆ, ಈ ಅವಧಿಯಲ್ಲಿ ದ್ವಿಚಕ್ರ ವಾಹನಗಳ ಸೇಲ್ಸ್ ಶೇ. 3.1ರಷ್ಟು ಕಡಿಮೆ ಆಗಿದೆ. ಭಾರತದ ವಾಹನ ಮಾರಾಟದಲ್ಲಿ ಮುಕ್ಕಾಲು ಪಾಲು ದ್ವಿಚಕ್ರ ವಾಹನಗಳೇ ಇರುತ್ತವೆ. ಆದಾಗ್ಯೂ ಒಟ್ಟಾರೆ ವಾಹನ ಮಾರಾಟ ಹೆಚ್ಚಿರುವುದು ಗಮನಾರ್ಹ.
ಇದನ್ನೂ ಓದಿ: ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ತಯಾರಕರಲ್ಲಿ ಭಾರತದ ಮೂರು ಕಂಪನಿಗಳು
ಆಟೊಮೊಬೈಲ್ ಡೀಲರ್ಗಳ ಸಂಘಟನೆಯಾದ ಫಾಡಾ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ನವೆಂಬರ್ನಲ್ಲಿ 33 ಲಕ್ಷ ಹೊಸ ವಾಹನಗಳು ನೊಂದಾವಣಿ ಆಗಿವೆ. ಪ್ಯಾಸೆಂಜರ್ ವಾಹನಗಳ ಸೇಲ್ಸ್ ಶೇ. 19.7ರಷ್ಟು ಏರಿಕೆ ಆಗಿದೆ. ಕಮರ್ಷಿಯಲ್ ವಾಹನಗಳ ಮಾರಾಟ ಶೇ. 19.94 ಮತ್ತು ಟ್ರಾಕ್ಟರ್ಗಳ ಮಾರಾಟ ಶೇ. 56.55ರಷ್ಟು ಏರಿಕೆ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ